ಭಟ್ಕಳ: ತನ್ನ ಹೆಂಡತಿ ಹೆರಿಗೆಯಾದ ಸರ್ಕಾರಿ ಆಸ್ಪತ್ರೆಗೆ ಕೃತಜ್ಞತೆ ಸಲ್ಲಿಸುವ ಉದ್ದೇಶದಿಂದ 15 ಸೀಲಿಂಗ್ ಫ್ಯಾನ್ ಗಳನ್ನು ಆಸ್ಪತ್ರೆಗೆ ಉಡುಗೊರೆಯಾಗಿ ನೀಡಿದ ಸನ್ನಿವೇಶ ಭಟ್ಕಳ ಸರ್ಕಾರಿ ಆಸ್ಪತ್ರೆಯಲ್ಲಿ ನಡೆದಿದೆ.
ಕಳೆದ ಒಂದು ವಾರದ ಹಿಂದಷ್ಟೇ ಇಲ್ಲಿನ ಮಣ್ಕುಳಿಯ ಕಲ್ಮರ್ಗಿ ಮನೆ ನಿವಾಸಿ ಚಂದ್ರು ನಾರಾಯಣ ನಾಯ್ಕ ಅವರ ಪತ್ನಿ ಶೋಭಾ ನಾಯ್ಕ ಭಟ್ಕಳ ಸರ್ಕಾರಿ ಆಸ್ಪತ್ರೆಯಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಳು. ತನ್ನ ಹೆಂಡತಿಯ ಹೆರಿಗೆಯನ್ನು ಸುಗಮವಾಗಿ ಮತ್ತು ತಾಯಿ ಮಗುವನ್ನು ಉತ್ತಮವಾಗಿ ಆರೈಕೆ ಮಾಡಿರುವುದ್ದಕ್ಕಾಗಿ ಆಸ್ಪತ್ರೆಗೆ ಏನಾದರು ಉಡುಗೊರೆ ನೀಡಬೇಕೆಂದು 15 ಸೀಲಿಂಗ್ ಫ್ಯಾನ್‌ಗಳನ್ನು ಆಸ್ಪತ್ರೆಗೆ ಉಡುಗೊರೆ ನೀಡಿದ್ದಾರೆ
ಇವರ ಈ ಕಾರ್ಯಕ್ಕೆ ಭಟ್ಕಳ ಸರ್ಕಾರಿ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಸವಿತಾ ಕಾಮತ್ ಪ್ರಶಂಸೆ ವ್ಯಕ್ತಪಡಿಸಿ ಕೃತಜ್ಞತ ಪತ್ರ ನೀಡಿದರು. ಈ ಸಂದರ್ಭದಲ್ಲಿ ಸ್ತ್ರೀ ರೋಗ ತಜ್ಞ ಡಾ. ಸಹನ್ ಕುಮಾರ್ ಉಪಸ್ಥಿತರಿದ್ದರು.