ಶಿರಸಿ: ಅಂಬಾಗಿರಿಯಲ್ಲಿ ನಿರ್ಮಾಣ ಹಂತದಲ್ಲಿರುವ ಕಾಳಿಕಾಭವಾನಿ ನೂತನ ಶಿಲಾಮಯ ದೇವಳದಲ್ಲಿ ನಡೆದ ಕಾರ್ಯಕ್ರಮದಲ್ಲಿ ‘ನಿಧಿಕುಂಭ’ವನ್ನು ವಿದ್ಯುಕ್ತವಾಗಿ ಅಳವಡಿಸಲಾಯಿತು.
ಶಿಲಾಮಯ ನಿಧಿಕುಂಭವನ್ನು ಕಳೆದ ಮೂರು ದಿನಗಳ ಹಿಂದೆ ದೇವಸ್ಥಾನದ ಕಾರ್ಯಾಲಯದಲ್ಲಿ ಧಾರ್ಮಿಕ ಕಾರ್ಯಗಳನ್ನು ನೆರವೇರಿಸಿ ಇರಿಸಲಾಗಿತ್ತು. ಅದರಲ್ಲಿ ಭಕ್ತರು ಮೊದಲೇ ಸಿದ್ದಪಡಿಸಲಾದ. ಸುವರ್ಣ ಹಾಗು ರಜತ ಬಿಲ್ಲೆಗಳನ್ನು ಹಾಕುವ ವ್ಯವಸ್ಥೆಯನ್ನು ಕೂಡ ಮಾಡಲಾಗಿತ್ತು. ಭಕ್ತಾದಿಗಳು ಆಗಮಿಸಿ ಭಕ್ತಿ ಹಾಗೂ ಶೃದ್ಧೆಯಿಂದ ಸ್ತೋತ್ರವನ್ನು ಪಠಿಸಿ ಕುಂಭನಿಧಿಯಲ್ಲಿ ಹಾಕಿದರು. ನಿನ್ನೆ ರಾತ್ರಿ ಹಾಗೂ ಇಂದು ಅಕ್ಷತ ತದಿಗೆಯ ಶುಭ ಮಹೂರ್ತದಲ್ಲಿ , ಆಗಮ ಶಾಸ್ತ್ರದ ವಿಧ್ವಾನ್ ಮುನಿಯಂಗಳ್ ತಂತ್ರಿ, ಹಾಗೂ ಇತರ ವೈದಿಕರು ನೆರವೇರಿಸಿದ ಕಾರ್ಯಗಳೊಂದಿಗೆ ನೂತನ ದೇವಾಲಯದ ತಳದಲ್ಲಿ ಅಳವಡಿಸಲಾಯಿತು. ಇದರಿಂದಾಗಿ ನೂತನ ದೇವಳದ ಮುಖ್ಯ ಘಟ್ಟ ತಲುಪಿದಂತಾಗಿದೆ.
ಈ ಸಂದರ್ಭದಲ್ಲಿ ನೂರಾರು ಭಕ್ತರು ಆಗಮಿಸಿ ಅಪರೂಪದ ದೃಶ್ಯವನ್ನು ಕಣ್ತುಂಬಿಸಿಕೊಂಡರು. ವಿವಿಧ ಸಮೀತಿಗಳ ಅಧ್ಯಕ್ಷರುಗಳು, ಪದಾಧಿಕಾರಿಗಳು, ಸದಸ್ಯರುಗಳು ಉಪಸ್ಥಿತರಿದ್ದರು. ಕಳೆದ ತಿಂಗಳು ಶ್ರೀ ಶ್ರೀ ರಾಘವೇಶ್ವರ ಸ್ವಾಮೀಜಿಗಳು ಆಗಮಿಸಿ ಶಿಲಾಮಯ ತಳಪಾಯದ ಕಾರ್ಯಕ್ಕೆ ಮಂತ್ರಾಕ್ಷತೆಯನ್ನು ಹಾಕಿ, ಆಶೀರ್ವದಿಸಿ ಚಾಲನೆಯನ್ನು ನೀಡಿದ್ದರು.