ಕಾರವಾರ: 2024-25ನೇ ಸಾಲಿಗೆ ಕಾರವಾರದ ಸರ್ಕಾರಿ ಪಾಲಿಟಿಕ್ನಿಕ್ ಪ್ರಥಮ ವರ್ಷದ ಡಿಪ್ಲೋಮಾ (ಪ್ರಥಮ ಸೆಮಿಸ್ಟರ್), ಕೋರ್ಸುಗಳ ಪ್ರವೇಶಾತಿಗಾಗಿ ಆಫ್‌ಲೆನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕರ್ನಾಟಕ ಎಸ್‌ಎಸ್‌ಎಲ್‌ಸಿ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಶೇ.35 ಅಂಕಗಳನ್ನು ಪಡೆದು ಉತ್ತೀರ್ಣರಾಗಿರಬೇಕು. ನಿಗದಿತ ಅರ್ಜಿಯ ನಮೂನೆಯನ್ನು ಸಂಸ್ಥೆಯಿಂದ ಪಡೆದು ಮೇ. 14ರೊಳಗಾಗಿ ಸಂಬಂಧಿಸಿದ ಎಲ್ಲಾ ಪ್ರಮಾಣ ಪತ್ರಗಳ ಝೇರಾಕ್ಷ್ ಪತ್ರಿತಿಯೊಂದಿಗೆ ಅರ್ಜಿ ಸಲ್ಲಿಸಬೇಕು. ಅರ್ಜಿ ಸ್ವೀಕೃತಿಗೆ ನಿಗದಿಪಡಿಸಿದ ಕೊನೆಯ ದಿನಾಂಕಕ್ಕೂ ಮೊದಲೇ ಎಲ್ಲಾ ಸೀಟುಗಳು ಭರ್ತಿಯಾದಲ್ಲಿ ಆ ನಂತರ ಯಾವುದೇ ಅಭ್ಯರ್ಥಿಗಳಿಂದ ಅರ್ಜಿಯನ್ನು ಸ್ವೀಕರಿಸುವುದಿಲ್ಲ.
ಅರ್ಜಿ ಸಲ್ಲಿಸಿದ ಅರ್ಹ ಅಭ್ಯರ್ಥಿಗಳ ಮೇರಿಟ್ ಪಟ್ಟಿಯನ್ನು ಮೇ 15 ರಂದು ಬೆಳಗ್ಗೆ 10.30 ಗಂಟೆಯ ಣಮತರ ಸಂಸ್ಥೆಯ ಸೂಚನಾ ಫಲಕದಲ್ಲಿ ಪ್ರಕಟಿಸಲಾಗುತ್ತದೆ. ಮೇ 15 ರ ಮಧ್ಯಾಹ್ನದ ನಂತರ ಮತ್ತು ಮೇ 16ರ ಸಂಜೆ 5.30 ರವರೆಗೆ ಆಫ್‌ಲೆನ್ ಕೌನ್ಸಲಿಂಗ್ ಮುಖಾಂತರ ಸೀಟ್ ಹಂಚಿಕೆ ಮಾಡಿ ಆಯ್ಕೆಯಾದ ಅಭ್ಯರ್ಥಿಗಳ ಮೂಲ ದಾಖಲೆಗಳು ಮತ್ತು ನಿಗದಿತ ಶುಲ್ಕ ಪಡೆಯಲಾಗುತ್ತದೆ.
ಪ್ರವೇಶಾತಿಗೆ ಸಂಬಂಧಿಸಿದಂತೆ ಶುಲ್ಕದ ವಿವರ, ಲಭ್ಯವಿರುವ ಕೋರ್ಸುಗಳ ವಿವರ ಅರ್ಜಿಯೊಂದಿಗೆ ಸಲ್ಲಿಸಬೇಕಾದ ಪ್ರಮಾಣ ಪತ್ರಗಳು ಮತ್ತು ಹೆಚ್ಚಿನ ಮಾಹಿತಿಗಾಗಿ ಸಂಸ್ಥೆಯ ಸೂಚನಾ ಫಲಕದಲ್ಲಿ ಪ್ರಕಟಿಸಲಾಗಿದೆ. ಹಾಗೂ ತಾಂತ್ರಿಕ ಶಿಕ್ಷಣ ಇಲಾಖೆಯ ಮತ್ತು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಅಧಿಕೃತ ವೆಬ್‌ಸೈಟ್ http://www.dtek.karnataka.gov.in or http://www.dtetech.karnataka.gov.in/kartechnical ಗಳನ್ನು ವಿಕ್ಷೀಸಬಹುದಾಗಿದೆ ಅಥವಾ ಸಂಸ್ಥೆಯ ದೂರವಾಣಿ ಸಂಖ್ಯೆ:Tel:+9108382226343 ಮತ್ತು ಪ್ರಿನ್ಸಿಪಾಲರ ದೂ. Tel:+919448995682 ಮೂಲಕ ಮಾಹಿತಿ ಪಡೆಯಬಹುದಾಗಿದೆ ಎಂದು ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನ ಪ್ರಾಂಶುಪಾಲರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.