Slide
Slide
Slide
previous arrow
next arrow

ಕೊಳಗಿಬೀಸ್‌ನಲ್ಲಿ ರಾಮನವಮಿ ಆಚರಣೆ

300x250 AD

ಶಿರಸಿ: ಶ್ರೀಕ್ಷೇತ್ರ ಕೊಳಗಿಬೀಸ್‌ನ ಮಾರುತಿ ದೇವಳದಲ್ಲಿ ಸಂಭ್ರಮದ ರಾಮನವಮಿ ಆಚರಿಸಲಾಯಿತು.

ದಿನವಿಡೀ ನಡೆದ ವಿವಿಧ ಕಾರ್ಯಕ್ರಮಗಳಲ್ಲಿ  ಶತರುದ್ರ, ಸುಂದರಕಾಂಡ ಪಾರಾಯಣ ಮುಂತಾದ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಮಾತೃ ಮಂಡಳಿಯಿಂದ ಭಜನೆ, ಭಕ್ತಿಗೀತೆಗಳು ನಡೆದವು. 

ಸಂಜೆ ಪಲ್ಲಕ್ಕಿ ಉತ್ಸವ, ಮೆರವಣಿಗೆ  ಅಷ್ಟಾವದಾನ ಸೇವೆಗಳು ನಡೆದವು. ನಡೆದವು. ದೇವಸ್ಥಾನಕ್ಕೆ ದಿನವಿಡೀ ವಿವಿಧೆಡೆಯಿಂದ ಆಗಮಿಸಿದ ಭಕ್ತರು   ಸೇವೆಗಳನ್ನು ಸಮರ್ಪಿಸಿದರು.

300x250 AD

ದೇವಸ್ಥಾನದ ಮುಖ್ಯ ಅರ್ಚಕ ವಿದ್ವಾನ ಕುಮಾರ ಭಟ್ಟರ ನೇತೃತ್ವದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಶ್ರೀಧರ ಹೆಗಡೆ ಹಾಗು ಪದಾಧಿಕಾರಿಗಳು ರಾಮನವಮಿ ಉತ್ಸವದಲ್ಲಿ ಪಾಲ್ಗೊಂಡಿದ್ದರು.

Share This
300x250 AD
300x250 AD
300x250 AD
Back to top