ಯಲ್ಲಾಪುರ: ತಾಲೂಕಿನ ಉಮ್ಮಚಗಿಯ ವಿದ್ಯಾಗಣಪತಿ ದೇವಸ್ಥಾನದ ವರ್ದಂತಿ ಉತ್ಸವದ ಕಾರ್ಯಕ್ರಮದಲ್ಲಿ ವಿದ್ಯಾ ಗಣಪತಿ ಸಭಾಭವನದಲ್ಲಿ ಉಮ್ಮಚಗಿಯ ಆರತಿ ಮೋಹನ ಇವರ ನಿರ್ದೇಶನದಲ್ಲಿ ‘ಬಾಲ ಗಣೇಶ’ ಎಂಬ ಪೌರಾಣಿಕ ನಾಟಕ ಪ್ರದರ್ಶನಗೊಂಡು ಜನರಿಂದ ಉತ್ತಮ ಪ್ರತಿಕ್ರಿಯೆ ಪಡೆಯಿತು.
ಪಾತ್ರಧಾರಿಗಳಾಗಿ ಉಮ್ಮಚಗಿಯ ಬಾಲಕಲಾವಿದರಾದ ಕುಮಾರ ತನ್ಮಯ್ (ಶಿವ) ಕುಮಾರಿ ರಿತಿಶಾ (ಪಾರ್ವತಿ) ಕುಮಾರ ರೇಯಾಂಶ (ಬಾಲ ಗಣೇಶ) ಕುಮಾರ ವಿಶಾಲ (ವಿಷ್ಣು) ಕುಮಾರಿ ಪ್ರಗತಿ ( ಬೃಹ್ಮ) ಕುಮಾರಿ ತನುಶ್ರೀ ( ಲಕ್ಷ್ಮೀ) ಕುಮಾರ ಗಮನ (ನಂದಿ) ಕುಮಾರ ತನುಷ್ (ಶಿವ ಗಣ) ಇವರುಗಳು ತಮ್ಮ ನಟನೆಯಿಂದ ಸಾರ್ವಜನಿಕರನ್ನು ರಂಜಿಸಿದರು. ಕೊನೆಯದಾಗಿ ವಿದ್ಯಾಗಣಪತಿ ದೇವಸ್ಥಾನದ ಅಧ್ಯಕ್ಷರಾದ ಕುಪ್ಪಯ್ಯ ಪೂಜಾರಿ ಇವರು ಬಾಲ ಕಲಾವಿದರಿಗೆ ಮತ್ತು ಮಕ್ಕಳನ್ನು ನಾಟಕಕ್ಕೆ ತಯಾರು ಮಾಡಿದ ಶ್ರೀಮತಿ ಆರತಿ ಇವರಿಗೆ ಸನ್ಮಾನಿಸಿದರು. ನಂತರ ಶಿರಸಿಯ ಕುಮಾರಿ ಸ್ನೇಹಶ್ರೀ ಹೆಗಡೆ ಕುಮಾರಿ ಸುಮಾ ಹೆಗಡೆ ಇವರಿಂದ ಕುಚುಪುಡಿ ಮತ್ತು ರಿಂಗ್ ನೃತ್ಯ ಹಾಗೂ ಚಿತ್ರ ನೃತ್ಯ ಜನರ ಮನಸೂರೆಗೊಂಡಿತ್ತು.