Slide
Slide
Slide
previous arrow
next arrow

ಕೆಂದಳಿಲು ಬೇಟೆ: ಓರ್ವನ ಬಂಧನ

300x250 AD

ಹೊನ್ನಾವರ: ಅಡಿಕೆಕುಳಿ ಗ್ರಾಮದ ಅ.ಸ.ನಂ 17 ರ ಕಾಯ್ದಿಟ್ಟ ಅರಣ್ಯ ಪ್ರದೇಶವನ್ನು ಅಕ್ರಮವಾಗಿ ಪ್ರವೇಶಿಸಿ ಅನಧಿಕೃತ ನಾಡ ಬಂದೂಕಿನಿAದ ಒಂದು ಕೆಂದಳಿಲು Indian Giant Squirrel Schedule-1
(ಕೆಸಾಳ) ಬೇಟೆಯಾಡಿದ ತಾಲೂಕಿನ‌ ಅಡಿಕೆಕುಳಿ, ಹಾಲಳ್ಳಿಯ ಪ್ರವೀಣ ಧರ್ಮಾ ನಾಯ್ಕ್ ಎಂಬಾತನನ್ನು ಬಂಧಿಸಿರುವ ಘಟನೆ ನಡೆದಿದೆ.

ಉಪ ಅರಣ್ಯ ಸಂರಕ್ಷಣಾಧಿಕಾರಿ ಯೋಗೇಶ ಸಿ. ಕೆ.  ಹಾಗೂ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ  ಗಿರೀಶ ಪಿ. ಬಿ. ಮಾರ್ಗದರ್ಶನದಲ್ಲಿ ವಲಯ ಅರಣ್ಯಾಧಿಕಾರಿ ಶ್ರೀಮತಿ ಸವಿತಾ ಆರ್. ದೇವಾಡಿಗ ನೇತೃತ್ವದಲ್ಲಿ ಮಂಕಿ ವಲಯದ ಉಪವಲಯ ಅರಣ್ಯಾಧಿಕಾರಿಗಳಾದ ಶಿವಾನಂದ ಕ. ಇಂಚಲ, ಯೋಗೇಶ ಡಿ. ಮೋಗೇರ, ಮಹಾದೇವ ಮಡ್ಡಿ, ಲೋಹಿತ ನಾಯ್ಕ, ಸಂದೀಪ ಎಸ್. ಅರ್ಕಸಾಲಿ ಮತ್ತು ಗಸ್ತು ಅರಣ್ಯ ಪಾಲಕರಾದ, ಶಿವಾನಂದ ಪೂಜಾರಿ, ಸುರೇಂದ್ರನಾಥ ನಾಯ್ಕ, ಮಹಾಬಲ ಗೌಡ, ರಾಮ ನಾಯ್ಕ, ಹಾಗೂ ಅರಣ್ಯ ವೀಕ್ಷಕರಾದ ಸತೀಶ ವೈದ್ಯ, ನಾಗೇಶ ನಾಯ್ಕ ಕಾರ್ಯಾಚರಣೆಯಲ್ಲಿ ಭಾಗವಹಿಸಿ, ಅಕ್ರಮವಾಗಿ ಬಳಸಿದ ನಾಡಬಂದೂಕು, ಮದ್ದು ಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ.

300x250 AD
Share This
300x250 AD
300x250 AD
300x250 AD
Back to top