Slide
Slide
Slide
previous arrow
next arrow

ಅಧ್ಯಕ್ಷರಾಗಿ ವಸಂತ ಮುಂದುವರೆಯುತ್ತಾರೆ, ಗೊಂದಲದ ಹೇಳಿಕೆ ಬೇಡ: ಗಾಂಧೀಜಿ

300x250 AD

ಸಿದ್ದಾಪುರ: ಪಕ್ಷದ ವರಿಷ್ಠರು, ಶಾಸಕರು ಹಾಗೂ ಜಿಲ್ಲಾಧ್ಯಕ್ಷರು ಒತ್ತಾಯದ ಮೇರೆಗೆ ಸಿದ್ದಾಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿ ವಸಂತ್ ನಾಯ್ಕ ಅವರೇ ಮುಂದುವರೆಯುವುದರಲ್ಲಿ ಯಾವುದೇ ಸಂದೇಹವಿಲ್ಲ. ಈ ಕುರಿತಂತೆ ಯಾರೂ ಕೂಡ ಹೇಳಿಕೆ ನೀಡಿ ಗೊಂದಲ ಮೂಡಿಸಬೇಡಿ ಎಂದು ತಾಲೂಕಾ ಕಾಂಗ್ರೆಸ್ ಸೇವಾದಳ ಘಟಕದ ಅಧ್ಯಕ್ಷ ಗಾಂಧೀಜಿ ನಾಯ್ಕ ತಿಳಿಸಿದ್ದಾರೆ.

ಈ ಕುರಿತು ಪ್ರಕಟಣೆ ನೀಡಿ, ವಸಂತ ನಾಯ್ಕ ಅವರು ವೈಯಕ್ತಿಕ ಕಾರಣದಿಂದ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಪಕ್ಷದ ಹಿರಿಯ ಮುಖಂಡರು, ಕಾರ್ಯಕರ್ತರು ಹಾಗೂ ಅಭಿಮಾನಿಗಳ ಒತ್ತಾಯದ ಮೇರೆಗೆ ಅವರನ್ನೇ ಅಧ್ಯಕ್ಷ ಸ್ಥಾನದಲ್ಲಿ ಮುಂದುವರಿಸುವಂತೆ ರಾಜ್ಯ ನಾಯಕರು, ಜಿಲ್ಲಾಧ್ಯಕ್ಷರು, ಶಾಸಕರು ತೀರ್ಮಾನಿಸಿದ್ದಾರೆ. ಈ ಬಗ್ಗೆ ರಾಜೀನಾಮೆಗೆ ಯಾರು ಕೂಡ ಇಲ್ಲಸಲ್ಲದ ಹೇಳಿಕೆ ನೀಡಿ ಗೊಂದಲ ಮೂಡಿಸಬಾರದು.
ವಸಂತ್ ನಾಯ್ಕ ರಾಜೀನಾಮೆ ನೀಡಿದ ನಂತರದ ದಿನಗಳಲ್ಲಿ ಪಕ್ಷದ ಹಲವು ಮುಖಂಡರುಗಳು ವಿವಿಧ ರೀತಿಯ ಹೇಳಿಕೆಗಳನ್ನು ನೀಡಿದ್ದರು. ಆದರೆ ಇದು ಪಕ್ಷದ ಹಿತದೃಷ್ಟಿಯಿಂದ ಸರಿಯಲ್ಲ. ಪಕ್ಷದ ವರಿಷ್ಠರ ತೀರ್ಮಾನವನ್ನು ಒಪ್ಪಿಕೊಂಡು ಮುಂಬರುವ ಚುನಾವಣೆಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಬಹುಮತದಿಂದ ಗೆಲ್ಲಲು ಎಲ್ಲರೂ ಶ್ರಮಿಸಬೇಕಾಗಿದೆ. ಅಧ್ಯಕ್ಷ ಸ್ಥಾನದಲ್ಲಿ ವಸಂತ ನಾಯ್ಕ ಅವರು ಮುಂದುವರೆಯುತ್ತಾರೆ ಎನ್ನುವ ವಿಶ್ವಾಸವಿದೆ. ಈ ಹಿಂದಿನಂತೆ ಮುಂಬರುವ ದಿನಗಳಲ್ಲೂ ಸಹ ನಾವೆಲ್ಲರೂ ಅವರಿಗೆ ಸಹಕಾರ ನೀಡುವ ಮೂಲಕ ಒಗ್ಗಟ್ಟಿನಿಂದ ಪಕ್ಷದ ಅಭಿವೃದ್ಧಿಗೆ ಕೆಲಸ ಮಾಡೋಣ. ಮುಂದಿನ ದಿನದಲ್ಲಿ ದಿನಗಳಲ್ಲಿ ಯಾವುದೇ ಹೇಳಿಕೆಗಳನ್ನು ನೀಡುವ ಮೊದಲು ಕ್ಷೇತ್ರದ ಶಾಸಕರು, ಅಧ್ಯಕ್ಷರು ಹಾಗೂ ಪ್ರಮುಖರ ಗಮನಕ್ಕೆ ತಂದು ಮುಂದುವರೆಯೋಣ ಎಂದು ಗಾಂಧೀಜಿ ವಿನಂತಿಸಿಕೊಂಡಿದ್ದಾರೆ .

300x250 AD
Share This
300x250 AD
300x250 AD
300x250 AD
Back to top