Slide
Slide
Slide
previous arrow
next arrow

ಮೇ.21ಕ್ಕೆ ದೇವಳಮಕ್ಕಿಯಲ್ಲಿ ಉಚಿತ ಆರೋಗ್ಯ ಶಿಬಿರ

300x250 AD

ಕಾರವಾರ: ತಾಲೂಕಿನ ದೇವಳಮಕ್ಕಿಯಲ್ಲಿ ರೋಟರಿ ಕ್ಲಬ್‌ ಕಾರವಾರ ಹಾಗೂ ಕಾರವಾರ ವೈದ್ಯಕೀಯ ವಿಜ್ಞಾನಗಳ ಮಹಾವಿದ್ಯಾಲಯ ಇವುಗಳ ಜಂಟಿ ಆಶ್ರಯದಲ್ಲಿ ಮೇ 21ರಂದು ಬೃಹತ್ ಉಚಿತ ಆರೋಗ್ಯ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ.

ದೇವಳಮಕ್ಕಿಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ 1 ಗಂಟೆಯವರೆಗೆ ಈ ಶಿಬಿರ ನಡೆಯಲಿದ್ದು ಹಿರಿಯ ನೇತ್ರ ತಜ್ಞರಾದ ಡಾ. ರಮೇಶ ವೆಂಕಿಮನಿ, ಪ್ರಸೂತಿ ಮತ್ತು ಸ್ತ್ರೀ ರೋಗ ತಜ್ಞೆ ಡಾ. ಪೂಜಾ, ಜನರಲ್ ಮೆಡಿಸಿನ್ ತಜ್ಞರಾದ ಡಾ. ಪ್ರಸನ್ನ ಹಾಗೂ ಶಸ್ತ್ರ ಚಿಕಿತ್ಸೆ ತಜ್ಞರಾದ ಡಾ. ಸುಬ್ಬುಲಕ್ಷ್ಮೀ ಅವರು ಈ ಶಿಬಿರದಲ್ಲಿ ರೋಗಿಗಳನ್ನು ಪರೀಕ್ಷಿಸಲಿದ್ದಾರೆ. ಸ್ಥಳೀಯ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಈ ಶಿಬಿರದ ಪ್ರಯೋಜನವನ್ನು ಪಡೆದು ಕೊಳ್ಳುವಂತೆ ರೋಟರಿ ಕ್ಲಬ್ ಅಧ್ಯಕ್ಷ ಡಾ. ಸಮೀರಕುಮಾರ ಟಿ. ನಾಯಕ, ಕಾರ್ಯದರ್ಶಿ ಗುರುರಾಜ ವಿ. ಭಟ್, ಸಮುದಾಯ ಸೇವೆ ನಿರ್ದೇಶಕರಾದ ಗುರುದತ್ತ ಐ ಬಂಟ್ ಅವರು ಕೋರಿದ್ದಾರೆ.

300x250 AD
Share This
300x250 AD
300x250 AD
300x250 AD
Back to top