Slide
Slide
Slide
previous arrow
next arrow

ಸಿದ್ದಾಪುರ ಡಾಲ್ಫಿನ್ ಕ್ರಿಕೆಟ್ ತಂಡಕ್ಕೆ ಪ್ರಶಸ್ತಿ

300x250 AD

ಸಿದ್ದಾಪುರ: ಸಿದ್ದಾಪುರದ ಐತಿಹಾಸಿಕ ನೆಹರು ಮೈದಾನದಲ್ಲಿ ಮೇ.26ರಂದು, ಸಿದ್ದಾಪುರ ಸ್ಪೋರ್ಟ್ಸ್ ಅಕಾಡೆಮಿ ಹಾಗೂ ಸಿದ್ದಾಪುರ ಡಾಲ್ಫಿನ್ ಕ್ರಿಕೆಟ್ ತಂಡದ ಸಂಯುಕ್ತಾಶ್ರಯದಲ್ಲಿ ಪ್ರಪ್ರಥಮವಾಗಿ 16ವರ್ಷದ ಒಳಗಿನವರ ಟಿ.20 ಲೆದರ್ ಬಾಲ್ ಕ್ರಿಕೆಟ್ ಟೂರ್ನಮೆಂಟ್‌ನಲ್ಲಿ ಸಿದ್ದಾಪುರದ ಡಾಲ್ಫಿನ್ ಕ್ರಿಕೆಟ್ ತಂಡ ವಿಜಯಶಾಲಿಯಾಗಿದೆ.

ಶಿರಸಿ ಕ್ರಿಕೆಟ್ ತಂಡದವರ 127 ರನ್‌ನ್ನು ಬೆನ್ನತ್ತಿದ ಸಿದ್ದಾಪುರ ಡಾಲ್ಫಿನ್ ತಂಡ 17 ಓವರ್‌ನಲ್ಲಿ ವಿಜಯಶಾಲಿಯಾಗಿದೆ. ಸಿದ್ದಾಪುರ ತಂಡದ ಪರವಾಗಿ ಧನುಷ್ ಎರಡು ಸಿಕ್ಸರ್ ಹಾಗೂ ಹನ್ನೊಂದು ಬೌಂಡರಿ ಮೂಲಕ 58 ರನ್ ಬಾರಿಸಿ ಅಜೇಯರಾಗಿ ವಿಜಯಶಾಲಿಯಾಗಿದ್ದಾರೆ. ಧನುಷ್ ಅವರಿಗೆ ಬೆಸ್ಟ್ ಬ್ಯಾಟ್ಸ್ಮನ್ ಪ್ರಶಸ್ತಿ ಹಾಗೂ ಶಿರಸಿಯ ಹರ್ಷಿತ್ ಅವರಿಗೆ ಬೆಸ್ಟ್ ಬೌಲರ್ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಸಿದ್ದಾಪುರ ಡಾಲ್ಫಿನ್ ಕ್ರಿಕೆಟ್ ತಂಡದ ಕೋಚರ್ ಡೊಮಿನಿಕ್ ಫರ್ನಾಂಡಿಸ್ ಹಾಗೂ ಡಾಲ್ಫಿನ್ ಕ್ರಿಕೆಟ್ ಸಂಸ್ಥೆಯ ಕಾರ್ಯದರ್ಶಿ ರಘುವೀರ್ ಅವರನ್ನು ಅಭಿನಂದಿಸಲಾಯಿತು.ಈ ಸಂದರ್ಭದಲ್ಲಿ ಸಿದ್ದಾಪುರ ಸ್ಪೋರ್ಟ್ಸ್ ಅಕಾಡೆಮಿಯ ಎಲ್ಲಾ ನಿರ್ದೇಶಕರು ಹಾಗೂ ಸದಸ್ಯರು ಉಪಸ್ಥಿತರಿದ್ದರು.

300x250 AD
Share This
300x250 AD
300x250 AD
300x250 AD
Back to top