Slide
Slide
Slide
previous arrow
next arrow

ಗ್ರಾ.ಪಂ.‌ಸದಸ್ಯರಿಗೆ ಅಗೌರವ; ಮನವಿ ಸಲ್ಲಿಕೆ

300x250 AD

ಹೊನ್ನಾವರ: ಗ್ರಾ.ಪಂ.ಸದಸ್ಯರೊರ್ವರಿಗೆ ಅಗೌರವ ತೋರಿರುವುದಲ್ಲದೇ, ಸುಳ್ಳು ಪ್ರಕರಣ ದಾಖಲಿಸುವುದಾಗಿ ಬೆದರಿಸಿ, ಜೀವ ಬೆದರಿಕೆ ಹಾಕಿದ್ದಾರೆಂದು ಪಿಎಸೈ ವಿರುದ್ದ ಇಲಾಖೆಯ ಮೇಲಾಧಿಕಾರಿಗೆ ಹಾಗೂ ಜನಪ್ರತಿನಿಧಿಗಳಿಗೆ ಗ್ರಾ.ಪಂ. ಸದಸ್ಯರೊರ್ವ ಬುಧವಾರ ಹೊನ್ನಾವರ ಪೊಲೀಸ್ ಠಾಣಿಯಲ್ಲಿ ಮನವಿ ಸಲ್ಲಿಸಿದ ಘಟನೆ ವರದಿಯಾಗಿದೆ.

