Slide
Slide
Slide
previous arrow
next arrow

ಬಿದ್ರಕಾನ ಪ್ರೌಢಶಾಲೆ ʼಎʼ ಗ್ರೇಡ್ ಸಾಧನೆ

300x250 AD

ಸಿದ್ದಾಪುರ: 2023-24 ನೇ ಸಾಲಿನ ಎಸ್ಎಸ್ಎಲ್‌ಸಿ ಫಲಿತಾಂಶ ಪ್ರಕಟವಾಗಿದ್ದು ತಾಲೂಕಿನ ಬಿದ್ರಕಾನಿನ ಎಂ.ಜಿ.ಸಿ.ಎಂ. ಪ್ರೌಢಶಾಲೆ ‘ಎ’ ಗ್ರೇಡ್‌ನ ಸಾಧನೆ ಮಾಡಿದೆ. ಪ್ರೌಢಶಾಲೆಯ ಪರಿಮಾಣಾತ್ಮಕ ಫಲಿತಾಂಶ 100% ಮತ್ತು ಗುಣಾತ್ಮಕ ಫಲಿತಾಂಶ 87.52% ಆಗಿದೆ. 12 ವಿದ್ಯಾರ್ಥಿಗಳು ಅತ್ಯುನ್ನತ ದರ್ಜೆಯಲ್ಲಿ ಮತ್ತು 22 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ, 5 ವಿದ್ಯಾರ್ಥಿಗಳು ದ್ವಿತೀಯ ಮತ್ತು ಒಬ್ಬ ವಿದ್ಯಾರ್ಥಿ ತೃತೀಯ ದರ್ಜೆಯಲ್ಲಿ ಉತ್ತೀರ್ಣರಾಗಿ ಉತ್ತಮ ಫಲಿತಾಂಶವನ್ನು ನೀಡಿದ್ದಾರೆ.

ಪ್ರೌಢಶಾಲೆಗೆ ಪ್ರಥಮ ಸ್ಥಾನವನ್ನು ಸಿಂಚನಾ ಮಹಾಬಲೇಶ್ವರ ಹೆಗಡೆ ಇವಳು ಪಡೆದಿದ್ದು 625 ಕ್ಕೆ 616 ಅಂಕಗಳನ್ನು ಗಳಿಸಿ, 98.56%ಪಡೆದು, ಸಿದ್ದಾಪುರ ತಾಲೂಕಿಗೆ ನಾಲ್ಕನೇಯ ಮತ್ತು ರಾಜ್ಯಕ್ಕೆ ಹತ್ತನೇಯ ಸ್ಥಾನ ಪಡೆದಿದ್ದಾಳೆ. ದ್ವಿತೀಯ ಸ್ಥಾನವನ್ನು ಸಿಂಚನಾ ಉಮಾಕಾಂತ ಹೆಗಡೆ ಪಡೆದಿದ್ದು 605 ಅಂಕ ಗಳಿಸುವ ಮೂಲಕ 96.8% ಪಡೆದಿರುತ್ತಾಳೆ. ತೃತೀಯ ಸ್ಥಾನ ತೇಜಸ್ ಸುರೇಂದ್ರ ಹೆಗಡೆ – 601 – 96.16%, ನಾಲ್ಕನೇ ಸ್ಥಾನವನ್ನು ಭಾವನಾ ಮಾರುತಿ ಮಡಿವಾಳ 595 – 95.2 % ಮತ್ತು ಐದನೇ ಸ್ಥಾನವನ್ನು ಶ್ರೀಕೃಷ್ಣ ಗುರುನಾಥ ಹೆಗಡೆ- 590 – 94.4% ಪಡೆಯುವ ಮೂಲಕ ಪ್ರೌಢಶಾಲೆಯ ಕೀರ್ತಿಯನ್ನು ಹೆಚ್ಚಿಸಿದ್ದಾರೆ.

300x250 AD

ವಿದ್ಯಾರ್ಥಿಗಳ ಈ ಸಾಧನೆಗೆ ಶಾಲಾ ಆಡಳಿತ ಮಂಡಳಿ, ಮುಖ್ಯೋಪಾಧ್ಯಾಯರು, ಶಿಕ್ಷಕರು ಮತ್ತು ಸಿಬ್ಬಂದಿಗಳು ಹರ್ಷವ್ಯಕ್ತಪಡಿಸಿ, ವಿದ್ಯಾರ್ಥಿಗಳನ್ನು ಅಭಿನಂದಿಸಿದ್ದಾರೆ.

Share This
300x250 AD
300x250 AD
300x250 AD
Back to top