Slide
Slide
Slide
previous arrow
next arrow

ಜೆ.ಇ.ಇ.ಮೈನ್ಸ್: ಕೆನರಾ ಎಕ್ಸಲೆನ್ಸ್ ವಿದ್ಯಾರ್ಥಿಗಳ ಸಾಧನೆ

300x250 AD

ಕುಮಟಾ: ರಾಷ್ಟ್ರೀಯ ಪರೀಕ್ಷಾ ಪ್ರಾಧಿಕಾರವು ಈ ವರ್ಷದ ಜನವರಿ ಮತ್ತು ಏಪ್ರಿಲ್‌ನಲ್ಲಿ ಎರಡು ಹಂತಗಳಲ್ಲಿ ನಡೆಸಿದ ರಾಷ್ಟ್ರಮಟ್ಟದ ಜೆ.ಇ.ಇ ಮೈನ್ಸ್ 2024 ಪರೀಕ್ಷೆಯ ಅಂತಿಮ ಫಲಿತಾಂಶವು ಪ್ರಕಟವಾಗಿದ್ದು, ಕುಮಟಾದ ಗೋರೆಯ ಕೆನರಾ ಎಕ್ಸಲೆನ್ಸ್ ಪದವಿಪೂರ್ವ ಕಾಲೇಜಿನಿಂದ ಪರೀಕ್ಷೆ ಎದುರಿಸಿದ ಒಟ್ಟೂ 37 ವಿದ್ಯಾರ್ಥಿಗಳಲ್ಲಿ 11 ವಿದ್ಯಾರ್ಥಿಗಳು ಅಂತಿಮ ಹಂತದ ಜೆ.ಇ.ಇ. ಅಡ್ವಾನ್ಸ್ಡ್ 2024 ರ ಪರೀಕ್ಷೆ ಎದುರಿಸಲು ಅರ್ಹತೆ ಗಳಿಸುವ ಮೂಲಕ ಅತ್ಯದ್ಭುತ ಸಾಧನೆ ಗೈದಿದ್ದಾರೆ.

ಜನರಲ್ ಇಡಬ್ಲೂಎಸ್(EWS) ವರ್ಗದಲ್ಲಿ ಕುಮಾರ ಎಸ್ ಭಟ್ಟ (ಎಐಆರ್-1601), ಚಿನ್ಮಯ ವಿ ಭಟ್ಟ(ಎಐಆರ್-10219), ನಂದನ್ ಜಿ ಹೆಗಡೆ (ಎಐಆರ್-14675), ಪೂಜಾ ಎಸ್. ಅವಧಾನಿ (ಎಐಆರ್-23483), ಆಶಾ ಎನ್. ಭಟ್ಟ(ಎಐಆರ್-40446), ಶಶಿಧರ ಜಿ ಭಟ್ಟ(ಎಐಆರ್-40536), ಕಾರ್ತಿಕ್ ಎ ಹೆಗಡೆ(ಎಐಆರ್-41418) ರ‍್ಯಾಂಕ್ ಗಳಿಸಿದ್ದಾರೆ. ಅಂತೆಯೇ ಜನರಲ್ ಮೆರಿಟ್ ವರ್ಗದಲ್ಲಿ ದಿಶಾ ಡಿ ಮಾಸ್ತಿಕಟ್ಟಾ(ಎಐಆರ್-84066) ಹಾಗೂ ಓಬಿಸಿ-ಎನ್‌ಸಿಎಲ್ ವರ್ಗದಲ್ಲಿ ಕಾರ್ತಿಕ್ ಎಮ್ ನಾಯ್ಕ(ಎಐಆರ್-34790), ಎನ್. ಆರ್. ಶ್ರೀಕಾಂತ (ಎಐಆರ್-733721), ರೋಹನ್ ಕೆ ಗುನಗಾ(ಎಐಆರ್-86709) ರ‍್ಯಾಂಕ್ ಗಳನ್ನು ಗಳಿಸಿ ಅತ್ಯದ್ಭುತ ಸಾಧನೆಗೈದು ಮುಂಬರುವ ಮೇ 26 ರಂದು ನಡೆಯಲಿರುವ ರಾಷ್ಟ್ರಮಟ್ಟದ ಜೆ.ಇ.ಇ. ಎಡ್ವಾನ್ಸಡ್ ಪರೀಕ್ಷೆಯನ್ನು ಎದುರಿಸುವ ಅರ್ಹತೆ ಪಡೆದುಕೊಂಡಿದ್ದಾರೆ.

300x250 AD

ರಾಷ್ಟ್ರವ್ಯಾಪಿ IITs, NITs, IIITs ಇದೇ ಮುಂತಾದ ತಾಂತ್ರಿಕ ಕ್ಷೇತ್ರದ ಶಿಕ್ಷಣದಲ್ಲಿ ಮುಂಚೂಣಿಯಲ್ಲಿರುವ ಶಿಕ್ಷಣ ಸಂಸ್ಥೆಗಳಲ್ಲಿ ಲಭ್ಯವಿರುವ BE/M.Tech ಕೋರ್ಸ್ಗಳಿಗೆ ಪ್ರವೇಶ ಪಡೆಯಲು ವಿದ್ಯಾರ್ಥಿಗಳು ಎದುರಿಸುವ ಈ ರಾಷ್ಟ್ರಮಟ್ಟದ ಪರೀಕ್ಷೆಯಲ್ಲಿ ಕೆನರಾ ಎಕ್ಸಲೆನ್ಸ್ ವಿದ್ಯಾರ್ಥಿಗಳ ಸಾಧನೆಯನ್ನು ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷರಾದ ಡಾ. ಜಿ. ಜಿ ಹೆಗಡೆ, ಪ್ರಾಂಶುಪಾಲರಾದ ಡಿ. ಎನ್. ಭಟ್ಟ, ಎಲ್ಲಾ ಬೋಧಕ ಬೋಧಕೇತರ ಸಿಬ್ಬಂದಿಗಳು, ವಿದ್ಯಾರ್ಥಿಗಳು, ಪಾಲಕರು ಹೃತ್ಪೂರ್ವಕವಾಗಿ ಅಭಿನಂದಿಸಿ ಮುಂದಿನ ಹಂತದ ಪರೀಕ್ಷೆಗೆ ಶುಭಕೋರಿದ್ದಾರೆ.

Share This
300x250 AD
300x250 AD
300x250 AD
Back to top