Slide
Slide
Slide
previous arrow
next arrow

ಅಭಿವ್ಯಕ್ತಿ ಕಲೆ ಬೆಳೆಸಿ, ವ್ಯಕ್ತಿತ್ವ ರೂಪಿಸುವ ಕಾರ್ಯ ಶಿಬಿರಗಳಿಂದಾಗಲಿ: ಕೋಣೆಮನೆ

300x250 AD

ಯಲ್ಲಾಪುರ : ಆಸಕ್ತಿ, ಸಮರ್ಪಣೆ ಹಾಗೂ ಬದ್ಧತೆ ಇಲ್ಲವೆಂದರೆ 17 ವರ್ಷಗಳಿಂದ ಸತತವಾಗಿ ಬೇಸಿಗೆ ಶಿಬಿರವನ್ನು ಯಶಸ್ವಿಯಾಗಿ ಆಯೋಜಿಸಿಕೊಂಡು ಬರುವುದು ಸಾಧ್ಯವಿಲ್ಲ ಎಂದು ವಿಶ್ವದರ್ಶನ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಹರಿಪ್ರಕಾಶ ಕೋಣೆಮನೆ ಅಭಿಪ್ರಾಯಪಟ್ಟರು.

ಶನಿವಾರ ಸಂಜೆ ಪಟ್ಟಣದ ಗಾಂಧಿ ಕುಟೀರದಲ್ಲಿ ರಂಗಸಹ್ಯಾದ್ರಿ ಬಳಗದ ವತಿಯಿಂದ ಹಮ್ಮಿಕೊಂಡ ಮಕ್ಕಳ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಶಿಬಿರವನ್ನು ನಡೆಸುವುದು ಸವಾಲಿನ ಕೆಲಸ. ಮಕ್ಕಳು ಜೀವನದಲ್ಲಿ ಯಾವ ಉದ್ಯೋಗವನ್ನು ಆರಿಸುತ್ತಾರೆ ಎಂಬುದು ಮುಖ್ಯವಲ್ಲ. ಬದಲಾಗಿ ನಿಮ್ಮ ಕುಟುಂಬದ ಸಂಸ್ಕೃತಿ-ಸಂಸ್ಕಾರವನ್ನು ಉಳಿಸುವ, ಮನೆತನದ ಹಾಗೂ ಊರಿನ ಹೆಸರನ್ನು ಉಳಿಸುವ ಉತ್ತಮ ಪ್ರಜೆಯಾಗಬೇಕು. ಅಂತಹ ಅಭಿವ್ಯಕ್ತಿ ಕಲೆಗಳನ್ನು ಬೆಳೆಸುವ ಚಟುವಟಿಕೆಗಳು ನಮ್ಮ ವ್ಯಕ್ತಿತ್ವವನ್ನು ಅರಳಿಸುತ್ತವೆ. ಆ ಕೆಲಸವನ್ನು ಇಂತಹ ಶಿಬಿರಗಳು ಮಾಡುತ್ತಿವೆ.

ಮಕ್ಕಳಿಗೆ ತಿಳುವಳಿಕೆ ಬರುವ ಮುನ್ನ ಕೇಳಿದ್ದನ್ನೆಲ್ಲ ಕೊಡಿಸುವ ಮುನ್ನ ಹಲವು ಬಾರಿ ಪಾಲಕರು ಯೋಚಿಸಬೇಕು. ಮೊಬೈಲ್ ಬಳಕೆಯಿಂದ ಮನುಷ್ಯ ದೈಹಿಕವಾಗಿ ಹಾಗೂ ಮಾನಸಿಕವಾಗಿ ಅಬಲನಾಗುತ್ತಾನೆ. ತಂತ್ರಜ್ಞಾನ ನಮ್ಮೆಲ್ಲ ಪ್ರತಿಭೆಗಳನ್ನು ಹೊಸಕಿಹಾಕುತ್ತಿದೆ. ಭಾರತದ ಭವಿಷ್ಯ ಇಂತಹ ಸಣ್ಣ ಸಣ್ಣ ಊರುಗಳಲ್ಲಿವೆ. ಪಟ್ಟಣದ ಸವಲತ್ತುಗಳನ್ನು ನಾವು ಇಲ್ಲಿನ ಮಕ್ಕಳಿಗೆ ನೀಡಿದಾಗ ಉತ್ತಮ ಭವಿಷ್ಯವನ್ನು ನಿರ್ಮಿಸಲು ಸಾಧ್ಯ. ಯಾವುದೇ ಕೆಲಸ ಮಾಡಲು ಧೈರ್ಯ ಹೊಂದಿದವರು ಜೀವನದಲ್ಲಿ ಬೆಳೆಯುತ್ತಾನೆ. ಜೀವನ ಕೌಶಲ್ಯಗಳನ್ನು ಮಕ್ಕಳಿಗೆ ಕಲಿಸುವ ಅವಶ್ಯಕತೆ ಇದೆ ಎಂದರು.

300x250 AD

ಈ ಸಂದರ್ಭದಲಿ ಪತ್ರಕರ್ತರಾದ ಟಿ.ಶಂಕರ್ ಭಟ್, ನಾಗರಾಜ ಮದ್ಗುಣಿ, ಪ್ರಮುಖರಾದ ವೆಂಕಟ್ರಮಣ ಭಟ್ ಸಹಸ್ರಳ್ಳಿ ಉಪಸ್ಥಿತರಿದ್ದರು. ರಂಗ ಸಹ್ಯಾದ್ರಿಯ ಅಧ್ಯಕ್ಷ ಡಿ.ಎನ್.ಗಾಂವ್ಕರ್ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಸುಬ್ರಾಯ ಭಟ್ ಆನೆಜಡ್ಡಿ ನಿರ್ವಹಿಸಿದರು. ಸುಮಂಗಲಾ ಜೋಶಿ ವಂದಿಸಿದರು. ಇದೇ ಸಂದರ್ಭದಲ್ಲಿ ವಿವಿಧ ಸ್ಪರ್ಧೆಯಲ್ಲಿ ವಿಜೇತರಾದ ಶಿಬಿರಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ನಂತರ ಮಕ್ಕಳಿಂದ ವಿವಿಧ ರೀತಿಯ ಮನರಂಜನಾ ಕಾರ್ಯಕ್ರಮಗಳು ಜರುಗಿದವು.

Share This
300x250 AD
300x250 AD
300x250 AD
Back to top