Slide
Slide
Slide
previous arrow
next arrow

ಜೂ.29ರಿಂದ ಅಳ್ವೇಕೋಡಿ ದುರ್ಗಾಪರಮೇಶ್ವರಿ ಪುನರ್ ಪ್ರತಿಷ್ಠಾ ಸುವರ್ಣ ಮಹೋತ್ಸವ

300x250 AD

ಭಟ್ಕಳ: ತಾಲೂಕಿನ ಶಿರಾಲಿ ಗ್ರಾಮದ ಅಳ್ವೇಕೋಡಿಯ ಸಮುದ್ರ ಮತ್ತು ನದಿಯ ಸಂಗಮ ತೀರದಲ್ಲಿ ವಿರಾಜಿಸುತ್ತಿರುವ, ಅತಿ ಪುರಾತನವಾದ ಜಾಗೃತ ದೇವತೆ ಶ್ರೀ ದುರ್ಗಾಪರಮೇಶ್ವರಿ ಅಮ್ಮನ ಸನ್ನಿಧಿಯಲ್ಲಿ ಶ್ರೀ ದೇವರ ಪುನರ್ ಪ್ರತಿಷ್ಠಾ ಸುವರ್ಣ ಮಹೋತ್ಸವ ಜೂನ್ ೨೯ರಿಂದ ಆರಂಭವಾಗಲಿದೆ ಎಂದು ದೇವಸ್ಥಾನದ ಅಧ್ಯಕ್ಷ ತಿಮ್ಮಪ್ಪ ಹೊನ್ನಮನೆ ಹೇಳಿದರು.

ಅವರು ಶುಕ್ರವಾರ ಅಳ್ವೇಕೋಡಿಯ ಸಾರ್ವಜನಿಕ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆ ಮಾಡಿ ಮಾತನಾಡಿದರು. ಜೂನ್ ೨೯ರಿಂದ ಜುಲೈ ೭ರವರೆಗೆ ಶ್ರೀ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠಾಧೀಶರಾದ ಶ್ರೀಮದ್ ವಿದ್ಯಾಧೀಶ ತೀರ್ಥ ಶ್ರೀಪಾದ ವಡೇರ ಸ್ವಾಮೀಜಿಯವ ಮಾರ್ಗದರ್ಶನ ಮತ್ಯು ಉಪಸ್ಥಿತಿಯಲ್ಲಿ ನೂತನ ಯಜ್ಞ ಮಂಟಪ ಉದ್ಘಾಟನೆ, ಗೋಪುರಕ್ಕೆ ತಾಮ್ರದ ಹೊದಿಕೆ, ಶಿಖರ ಕಲಶ ಪ್ರತಿಷ್ಠೆ, ಶ್ರೀ ಶತಚಂಡಿಕಾ ಹವನ, ಶ್ರೀ ಸೂಕ್ತ ಹವನ, ಶ್ರೀ ಪಂಚದುರ್ಗ ಹವನ, ಶ್ರೀ ಲಕ್ಷ ಕುಂಕುಮಾರ್ಚನೆ, ಶ್ರೀ ದುರ್ಗಾನಮಸ್ಕಾರ, ವಿವಿಧ ದಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ ಎಂದರು.

300x250 AD

ದೇವಸ್ಥಾನದ ಅರ್ಚಕ ಮುಕುಂದ ಪುರಾಣಿಕ ಮಾತನಾಡಿ ದೇವಿಯ ಸನ್ನಿಧಾನದಲ್ಲಿ ಶರಣರಾದವರಿಗೆ ಅವಳು ರಕ್ಷಿಸುತ್ತಾಳೆ. ಹಿರಿಯರು ಮುಂದಿನದ್ದು ಯೋಚಿಸಿ ಅಂದೆ ದೊಡ್ಡ ದೊಡ್ಡ ಶಿಖರಕಳಸವನ್ನು ಅಳವಡಿಸಿದ್ದರು. ಇಲ್ಲಿ ಪ್ರತಿ ದಿವಸವೂ ಇಲ್ಲಿ ಚಂಡಿಕಾಹವನ, ನಿತ್ಯ ನಿರಂತರ ಅನ್ನದಾನ ಸೇವೆ, ವೈದ್ಯಕೀಯ, ಶಿಕ್ಷಣ, ದಾರ್ಮಿಕ ಉಚಿತ ಕಲ್ಯಾಣ ಮಂಟಪವನ್ನು ನಿರ್ಮಿಸಿ ಭಕ್ತರಿಗೆ ಅನುಕೂಲ ಕಲ್ಪಸಲಾಗಿದೆ. ಇದೊಂದು ಕ್ಷೇತ್ರವಾಗಿ ನಿರ್ಮಾಣವಾಗಿದೆ ಎಂದರು. ಮಾರಿಜಾತ್ರಾ ಮಹೋತ್ಸವದ ಅಧ್ಯಕ್ಷ ರಾಮಾ ಮೊಗೇರ ಮಾತನಾಡಿ ಪ್ರತಿದಿನ ನಡೆಯುವ ಸಾಂಸ್ಕೃತಿಕ, ಮನೊರಂಜನೆ, ಭಕ್ತಿ ಲಹರಿ, ಯಕ್ಷಗಾನ, ನಾಟಕ, ಸಂಗೀತ ಸುಧೆ ಕಾರ್ಯಕ್ರಮ,ದ ವಿವರ ನೀಡಿದರು. ಕಾರ್ಯದರ್ಶಿ ನಾರಾಯಣ ದೈಮನೆ ಮಾತನಾಡಿ ಪುರಾತನ ದೇವಸ್ಥಾನದ ಇತಿಹಾಸದ ಕುರಿತು ತಿಳಿಸಿದರು.
ಈ ಸಂದರ್ಬದಲ್ಲಿ ದೇವಪ್ಪ ಮೊಗೇರ ಹನುಮಂತ ನಾಯ್ಕ, ರಾಜು ಮೊಗೇರ, ಮಂಜುನಾಥ ಕೋಡಿಹಿತ್ತಲ ಇತರರು ಇದ್ದರು.

Share This
300x250 AD
300x250 AD
300x250 AD
Back to top