Slide
Slide
Slide
previous arrow
next arrow

ಅನಧೀಕೃತ ಬಾರ್ & ರೆಸ್ಟೋರೆಂಟ್ ಸ್ಥಗಿತಕ್ಕೆ ಆಗ್ರಹ

300x250 AD

ಯಲ್ಲಾಪುರ: ಪ.ಪಂ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿ 63 ರ ಪಕ್ಕ, ಗಾಂಧಿ ಚೌಕದ ಬಳಿ ಸ.ನಂ 477 1ಅ ಜಿ.ಆರ್.2 ಗೆ ಸುಳ್ಳು ದಾಖಲೆ ಆಧರಿಸಿ ನೀಡಿದ ನಮೂನೆ 3 ನ್ನು ರದ್ದುಪಡಿಸಿ, ಅನಧಿಕೃತವಾಗಿ ನಡೆಯುತ್ತಿರುವ ಸೆವೆನ್ ಬಾರ್ & ರೆಸ್ಟೊರೆಂಟನ್ನು ಸ್ಥಗಿತಗೊಳಿಸಬೇಕೆಂದು ಸಾರ್ವಜನಿಕ ಸೇವಾ ಕೇಂದ್ರದ ಮುಖ್ಯಸ್ಥ ಎಂ.ಜಿ.ಭಟ್ಟ ಆಗ್ರಹಿಸಿದರು.

ಅವರು ಈ ಕುರಿತು ಸೋಮವಾರ ಸುದ್ದಿಗೋಷ್ಠಿಯಲ್ಲಿ ದಾಖಲೆ ಸಹಿತ ಮಾಹಿತಿ ನೀಡಿ, ಭ್ರಷ್ಟಾಚಾರದಲ್ಲಿ ಭಾಗಿಯಾದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಲೋಕಾಯುಕ್ತಕ್ಕೆ ದೂರು ನೀಡಿರುವುದಾಗಿ ತಿಳಿಸಿದರು. ಪಹಣಿ ಪತ್ರಿಕೆ ಇಲ್ಲದ ಸ.ನಂ 477 1ಅ ಜಿ.ಆರ್.2 ಗೆ ನಮೂನೆ 3 ನೀಡಲಾಗಿದೆ. ಈ ದಾಖಲೆಯನ್ನೇ ಆಧರಿಸಿ ಕಟ್ಟಡ ನವೀಕರಿಸಿ, ಬಾರ್ ಮತ್ತು ರೆಸ್ಟೋರೆಂಟ್ ಗೆ ಅನುಮತಿ ಪಡೆದು ನಡೆಸಲಾಗುತ್ತಿದೆ. ಪಹಣಿ ಪತ್ರಿಕೆ ಇಲ್ಲದ ಜಾಗಕ್ಕೆ ನಮೂನೆ 3 ನೀಡಿರುವ ಬಗ್ಗೆ ಮಾಹಿತಿ ಹಕ್ಕಿನಲ್ಲಿ ಕೇಳಿದಾಗ, ಮುಖ್ಯಾಧಿಕಾರಿಗಳು ಇದಕ್ಕೆ ಪಹಣಿ, ಮುಟೇಶನ್ ಎಂಟ್ರಿ, ಹಾತ್ ನಕಾಶೆ ನೀಡಿಲ್ಲ ಎಂದು ಹಿಂಬರಹ ನೀಡಿದರೂ, ನಮೂನೆ 3 ರದ್ದುಪಡಿಸಿಲ್ಲ ಎಂದರು.

