ಹೊನ್ನಾವರ : ತಾಲೂಕಿನ ಹಳದಿಪುರ ಗ್ರಾಮದ ಗಜನಿ ಹಿತ್ತಲದಲ್ಲಿ ಏಪ್ರಿಲ್ 16ರ ರಾತ್ರಿ ಗ್ಯಾಸ್ ಸಿಲೆಂಡರನಿಂದ ಆಕಸ್ಮಿಕವಾಗಿ ಗ್ಯಾಸ್ ಲೀಕ್ ಆಗಿ ಉಂಟಾದ ಬೆಂಕಿ ಅವಘಡದಲ್ಲಿ ಈರ್ವರು ಗಂಭೀರವಾಗಿ ಗಾಯಗೊಂಡಿದ್ದು, ಚಿಕಿತ್ಸೆ ಫಲಕಾರಿಯಾಗದೇ ಮಂಗಳೂರಿನ ವೆಸ್ಲಾಕ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
ಹಳದಿಪುರ ಗ್ರಾಮದ ಗಜನಿ ಹಿತ್ತಲದ ನಿವಾಸಿ ಯುಗಾದಿ ಶನಿಯಾರ ಗೌಡ ಇವರ ಮನೆಯ ಅಡುಗೆ ಮನೆಯಲ್ಲಿ ಉಪಯೋಗಿಸುತ್ತಿದ್ದ ಗ್ಯಾಸ್ ಸಿಲೆಂಡರನಿಂದ ಆಕಸ್ಮಿಕವಾಗಿ ಗ್ಯಾಸ್ ಲೀಕ್ ಆಗಿ ಆದ ಬೆಂಕಿ ಅವಘಡದಲ್ಲಿ ಯುಗಾದಿ ಗೌಡ(42) ಮತ್ತು ಹಳದಿಪುರ ನಿವಾಸಿ ಕೃಷ್ಣ ನಾರಾಯಣ ಗೌಡ (40) ಎಂಬಾತರು ಗಂಭೀರವಾಗಿ ಗಾಯಗೊಂಡಿದ್ದರು. ಇವರನ್ನು ತಕ್ಷಣ ಹೊನ್ನಾವರ ತಾಲೂಕ ಆಸ್ಪತ್ರೆಗೆ ದಾಖಲಿಸಿ, ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ವೆಸ್ಲಾಕ್ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಫಲಕಾರಿಯಾಗದೆ ಮಂಗಳೂರಿನ ವೆಸ್ಲಾಕ್ ಆಸ್ಪತ್ರೆಯಲ್ಲಿ ಬುಧವಾರ ಮೃತಪಟ್ಟಿದ್ದಾರೆ. ಘಟನೆಗೆ ಸಂಬಂಧ ಪಟ್ಟಂತೆ ಹಳದಿಪುರ ಕರಿಮೂಲೆ ನಿವಾಸಿ ಈಶ್ವರ ತುಳುಸು ಗೌಡ ಹೊನ್ನಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.