ಶಿರಸಿ: ತಾಲೂಕಿನ ಶ್ರೀಕ್ಷೇತ್ರ ಮಂಜುಗುಣಿ ಶ್ರೀ ವೆಂಕಟರಮಣ ದೇವಸ್ಥಾನದ ಶ್ರೀಮನ್ಮಹಾರಥೋತ್ಸವವು ಏ.23, ಮಂಗಳವಾರದಂದು ನಡೆಯಲಿದೆ. ಬೆಳಿಗ್ಗೆ 7 ಗಂಟೆಗೆ ರಥಾರೋಹಣ, ಪೂಜಾ, ರಥ ಎಳೆಯುವುದು. ನಂತರ ರಾತ್ರಿ 12 ಗಂಟೆಯವರೆಗೆ ದರ್ಶನ, ಹಣ್ಣು-ಕಾಯಿ ಇತ್ಯಾದಿ ಮುಂದುವರೆಯುತ್ತದೆ. ಬೆಳಿಗ್ಗೆ ರಥೋತ್ಸವದಲ್ಲಿ ಉಪಸ್ಥಿತರಿರುವ ಭಕ್ತರಿಗೆ ಉಪಹಾರ, ಮಧ್ಯಾಹ್ನ ಅನ್ನ ಪ್ರಸಾದ ವ್ಯವಸ್ಥೆ ಇರಲಿದೆ.
ಇಂದು ಏ.22 ರಂದು ಚೈತ್ರ ಶುದ್ಧ ಚತುರಶಿ ಸೋಮವಾರ ಶ್ರೀದೇವರ ವಧರ್ಂತಿ ಉತ್ಸವ(ಪ್ರತಿಷ್ಠಾ ದಿನ) ಪ್ರಾತಃ ಭಾಂಡ ಪೂಜಾ(ಹಂಡೆ ಪೂಜೆ) ಪಾಕಸಿದ್ದಿ, ಅನ್ನಸಂಗ್ರಹ, ಬೆಳಿಗ್ಗೆ ಕ್ಷೇತ್ರಪ್ರಾಕಾರಬಲಿ(ಬೀದಿಬಲಿ),ಭೂತರಾಜ ಬಲಿ, ವರ್ಧಂತಿ, ಮಹಾಸಂತರ್ಪಣೆ, ಅಪರಾಹ್ನ ಸೂರ್ಯಪ್ರಭಾ ಉತ್ಸವ(ಹಗಲೋತ್ಸವ), ರಾತ್ರಿ: ಕ್ಷೇತ್ರಪ್ರಾಕಾರ ಬಲಿ(ಬೀದಿ ಬಲಿ), ಧ್ವಜಪ್ರಾರ್ಥನಾ, ಮಹಾ ದಂಡಬಲಿ, ವಿಶೇಷ ಭೂತರಾಜ ಬಲಿ, ಗರುಡಯಂತ್ರೋತ್ಸವ ನಡೆಯಲಿದೆ.
ಏ.23 ರಂದು ಚೈತ್ರ ಶುದ್ಧ ಹುಣ್ಣಿಮೆ ಮಂಗಳವಾರ ಶ್ರೀಮನ್ಮಹಾರಥೋತ್ಸವ, ಪ್ರಾತಃ ಮಹಾರಥಶುದ್ಧಿ, ರಥಪೂಜಾ, ರಥಬಲಿ,ರಥಾಗಮನ, ರಥಾರೋಹಣ, ಪೂಜಾ ಪ್ರಾರ್ಥನಾ, ರಥನಯನ(ರಥ ಎಳೆಯುವುದು) ನಂತರ ಸಾರ್ವತ್ರಿಕವಾಗಿ ಭಕ್ತರಿಗೆ ಶ್ರೀ ದೇವರ ದರ್ಶನ, ಫಲ ಸಮರ್ಪಣೆ, ರಾತ್ರಿ 11 ಗಂಟೆಗೆ ಮರ್ಯಾದೆ ಕಾಯಿ ಹಂಚುವುದು, ಫಲತಾಡನ (ರಥಗಾಲಿಗೆ ಕಾಯಿ ಒಡೆಯುವುದು). ಪೂಜೆ, ರಥಾವರೋಹಣ, ವಸಂತಪೂಜಾ(ಪಾನಕ ನೈವೇದ್ಯ) ನಡೆಯಲಿದೆ.
ಏ.24ರಂದು ಚೈತ್ರ ಬಹುಳ ಪ್ರತಿಪದೆ ಬುಧವಾರ ಅವಧೃತ, ಅಪರಾಹ್ನ: ವಸಂತಪೂಜಾ ಸಂವಾದ, ಕಲಹ(ಬಾಳೆಹಣ್ಣು ಎಸೆಯುವುದು), ಅಂಕುರ ಸಮರ್ಪಣ ಪೂಜಾ ಪ್ರಸಾದ ವಿತರಣೆ, ಅವದ್ಭತ ತೀರ್ಥ ಸ್ನಾನ, ಪೂರ್ಣಾಹುತಿ, ಧ್ವಜಾವರೋಹಣ ನಡೆಯಲಿದೆ.
ಮೇ.7, ಮಂಗಳವಾರ ಚೈತ್ರ ಬಹುಳ ಚತುರ್ದಶಿ/ಅಮವಾಸ್ಯೆಯಂದು ಸಂಪ್ರೋಕ್ಷಣ ನಡೆಯಲಿದೆ.