ಶಿರಸಿ: ಯಕ್ಷಾಂಕುರ ಐನಬೈಲ್ ಶಿರಸಿ ಇವರ ಆಶ್ರಯದಲ್ಲಿ ಮಕ್ಕಳ ಯಕ್ಷಗಾನ ಶಿಬಿರದ ಮುಕ್ತಾಯ ಸಮಾರಂಭ ನಿಮಿತ್ತ ಶ್ರೀ ದೇವಿದಾಸ ವಿರಚಿತ ಆಖ್ಯಾನಗಳಾದ ಚಕ್ರವ್ಯೂಹ ಮತ್ತು ಸೈಂಧವ ವಧೆ ಯಕ್ಷಗಾನವು ಪರಮೇಶ್ವರ ಹೆಗಡೆ ಇವರ ನಿರ್ದೇಶನ ಮತ್ತು ಭಾಗವತಿಕೆಯಲ್ಲಿ ಏ:28, ರವಿವಾರ ಸಂಜೆ 5-30 ಕ್ಕೆ ಟಿ.ಎಂ.ಎಸ್ ಸಭಾಭವನದಲ್ಲಿ ನಡೆಯಲಿದೆ.
ಕಾರ್ಯಕ್ರಮದ ಅಧ್ಯಕ್ಷರಾಗಿ ಟಿ.ಎಂ.ಎಸ್. ಅಧ್ಯಕ್ಷ ಜಿ.ಟಿ.ಹೆಗಡೆ ತಟ್ಟೀಸರ ಮತ್ತು ಮುಖ್ಯ ಅತಿಥಿಗಳಾಗಿ ಎಕ್ಸಪ್ರೆಡಿಕ್ಟ್ ಲ್ಯಾಬ್ ಪ್ರೈವೇಟ್ ಲಿಮಿಟೆಡ್ ಚೇರ್ಮನ್ ಬಾಲಚಂದ್ರ ಹೆಗಡೆ ಕೆಶಿನ್ಮನೆ ಪಾಲ್ಗೊಳ್ಳುವರು. ಹಿಮ್ಮೇಳದಲ್ಲಿ ಭಾಗವತರಾಗಿ ಬಾಲಿಕೆ ಅಭಿಜ್ಞಾ ಹೆಗಡೆ, ಮದ್ದಳೆ ವಾದಕರಾಗಿ ಶ್ರೀಪಾದ ಭಟ್ಟ ಮೂಡಗಾರ, ಚಂಡೆ ವಾದಕರಾಗಿ ಉಮೇಶ ಹೆಗಡೆ ವೇಷಾಲಂಕಾರಕರಾಗಿ ವೆಂಕಟ್ರಮಣ ಹೆಗಡೆ ಭಾಗವಹಿಸುವರು. ಮುಮ್ಮೇಳದಲ್ಲಿ ಪ್ರತೀಕ್ಷಾ ಹೆಗಡೆ, ಸಾತ್ವಿಕ್ ಭಟ್ಟ, ಪೂರ್ವಿ ಶೆಟ್ಟಿ, ಅನ್ವಿತಾ, ಪ್ರತೀಕ ಹೊಸ್ಮನೆ,ಪ್ರಥಮ,ಸಾತ್ವಿಕ್ ಪಂಡಿತ, ಪೂರ್ವಿ ಹೆಗಡೆ, ಅದ್ವೈತ ಹೆಗಡೆ, ವೇದವೃತ, ವಿಧಾತಾ, ಮಾನ್ಯಾ, ಉತ್ಕರ್ಷ,ಅಭಿಜ್ಞಾ, ಪ್ರತೀಕ್ಷಾ ಭಟ್ಟ,ಓಂ ಹೆಗಡೆ, ಶಶಾಂಕ, ಪ್ರತೀಕ ಹೆಗಡೆ, ಶ್ರೀಹರಿ, ಚಿರಂತನ, ಮಾನಸಾ, ಸೌಮ್ಯ, ಅದಿತಿ, ಚೈತ್ರಾ, ಶ್ರೇಯಸ್ ಬಾಲಕಲಾವಿಧರಾಗಿ ಪಾಲ್ಗೊಳ್ಳುವರು. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಸಹಕರಿಸುವಂತೆ ಸಂಘಟಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.