ಸಿದ್ದಾಪುರ: ಪಟ್ಟಣದ ಜ್ಞಾನ ವಿಕಾಸ ಸಂಯೋಜಕ ಕ್ರಿಯಾಯೋಜನ ಕಾರ್ಯಾಲಯದಲ್ಲಿ ನಡೆದ ಸಿದ್ಧಾಪುರ ತಾಲೂಕಿನ ಜ್ಞಾನವಿಕಾಸ ಸೇವಾ ಪ್ರತಿನಿಧಿಗಳ ಕ್ರಿಯಾಯೋಜನೆ ಸಭೆಯು ಮೇ.23ರಂದು ನಡೆಯಿತು.
ಜಿಲ್ಲಾ ನಿರ್ದೇಶಕ ಬಾಬು ನಾಯ್ಕ್ ಮಾತನಾಡಿ 2024-25 ನೇ ಸಾಲಿನ ಕಾರ್ಯಕ್ರಮದ ಅನುಷ್ಠಾನ ಹಾಜರಾತಿ ಸುಧಾರಣೆ, ಕೇಂದ್ರದಲ್ಲಿ ಐವತ್ತು ಸದಸ್ಯರು ಇರುವಂತೆ ಸದಸ್ಯರ ಅಥವಾ ಸಂಘವನ್ನು ಸೇರ್ಪಡೆ ಮಾಡುವುದು ನಮ್ಮ ಉದ್ದೇಶ ಎಂದು ಅಭಿಪ್ರಾಯಪಟ್ಟರು .ಕೇಂದ್ರದ ಸದಸ್ಯರ ಮನೆಮನೆ ಭೇಟಿಯಲ್ಲಿ ಗಮನಿಸಬೇಕಾದ ಅಂಶಗಳನ್ನು ವಿಚಾರಗಳ ಮೂಲಕ ಚರ್ಚಿಸಿ ಪ್ರತಿ ಆರು ತಿಂಗಳಿಗೊಮ್ಮೆ ಕೇಂದ್ರದ ಆಡಿಟ್ ಮಾಡುವುದರ ಮುಖಾಂತರ ಶ್ರೇಣಿಯಲ್ಲಿ ಅಗ್ರಸ್ಥಾನ ಪಡೆಯ ಕುರಿತು ಮಾಹಿತಿ ನೀಡಿದರಲ್ಲದೆ ಎಲ್ಲಾ ಸೇವಾ ಪ್ರತಿನಿಧಿಗಳು ಕ್ರಿಯಾಶೀಲರಾಗಿ ಸಂಘಟಿತರಾಗಬೇಕು ಎಂದು ಹೇಳಿದರು.ವೇದಿಕೆಯಲ್ಲಿ ಉಪಸ್ಥಿತರಿದ್ದ ಯೋಜನಾಧಿಕಾರಿ ಗಿರೀಶ್ ಮಾತನಾಡಿ ಸಂಯೋಜಕರ ಕ್ರಿಯಾ ಯೋಜನೆಯಲ್ಲಿರುವ ಕಾರ್ಯಕ್ರಮವನ್ನು ವಿಂಗಡಣೆ ಮಾಡಿ ಮಾಹಿತಿ ನೀಡಿ ಸಂಪನ್ಮೂಲ ವ್ಯಕ್ತಿಗಳ ಬಗ್ಗೆ ಸಂಪೂರ್ಣ ವಿವರಿಸಿದರು. ಜಿಲ್ಲಾ ಸಮನ್ವಯ ಅಧಿಕಾರಿ ಮಲ್ಲಿಕಾ ಮತ್ತು ತಾಲೂಕಿನ ಸಮನ್ವಯ ಅಧಿಕಾರಿ ಲಲಿತಾ ಮೇಡಂ ಹಾಗೂ ತಾಲೂಕಿನ ಎಲ್ಲಾ ಕೇಂದ್ರದ ಸಂಯೋಜಕರು ಉಪಸ್ಥಿತರಿದ್ದರು.ಕ್ಯಾದಗಿ ಕಾರ್ಯಕ್ಷೇತ್ರದ ಮಂಜುನಾಥ ಸ್ವಾಗತಿಸಿದರು. ಬಿದ್ರಕಾನ ಕಾರ್ಯಕ್ಷೇತ್ರದ ನೇತ್ರಾವತಿ ಕಾರ್ಯಕ್ರಮ ನಿರೂಪಿಸಿದರು.ಹಾರ್ಸಿಕಟ್ಟಾ ಕಾರ್ಯಕ್ಷೇತ್ರದ ಚಂದ್ರಮತಿ ಆಭಾರ ಮನ್ನಿಸಿದರು .