Slide
Slide
Slide
previous arrow
next arrow

ದೀಪಕ್ ದೊಡ್ಡೂರು ಹೇಳಿಕೆಗೆ ಬಿಜೆಪಿ ತಿರುಗೇಟು

300x250 AD

ಶಿರಸಿ: ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದೀಪಕ್ ಹೆಗಡೆ ದೊಡ್ಡೂರು ಅವರು ಮಾಜಿ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಕುರಿತು ಪತ್ರಿಕೆಗಳಲ್ಲಿ ನೀಡಿದ ಹೇಳಿಕೆ ನೋಡಿದರೆ ಭೂತದ ಬಾಯಲ್ಲಿ ಭಗವದ್ಗೀತೆ ಕೇಳಿದಂತಿದೆ ಎಂದು ಬಿಜೆಪಿ ಉ.ಕ. ಜಿಲ್ಲಾ ಸಹಕಾರ ಪ್ರಕೋಷ್ಠ ಸಂಚಾಲಕ ಆರ್.ವಿ. ಹೆಗಡೆ ಚಿಪಗಿ ಹೇಳಿದ್ದಾರೆ.

ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ದೀಪಕ್ ದೊಡ್ಡೂರು ಸ್ವತಃ ಹೇಳಿಕೊಂಡಂತೆ ಟಿಎಸ್ಎಸ್ ಅವ್ಯವಹಾರದಲ್ಲಿ ತಾನೂ ಒಬ್ಬ ಆರೋಪಿ. ಅವರು ನಿರಪರಾಧಿಯಾದ ನಂತರ ಈ ಹೇಳಿಕೆ ನೀಡಿದ್ದರೆ ಅದಕ್ಕೆ ಬೆಲೆ ಇರುತ್ತಿತ್ತು. ಅವರ ಹೇಳಿಕೆಗೆ ಪ್ರತಿ ಹೇಳಿಕೆ ನೀಡಬೇಕೆಂದೋ ಜನರ ಗಮನ ಬೇರೆಡೆ ಸೆಳೆಯಲೋ ಈ ಹೇಳಿಕೆ ನೀಡಿರಬಹುದು. ಟಿಎಸ್ಎಸ್ ಚುನಾವಣೆಯಲ್ಲಿ, ಚುನಾವಣೆ ಘೋಷಣೆಯಾದ ಮೇಲಸ್ಟೇ ಅಭ್ಯರ್ಥಿಗಳ ಆಯ್ಕೆಯಾಗಿ ಅಧಿಕಾರವಹಿಸಿಕೊಂಡಿದ್ದು ಅದನ್ನ ವಜಾಮಾಡಿದ್ದರ ಕುರಿತು ಕಾಗೇರಿಯವರು ಅಕ್ಷೇಪಿಸಿದ್ದಾರೆಯೇ ಹೊರತು ಯಾರದೇ ಪರವಾಗಿ ನೀಡಿದ ಹೇಳಿಕೆ ಅಲ್ಲ.

ದೊಡ್ದುರು ಹೇಳಿದಂತೆ ಈ ಹಿಂದೆ ಶಾಂತಾರಾಮ ಹೆಗಡೆಯವರು ಅಧ್ಯಕ್ಷರಾಗಿದ್ದಾಗ ಸೆ.64 ವಿಚಾರಣೆ ನಡೆದ ಬಗ್ಗೆ ಪ್ರಸ್ತಾಪಿಸಿದ್ದಾರೆ. ಆಗಲೂ ಸಹ ಸಹಕಾರಿ ರಂಗದಲಿ ರಾಜಕಾರಣದ ಹಸ್ತಕ್ಷೇಪ ಆಗಬಾರದೆಂದೆ ಅವರು ‘ಕೈ ‘ ಹಾಕಲಿಲ್ಲ. ನಿಮ್ಮ ಹೇಳಿಕೆ ನೋಡಿದರೆ ನೀವಿದ್ದಾಗ ಹಸ್ತಕ್ಷೇಪಮಾಡಲಿಲ್ಲ ನಾವು ಮಾಡಿದರೆ ನಿಮಗೇಕೆ ಉರಿ ಎಂಬಂತಾಗಿದೆ.

300x250 AD

ಕಾಗೇರಿಯವರು 30 ವರ್ಷದ ಅವಧಿಯಲ್ಲಿ ಸೇಡಿನ ರಾಜಕಾರಣ ಮಾಡಿದವರಲ್ಲ. ಕಾಂಗ್ರೆಸ್ ಸರಕಾರ ಬಂದನಂತರದ ಬೆಳವಣಿಗೆ ನೋಡಿ ಜನರೇ ರೋಸಿಹೋಗಿದ್ದಾರೆ. ಇನ್ನಾದರೂ ಇಂತಹ ಹೇಳಿಕೆ ನೀಡುವುದನ್ನು ಬಿಟ್ಟು ಸಹಕಾರಿ ರಂಗ ಮುಕ್ತವಾಗಿ ಕೆಲಸ ಮಾಡಲು ಅವಕಾಶ ಕೊಡಿ ಎಂದು ಅವರು ಆಗ್ರಹಿಸಿದ್ದಾರೆ.

Share This
300x250 AD
300x250 AD
300x250 AD
Back to top