ಕರ್ಕಿ ಗ್ರಾಮ ಪಂಚಾಯತಿಯ ರಾಮೇಶ್ವರ ಕಂಬಿ ವಾರ್ಡಿನ ಪಂಚಾಯತ ಸದಸ್ಯನಾದ ಗಜಾನನ ನಾಯ್ಕ ನೊಂದ ಪ್ರತಿನಿಧಿಯಾಗಿದ್ದು, ತನ್ನ ವಾರ್ಡ ವ್ಯಾಪ್ತಿಯ ಶಾರದಾಗುಂಡಿ ಎಂಬಲ್ಲಿ ಅನಾದಿಕಾಲದಿಂದ ಇಡೀ ಊರಿನ ನೀರು ಮಳೆಗಾಲದಲ್ಲಿ ಹರಿದು ಹೋಗುವ ಕಾಲುವೆಯನ್ನು ಹತ್ತಿರದಲ್ಲಿ ಆಸ್ತಿ ಖರೀದಿಸಿದವರು ಮಣ್ಣು ತುಂಬಿ ಮುಚ್ಚಿ ಹಾಕುತ್ತಿದ್ದಾಗ ಸಾರ್ವಜನಿಕರ ದೂರಿನ ಹಿನ್ನಲೆ ಭೇಟಿ ನೀಡಿ ಮಣ್ಣು ಹಾಕುವುದರಿಂದ ಇಡೀ ಊರಿಗೆ ನೀರು ತುಂಬಿ ತೊಂದರೆ ಉಂಟಾಗುತ್ತದೆಂದು ಕೆಲಸವನ್ನು ಇಲ್ಲಿಗೆ ನಿಲ್ಲಿಸುವಂತೆ ಹೇಳಿದ್ದರು. ಮಾರನೇ ದಿನ ಹೊನ್ನಾವರ ಠಾಣೆಯಿಂದ ಪಿ.ಎಸ್.ಐ ಸಂತೋಷ ಕುಮಾರ ಇವರು ಠಾಣೆಗೆ ಬರುವಂತೆ ಕರೆದು, ಜನಪ್ರತಿನಿಧಿಯಾದ ಗಜಾನನ ನಾಯ್ಕ ಇವರನ್ನು ಸೌಜನ್ಯಕ್ಕೂ ಸಹ ಕುಳಿತುಕೊಳ್ಳುವಂತೆ ಹೇಳದೆ ಅಗೌರವದಿಂದ ನಡೆದುಕೊಂಡಿದ್ದು, ಪ್ರಕರಣದ ಬಗ್ಗೆ ಹೇಳಿ ನನ್ನನ್ನು ಉದ್ದೇಶಿಸಿ ನೀನೇನು ಊರಿನ ದೊಣ್ಣೆ ನಾಯಕನೋ ನಿನ್ನನ್ನು ನೋಡಿಕೊಳ್ಳುತ್ತೇನೆ. ನಿನ್ನ ಮೇಲೆ ರೌಡಿ ಶಿಟರ್ ಹಾಕುತ್ತೇನೆ ನೀನು ಈ ವಿಚಾರದಲ್ಲಿ ತಲೆ ಹಾಕಿದರೆ ನಿನ್ನ ಮೇಲೆ ಕಠಿಣ ಸುಳ್ಳು ಪ್ರಕರಣ ದಾಖಲಿಸಿ ನಿನ್ನನ್ನು ಜೈಲಿಗಟ್ಟುತ್ತೇನೆ ಎಂಬುದಾಗಿ ಉಗ್ರ ಧಮಕಿ ಹಾಕಿರುತ್ತಾರೆ. ಇದನ್ನು ಹೊರತುಪಡಿಸಿ ಬೇರೆ ಬೇರೆ ರೀತಿಯಲ್ಲಿ ಧಮಕಿ ಹಾಕಿರುತ್ತಾರೆ. ಇದರಿಂದ ಒಬ್ಬ ಜನಪ್ರತಿನಿಧಿಯಾದ ನಾನು ಸಾರ್ವಜನಿಕ ಕೆಲಸದ ಕುರಿತು ಠಾಣೆಗೆ ಹೋದಾಗ ನನಗೆ ಆದ ಅವಮಾನದಿಂದ ತೀರಾ ನೊಂದಿದ್ದು ಅಲ್ಲದೆ ಪಿ.ಎಸ್.ಐ ಯವರ ಈ ರೀತಿಯ ವರ್ತನೆಯಿಂದ ನನಗೆ ಜೀವ ಬೆದರಿಕೆ ಉಂಟಾಗಿರುತ್ತದೆ. ಸಾರ್ವಜನಿಕ ನೌಕರನಾದ ಇವರು, ತನ್ನ ಅಧಿಕಾರದ ದರ್ಪದಿಂದ ಜನಪ್ರತಿನಿಧಿಯಾದ ನನ್ನ ಮೇಲೆ ನಡೆಸಿದ ದೌರ್ಜನ್ಯದ ಬಗ್ಗೆ ಕೂಡಲೇ ತನಿಖೆ ನಡೆಸಿ ಆತನ ಮೇಲೆ ಪ್ರಕರಣ ದಾಖಲಿಸಿ, ಇಲಾಖೆಯ ಹಂತದ ತನಿಖೆ ನಡೆಸಿ, ಶಿಸ್ತು ಕ್ರಮ ಕೈಗೊಳ್ಳಬೇಕು.

300x250 AD

ಮುಂದಿನ ಹತ್ತು ದಿನದಲ್ಲಿ ಶಿಸ್ತುಕ್ರಮ ಕೈಗೊಳ್ಳದೇ ಹೊದಲ್ಲಿ ಗ್ರಾ.ಪಂ. ಸದಸ್ಯರು ಸಾರ್ವಜನಿಕರು ಠಾಣಿಯ ಎದುರು ಕುಳಿತು ಧರಣೆ ನಡೆಸುವುದಾಗಿ ಎಚ್ಚರಿಕೆಯನ್ನು ಮನವಿಯಲ್ಲಿ ಉಲ್ಲೇಖಿಸಲಾಗಿದೆ. ಪಿಐ ಸುರೇಶ ಕಂಬಾರ ಅವರ ಮೂಲಕ ಇಲಾಖೆಯ ಮೇಲಾಧಿಕಾರಿಗಳಿಗೆ , ಉಸ್ತುವಾರಿ ಸಚಿವರಾದ ಮಂಕಾಳ ವೈದ್ಯ, ಶಾಸಕ ದಿನಕರ ಶೆಟ್ಟಿ ಇವರಿಗೂ ಮನವಿ ಪ್ರತಿ ಸಲ್ಲಿಸಲಾಗಿದೆ.

Share This
300x250 AD
300x250 AD
300x250 AD
Back to top