ಯಲ್ಲಾಪುರ: ಇತ್ತೀಚೆಗಷ್ಟೇ ಕಾಂಗ್ರೆಸ್ ಸೇರಿದ್ದ ಯುವ ನಾಯಕ ವಿವೇಕ ಹೆಬ್ಬಾರ್ ಅವರನ್ನು ಕೆಪಿಸಿಸಿ ಸದಸ್ಯರಾಗಿ ನೇಮಕ ಮಾಡಲಾಗಿದೆ.
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಈ ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ. ಪಕ್ಷ ಸಂಘಟನೆಗೆ ಶ್ರಮಿಸುವಂತೆ ಅವರಿಗೆ ಸೂಚನೆ ನೀಡಲಾಗಿದೆ. ಈ ಕುರಿತು ಪ್ರತಿಕ್ರಿಯಿಸಿರುವ ವಿವೇಕ ಹೆಬ್ಬಾರ್, ಭರವಸೆ ಇಟ್ಟು ಮಹತ್ವದ ಕೆಪಿಸಿಸಿ ಸದಸ್ಯತ್ವ ಜವಾಬ್ದಾರಿ ನೀಡಿದ ಪಕ್ಷದ ಹಿರಿಯರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ. ಕ್ಷೇತ್ರದಾದ್ಯಂತ ಸಂಚರಿಸಿ ಹಿರಿಯರ ಮಾರ್ಗದರ್ಶನದಲ್ಲಿ, ಯುವ ಸಮೂಹದ ಪ್ರೋತ್ಸಾಹದಲ್ಲಿ, ಕಾರ್ಯಕರ್ತರೊಂದಿಗೆ ಬೆರೆತು ಪ್ರಬಲವಾಗಿ ಸಂಘಟನೆಯಲ್ಲಿ ತೊಡಗಿಕೊಳ್ಳುವುದಾಗಿ ತಿಳಿಸಿದರು.