Slide
Slide
Slide
previous arrow
next arrow

ನವಜೀವನ ಪೋಷಕರ ತರಬೇತಿ ಕಾರ್ಯಗಾರ ಯಶಸ್ವಿ

300x250 AD

ಶಿರಸಿ : ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಉತ್ತರ ಕನ್ನಡ 2 ಜಿಲ್ಲೆ ಇವುಗಳ ಸಂಯುಕ್ತ ಆಶ್ರಯದಲ್ಲಿ ಜಿಲ್ಲಾ ಮಟ್ಟದ ನವಜೀವನ ಸಮಿತಿ ಸದಸ್ಯರ ಅನು ಪಾಲನೆ ಹಾಗೂ ಜನಜಾಗೃತಿ ಕಾರ್ಯಕ್ರಮಗಳ ಸಂಪೂರ್ಣ ಅನುಷ್ಠಾನದ ಬಗ್ಗೆ ನವಜೀವನ ಪೋಷಕರ ತರಬೇತಿ ಕಾರ್ಯಗಾರವು ಕೆವಿಕೆ ಶಿರಸಿ ಸಭಾಂಗಣದಲ್ಲಿ ನಡೆಯಿತು.

ಕಾರ್ಯಕ್ರಮದ ಉದ್ಘಾಟನೆಯನ್ನು ಜನಜಾಗೃತಿ ಪ್ರಾದೇಶಿಕ ಕಚೇರಿ ಬೆಳ್ತಂಗಡಿ ಇದರ ಪ್ರಾದೇಶಿಕ ನಿರ್ದೇಶಕರು ವೇದಿಕೆಯ ರಾಜ್ಯ ಕಾರ್ಯದರ್ಶಿಗಳು ಆದ ವಿವೇಕ್ ವಿನ್ಸೆಂಟ್ ಪಾಯ್ಸ್ ನೆರವೇರಿಸಿ ಪೋಷಕರಿಗೆ ತರಬೇತುದಾರರಾಗಿ ತರಬೇತಿ ಕಾರ್ಯಕ್ರಮವನ್ನು ನೆರವೇರಿಸಿಕೊಟ್ಟರು. ಇವರು ಮಾತನಾಡುತ್ತಾ “ಮಗುವನ್ನು ತಾಯಿಯು ಕೈಹಿಡಿದು ಪೋಷಿಸಿದಂತೆ ನವ ಜೀವನ ಸಮಿತಿ ಸದಸ್ಯರನ್ನು ತಾಯಿಯ ಹಾಗೆ ಪೋಷಕರು ಪೋಷಣೆ ಮಾಡಿದಾಗ ಜನಜಾಗೃತಿ ಕಾರ್ಯಕ್ರಮ ಯಶಸ್ವಿಯಾಗುತ್ತದೆ.” ನವ ಜೀವನ ಸಮಿತಿ ಸಮಗ್ರವಾಗಿ ಅನು ಪಾಲನೆಯ ಬಗ್ಗೆ ಪರಿಣಾಮಕಾರಿಯಾದ ಮಾರ್ಗದರ್ಶನವನ್ನು ನೀಡಿದರು. ಯೋಜನೆಯ ಜಿಲ್ಲಾ ನಿರ್ದೇಶಕರಾದ ಬಾಬು ನಾಯ್ಕ ಪ್ರಸ್ತಾವಿಕ ಮಾತುಗಳ್ನನಾಡಿದರು. ಕಾರ್ಯಕ್ರಮದಲ್ಲಿ ಜನ ಜಾಗೃತಿ ವೇದಿಕೆಯ ಸ್ಥಾಪಕ ಅಧ್ಯಕ್ಷರಾದ ವಿವೇಕ್ ರಾಯ್ಕರ್ ಭಾಗವಹಿಸಿ ಶುಭ ಹಾರೈಸಿದರು.

300x250 AD

ಮುಖ್ಯ ಅತಿಥಿಗಳಾಗಿ ಜಿಲ್ಲಾ ವೇದಿಕೆಯ ಉಪಾಧ್ಯಕ್ಷರಾದ ಶ್ರೀಮತಿ ಗೌರಿ ಯೋಜನಾಧಿಕಾರಿಗಳಾದ ರಾಘವೇಂದ್ರ, ಗಿರೀಶ್ ಭಾಗವಹಿಸಿದ್ದರು. ತರಬೇತಿ ಕಾರ್ಯಗಾರದ ನಿರ್ವಹಣೆಯನ್ನು ಜನ ಜಾಗೃತಿ ವೇದಿಕೆಯ ಪ್ರಾದೇಶಿಕ ವಿಭಾಗದ ಯೋಜನಾಧಿಕಾರಿ ಗಣೇಶ್ ಆಚಾರ್ಯರವರು ನೆರವೇರಿಸಿದರು. ಜಿಲ್ಲಾ NRLM ರಾಮಕೃಷ್ಣ ಸಹಕರಿಸಿದರು. ಒಟ್ಟು ಶಿರಸಿ, ಸಿದ್ದಾಪುರ, ಯಲ್ಲಾಪುರ 3 ತಾಲೂಕಿನ ನವಜೀವನ ಪೋಷಕರು ತರಬೇತಿಯ ಪ್ರಯೋಜನವನ್ನು ಪಡೆದರು.
ತರಬೇತಿಯನ್ನು ಪಡೆದ ಎಲ್ಲಾ ಪೋಷಕರಿಗೆ ಪ್ರಮಾಣ ಪತ್ರವನ್ನು ವಿತರಿಸಲಾಯಿತು.ಜೊತೆಗೆ ಅನು ಪಾಲನೆಯ ಬಗ್ಗೆ ಕರಪತ್ರಗಳನ್ನು ವಿತರಿಸಲಾಯಿತು.

Share This
300x250 AD
300x250 AD
300x250 AD
Back to top