300x250 AD

ಲೋಕೋಪಯೋಗಿ ಇಲಾಖೆಯ ಶಿರಸಿ ಕಾರ್ಯನಿರ್ವಾಹಕ ಇಂಜನಿಯರ್ ಅವರು, 70 ವರ್ಷ ಹಳೆಯದಾದ ಕಟ್ಟಡ ಕಟ್ಟಡ 478 1 ಅ ಜಿ.ಆರ್ ದಲ್ಲಿದ್ದು, ಫಿಟ್ನೆಸ್ ಸರ್ಟಿಫಿಕೆಟ್ ನೀಡಿದ್ದು ವಿಚಿತ್ರವಾಗಿದೆ. 477 ರಲ್ಲಿ ಬಾರ್ ಮತ್ತು ರೆಸ್ಟೋರೆಂಟ್ ನಡೆಸುವ ಕಟ್ಟಡಕ್ಕೆ 478 ಸ.ನಂನ ಕಟ್ಟಡದ ಫಿಟ್ನೆಸ್ ಸರ್ಟಿಫಿಕೆಟ್ ನೀಡುವ ಮೂಲಕ ಅಧಿಕಾರಿಗಳು ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ. ರಾಷ್ಟ್ರೀಯ ಹೆದ್ದಾರಿಯಿಂದ 40 ಮೀ.ಒಳಗೆ ಬಾರ್ ಮತ್ತು ರೆಸ್ಟೋರೆಂಟ್ ಇರಬಾರದೆಂಬ ನಿಯಮವಿದ್ದರೂ, ಕೇವಲ 13.6 ಮೀ ದೂರದಲ್ಲಿ ಅನುಮತಿ ನೀಡುವ ಮೂಲಕ ರಾಷ್ಟ್ರೀಯ ಹೆದ್ದಾರಿ ಇಲಾಖೆಯವರೂ ಈ ಭ್ರಷ್ಟಾಚಾರದಲ್ಲಿ ಶಾಮೀಲಾಗಿದ್ದಾರೆ ಎಂದು ಆರೋಪಿಸಿದರು.
ಕ್ರಿಮಿನಲ್ ಪ್ರಕರಣ ಇದ್ದವರಿಗೆ ಬಾರ್ ಮತ್ತು ರೆಸ್ಟೋರೆಂಟ್ ಗೆ ಅನುಮತಿ ನೀಡಬಾರದೆಂಬ ನಿಯಮವಿದೆ. ಆದರೆ ಸೆವೆನ್ ಬಾರ್ ಮತ್ತು ರೆಸ್ಟೊರೆಂಟ್ ಮಾಲೀಕ ಬಾಲಕೃಷ್ಣ ನಾಯಕ ಅವರ ವಿರುದ್ಧ ಹುಬ್ಬಳ್ಳಿಯಲ್ಲಿ ಕ್ರಿಮಿನಲ್ ಪ್ರಕರಣ ಇದ್ದರೂ ಪೊಲೀಸ್ ಇಲಾಖೆಯವರು ಅವರ ಕುರಿತು ನಿರಪೇಕ್ಷಣಾ ಪತ್ರ ನೀಡಿದ್ದಾರೆ.
ಕಂದಾಯ ಇಲಾಖೆಯ ಅಧಿಕಾರಿಗಳು ಸುಳ್ಳು ದಾಖಲೆಗಳನ್ನೇ ನಂಬಿ ಅನುನತಿ ನೀಡಿದ್ದಾರೆ. ಪಹಣಿ ಇಲ್ಲದ ಸ್ಥಳಕ್ಕೆ ವಾಣಿಜ್ಯ ಉದ್ದೇಶದ ಕಟ್ಟಡ ನಿರ್ಮಾಣಕ್ಕೆ ಪಟ್ಟಣ ಪಂಚಾಯಿತಿಯವರು ಅನುಮತಿ ನೀಡಿದ್ದಾರೆಂದು ದೂರಿದರು. ಈ ಕುರಿತು ಕ್ರಮ ಕೈಗೊಳ್ಳುವಂತರ ಕಾರವಾರದ ಯೋಜನಾ ನಿರ್ದೇಶಕರಿಗೆ ದೂರಿದ್ದು, ಅವರು ಜಿಲ್ಲಾಧಿಕಾರಿಗಳಿಂದ ಸೂಚನೆ ಬಂದರೂ ಯಾವುದೇ ಕ್ರಮ ಕೈಗೊಂಡಿಲ್ಲ.
477 1 ಅಜಿ.ಆರ್2 ಗೆ ಸರ್ವೆ ಮಾಡುವಂತೆ ಕೋರಿದಾಗ ಪ.ಪಂ ಅಧಿಕಾರಿಗಳು ಅದನ್ನು ಬಿಟ್ಟು, 477 1 ಅ ಜಿ.ಆರ್ ಗೆ ಸರ್ವೆ ಮಾಡಲು ಸರ್ವೆ ಇಲಾಖೆಗೆ ಪತ್ರ ನೀಡುವ ಮೂಲಕ ನುಣುಚಿಕೊಳ್ಳುವ ಯತ್ನ ನಡೆಸಿದ್ದಾರೆ. ಈ ಬಗೆಗೆ ಕೇಳಿದರೆ ಸಬೂಬು ಹೇಳುತ್ತಿದ್ದಾರೆ. ಅಬಕಾರಿ ಇಲಾಖೆಯ ಅಧಿಕಾರಿಗಳು ಬಾರ್ ಗೆ ನೀಡಿದ ಅನುಮತಿ ರದ್ದುಪಡಿಸಲು ವಿನಂತಿಸಿದಾಗ ನಮೂನೆ 3 ರದ್ದುಪಡಿಸಿದ ದಾಖಲೆ ನೀಡುವಂತೆ ಕೇಳುತ್ತಿದ್ದಾರೆ. ಇದರಿಂದ ಅವರೂ ಈ ಭ್ರಷ್ಟಾಚಾರದಲ್ಲಿ ಭಾಗಿಯಾಗಿರುವುದು ಸ್ಪಷ್ಟವಾಗಿದೆ ಎಂದು ವಿವರಿಸಿದರು.
ಆರ್.ಟಿ.ಐ ಕಾರ್ಯಕರ್ತ ಧೀರಜ ತಿನೆಕರ್ ಮಾತನಾಡಿ, ಈ ಭ್ರಷ್ಟಾಚಾರದಲ್ಲಿ ಭಾಗಿಯಾದ ಯೋಜನಾ ನಿರ್ದೇಶಕಿ ಸ್ಟೆಲ್ಲಾ ವರ್ಗೀಸ್, ಪ.ಪಂನ ಈ ಹಿಂದಿನ 3 ಮುಖ್ಯಾಧಿಕಾರಿಗಳಾದ ಮಹೇಂದ್ರ ತಿಮ್ಮಾನಿ, ಅರುಣ ನಾಯ್ಕ, ಸುನೀಲ ಗಾವಡೆ, ಹಾಲಿ ಮುಖ್ಯಾಧಿಕಾರಿ ಜ್ಯೋತಿ ಉಪ್ಪಾರ, ತೆರಿಗೆ ನಿರೀಕ್ಷಕ ಶ್ರೀನಿವಾಸ ಗುಂಡು, ಇದಕ್ಕೆ ಅನುಮತಿ ನೀಡಿದ ಅಬಕಾರಿ ನಿರೀಕ್ಷಕ, ತಹಸೀಲ್ದಾರ ಸೇರಿದಂತೆ 7 ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಲೋಕಾಯುಕ್ತಕ್ಕೆ ದೂರು ನೀಡಿದ್ದೇವೆ ಎಂದರು.

Share This
300x250 AD
300x250 AD
300x250 AD
Back to top