ಮಂಗಳೂರು: ಮಂಗಳೂರಿನಿಂದ ಪ್ರಕಟವಾಗುವ ಕೊಡಿಯಾಲ ಖಬರ ಡಾಟ್ ಕಾಮ್ ವತಿಯಿಂದ ನೀಡಲಾದ ಸಾರಸ್ವತ ಕೊಂಕಣಿ ಪುರಸ್ಕಾರಗಳನ್ನು ಮೇ 19,ರಂದು ಮಂಗಳೂರಿನ ಕದ್ರಿ ಮಲ್ಲಿಕಟ್ಟೆಯ ಲಯನ್ಸ್ ಸೇವಾ ಮಂದಿರದಲ್ಲಿ ಪ್ರದಾನ ಮಾಡಲಾಯಿತು.
ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಸ್ಟ್ಯಾನಿ ಅಲ್ವಾರಿಸ್ ಮುಖ್ಯ ಅತಿಥಿಗಳಾಗಿದ್ದರು. ಟಾಟಾ ರಿಫ್ರೇಕ್ಟರಿಸ್ ಇದರ ನಿವೃತ್ತ ಆಡಳಿತ ನಿರ್ದೇಶಕ ಸಿ. ಡಿ. ಕಾಮತ ಮತ್ತು ಜಿ. ಎಸ್. ಬಿ. ಮಹಿಳಾ ವೃಂದ ಮಂಗಳೂರು ಇದರ ಅಧ್ಯಕ್ಷೆ ನಯನಾ ರಾವ್ ಗೌರವಾನ್ವಿತ ಅತಿಥಿಗಳಾಗಿದ್ದರು. ಡಾ. ಕಸ್ತೂರಿ ಮೋಹನ ಪೈ ಇವರಿಗೆ ‘ಕೊಂಕಣಿ ಸಾಹಿತ್ಯರತ್ನ ಪ್ರಶಸ್ತಿ’, ಗೀತಾ ಸಿ. ಕಿಣಿ ಇವರಿಗೆ ‘ಕೊಂಕಣಿ ಸಂಘಟನಾರತ್ನ ಪ್ರಶಸ್ತಿ’, ಮಂಗಳೂರು ಕೆ. ಎಸ್. ರಾವ್ ರಸ್ತೆಯ ‘ಎಸ್. ಎಲ್. ಶೇಟ್ ಜ್ಯುವೆಲರ್ಸ್ ಎಂಡ್ ಡೈಮಂಡ್ ಹೌಸ್’ ಇವರಿಗೆ ‘ಕೊಂಕಣಿ ಪೋಷಕರತ್ನ ಪ್ರಶಸ್ತಿ’, ಕುಂಬ್ಳೆ ನರಸಿಂಹ ಪ್ರಭು ಇವರಿಗೆ ‘ಕೊಂಕಣಿ ಉದ್ಯಮರತ್ನ ಪ್ರಶಸ್ತಿ’ ಮತ್ತು ಡಾ. ಅರವಿಂದ್ ಶ್ಯಾನುಭಾಗ ಬಾಳೇರಿ, ಕುಮಟಾ ಇವರಿಗೆ ‘ಕೊಂಕಣಿ ಯುವರತ್ನ ಪ್ರಶಸ್ತಿ’ ನೀಡಿ ಗೌರವಿಸಲಾಯಿತು. ಡಾ. ಕಸ್ತೂರಿ ಮೋಹನ ಪೈ ಇವರ ಅನುಪಸ್ಥಿತಿಯಲ್ಲಿ ಅವರ ಪತ್ನಿ ಉಷಾ ಮೋಹನ ಪೈ ಇವರು ಪ್ರಶಸ್ತಿ ಸ್ವೀಕಾರ ಮಾಡಿದರು. ಕೊಡಿಯಾಲ್ ಖಬರ ಡಾಟ್ ಕಾಮ್ ಇದರ ಸಂಪಾದಕ ವೆಂಕಟೇಶ ಬಾಳಿಗಾ ಮಾವಿನಕುರ್ವೆ ಸ್ವಾಗತಿಸಿದರು.
ಇದೇ ಸಮಾರಂಭದಲ್ಲಿ ಇತ್ತೀಚೆಗೆ ನಡೆದ ಎಸ್. ಎಸ್. ಎಲ್. ಸಿ ಪರೀಕ್ಷೆಯಲ್ಲಿ ಕೊಂಕಣಿ ವಿಷಯದಲ್ಲಿ ನೂರಕ್ಕೆ ನೂರು ಅಂಕ ಗಳಿಸಿದ ಕೆನರಾ ಹೈಸ್ಕೂಲ್ ಡೊಂಗರಕೇರಿ ಇಲ್ಲಿಯ ವಿದ್ಯಾರ್ಥಿನಿಯರಾದ ಶ್ರದ್ಧಾ ಕೆ. ಶೇಟ್ ಮತ್ತು ನಮೃತಾ ಜಿ. ನಾಯಕ ಇವರನ್ನೂ ಸನ್ಮಾನಿಸಲಾಯಿತು. ಇವರಿಗೆ ಉಷಾ ಮೋಹನ ಪೈ ಅವರು ನಗದು ಬಹುಮಾನ ನೀಡಿದರು. ಈ ವಿದ್ಯಾರ್ಥಿನಿಯರ ಶಿಕ್ಷಕಿ ಪೂರ್ಣಿಮಾ ರಾವ್ ಅವರನ್ನೂ ಗೌರವಿಸಲಾಯಿತು. ಕೆ. ಸಿ. ಪ್ರಭು ಮತ್ತು ಪಣಂಬೂರು ವಿಠೋಭಾ ಭಂಡಾರಕಾರ ಅಭಿನಂದಿಸಿದರು. ಸಹ ಸಂಪಾದಕಿ ವಿದ್ಯಾ ಬಾಳಿಗಾ ಅವರು ಧನ್ಯವಾದ ಅರ್ಪಿಸಿದರು. ಪ್ರಭಾ ಭಟ್ ಪ್ರಾರ್ಥಿಸಿದರು. ಡಾ. ಅಜೀತ್ ಕಾಮತ್, ಮಹಿಮಾ ಕಿಣಿ, ಮೇಘಾ ಪೈ, ಸೌರಬ್ ಕುಮಟಾ ಮತ್ತು ವಿಭಾ ಬಾಳಿಗಾ ನಾಯಕ ಇವರು ಸನ್ಮಾನಿತರನ್ನು ಪರಿಚಯಿಸಿದರು. ವಿಘ್ನೇಶ ಬಾಳಿಗಾ ಮತ್ತು ಸಮರ್ಥ ಭಟ್ ಸಹಕರಿಸಿದರು.