Slide
Slide
Slide
previous arrow
next arrow

ಬಿಜೆಪಿಗೆ ಇನಾಮ್ದಾರ್: ಕಿತ್ತೂರಿನಲ್ಲಿ ಕಾಗೇರಿಗೆ ಇನ್ನಷ್ಟು ಬಲ

300x250 AD

ಕಿತ್ತೂರು: ಕಿತ್ತೂರಿನ ಇನಾಮ್ದಾರ್ ಕುಟುಂಬದ ಲಕ್ಷ್ಮಿ ವಿಕ್ರಂ ಇನಾಮುದಾರ್ ಬಿಜೆಪಿಗೆ ಸೇರ್ಪಡೆಯಿಂದ ಬಿಜೆಪಿಗೆ ಹೆಚ್ಚಿದ ಬಲ ಬಂದಂತಾಗಿದೆ.

ಕಿತ್ತೂರ್ ವಿಧಾನಸಭಾ ಕ್ಷೇತ್ರದ ಪ್ರಭಾವಿ ನಾಯಕರಾಗಿದ್ದ ಮಾಜಿ ಸಚಿವ ದಿವಂಗತ ಡಿ ಬಿ ಇನಾಮ್ದಾರ್ ಅವರ ಸೊಸೆ ಶ್ರೀಮತಿ ಲಕ್ಷ್ಮಿ ವಿಕ್ರಂ ಇನಾಮದಾರ್ ಮತ್ತು ಅವರ ಕುಟುಂಬಸ್ಥರು ಮತ್ತು ಅಪಾರ ಬೆಂಬಲಿಗರು ನರೇಂದ್ರ ಮೋದಿ ಅವರ ಬೆಂಬಲಕ್ಕೆ ಬಿಜೆಪಿ ತತ್ವವನ್ನು ಒಪ್ಪಿ ಇಂದು ದಿನಾಂಕ ಸೋಮವಾರದಂದು ಬಾಗಲಕೋಟೆಯಲ್ಲಿ ನಡೆದ ಸಮಾರಂಭದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಯಡಿಯೂರಪ್ಪ ಇವರ ಸಮ್ಮುಖದಲ್ಲಿ ಬಿಜೆಪಿಗೆ ಸೇರ್ಪಡೆಯಾದರು.

300x250 AD

ಈ ಸಂದರ್ಭದಲ್ಲಿ ಚೆನ್ನಮ್ಮನ ಕಿತ್ತೂರಿನ ಮಾಜಿ ಶಾಸಕರಾದ ಮಹಾಂತೇಶ್ ದೊಡ್ಡ ಗೌಡರ್ ಹಾಗೂ ಮಂಡಲ ಅಧ್ಯಕ್ಷರಾದ ಬಸವರಾಜ್ ಪರವನ್ನನವರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಸಂದೀಪ್ ದೇಶಪಾಂಡೆ, ಶ್ರೀಕರ್ ಕುಲಕರ್ಣಿ, ಉಳವಪ್ಪ ಉಳ್ಳಾಗಡ್ಡಿ ಹಾಗೂ ಪ್ರಮುಖ ನಾಯಕರು ಉಪಸ್ಥಿತರಿದ್ದರು. ಇದರಿಂದಾಗಿ ಕಿತ್ತೂರ್ ಭಾಗದಲ್ಲಿ ಭಾರತೀಯ ಜನತಾ ಪಕ್ಷಕ್ಕೆ ಇನ್ನೂ ಹೆಚ್ಚಿನ ಬಲಬಂದಂತಾಗಿದ್ದು ಉತ್ತರ ಕನ್ನಡ ಲೋಕಸಭಾ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಗೆಲುವಿಗೆ ಹೆಚ್ಚಿನ ಕೊಡುಗೆಯನ್ನು ನೀಡಲಿದೆ.

Share This
300x250 AD
300x250 AD
300x250 AD
Back to top