Slide
Slide
Slide
previous arrow
next arrow

ಗೂಡ್ಸ್ ವಾಹನ,ಕಾರ್‌ ನಡುವೆ ಡಿಕ್ಕಿ: ಓರ್ವಳಿಗೆ ಗಾಯ

300x250 AD

ಯಲ್ಲಾಪುರ: ತಾಲೂಕಿನ ಅರಬೈಲ್ ಘಟ್ಟದ ಶೀರ್ಲೆ ಫಾಲ್ಸ್ ಕ್ರಾಸ್‌ನಲ್ಲಿ ಗೂಡ್ಸ್‌ ವಾಹನ ಹಾಗೂ ಕಾರ್ ನಡುವೆ ಡಿಕ್ಕಿ ಸಂಭವಿಸಿ, ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕಳೋರ್ವಳಿಗೆ ಗಾಯವಾದ ಘಟನೆ ನಡೆದಿದೆ.

ಗೂಡ್ಸ್ ವಾಹನದ ಚಾಲಕ ಲಕ್ಷ್ಮಣ ಸಿದ್ದಿ ಈತನು ತನ್ನ ಹೊಸದಾದ, ಇನ್ನೂ ನಂಬ‌ರ್ ಪ್ಲೇಟ್ ಹಾಕಿರದ ಗೂಡ್ಸ್ ವಾಹನವನ್ನು ಅಂಕೋಲಾ ಕಡೆಯಿಂದ ಯಲ್ಲಾಪುರ ಕಡೆಗೆ ಅತೀ ವೇಗ ಹಾಗೂ ನಿಷ್ಕಾಳಜಿಯಿಂದ ಚಲಾಯಿಸಿದ್ದು, ವಾಹನ ನಿಯಂತ್ರಣಕ್ಕೆ ಸಿಗದೇ ಎದುರಿನಿಂದ ಬಂದ ಕಾರಿಗೆ ಡಿಕ್ಕಿಹೊಡೆದು ಅಪಘಾತಪಡಿಸಿದ್ದು, ಇದರ ಪರಿಣಾಮ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಅಮೃತಾ ನಾಯ್ಕ ಎಂಬುವಳಿಗೆ ಗಾಯವಾಗಿದೆ.

300x250 AD

ಈ ಘಟನೆಯಲ್ಲಿ ಕಾರು ಹಾಗೂ ಗೂಡ್ಸ್‌ ವಾಹನ ಜಕಂಗೊಂಡಿದೆ. ಈ ಕುರಿತು ಯಲ್ಲಾಪುರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share This
300x250 AD
300x250 AD
300x250 AD
Back to top