Slide
Slide
Slide
previous arrow
next arrow

ಶಿರಸಿಯಲ್ಲಿ ಅದ್ದೂರಿಯಾಗಿ ನಡೆದ ಅಂಬೇಡ್ಕರ್ ಜಯಂತಿ

300x250 AD

ಶಿರಸಿ: ನಗರದ ಅಂಬೇಡ್ಕರ್ ಭವನದಲ್ಲಿ ಭೀಮಘರ್ಜನೆ ಸಂಘಟನೆಯ ವತಿಯಿಂದ 133ನೇ ಅಂಬೇಡ್ಕರ್ ಜಯಂತಿ ಹಾಗೂ ಜಿಲ್ಲಾ ಸಮಾವೇಶ ಅತ್ಯಂತ ವಿಜೃಂಭಣೆಯಿಂದ ಜರುಗಿತು.

ಭಾನುವಾರ ಅಂಬೇಡ್ಕರ್ ಜಯಂತಿ ಪ್ರಯುಕ್ತ ಭೀಮಘರ್ಜನೆ ಸಂಘಟನೆಯ ನೇತೃತ್ವದಲ್ಲಿ ರಥ ಸಿದ್ಧಪಡಿಸಿ ಅದರಲ್ಲಿ ಅಂಬೇಡ್ಕರ್ ಭಾವಚಿತ್ರ ಇರಿಸಿ ನಗರಾದ್ಯಂತ ಮೆರವಣಿಗೆ ನಡೆಸಲಾಯಿತು.
ಜೀವ ಜಲ ಕಾರ್ಯಪಡೆ ಅಧ್ಯಕ್ಷ ಶ್ರೀನಿವಾಸ್ ಹೆಬ್ಬಾರ್, ಭೀಮಘರ್ಜನೆ ಸಂಘಟನೆಯ ಜಿಲ್ಲಾಧ್ಯಕ್ಷ ಅರ್ಜುನ್ ಮಿಂಟಿ, ಸ್ಥಾಯಿ ಸಮಿತಿ ಅಧ್ಯಕ್ಷ ಕುಮಾರ್ ಬೋರ್ಕರ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು .

ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ, ಜೀವಜಲ ಕಾರ್ಯಪಡೆ ಅಧ್ಯಕ್ಷ ಶ್ರೀನಿವಾಸ್ ಹೆಬ್ಬಾರ್, ಡಾ.ಬಿ.ಆರ್.ಅಂಬೇಡ್ಕರ್ ಅವರ ಚಿಂತನೆ, ಸಿದ್ಧಾಂತ, ಅವರು ಹಾಕಿಕೊಟ್ಟ ಮಾರ್ಗ ಹಾಗೂ ಅವರ ದೂರದೃಷ್ಟಿ ನೋಡಿದಾಗ ಅವರನ್ನು ಆಧುನಿಕ ಭಾರತದ ನಿರ್ಮಾತೃ ಎಂದು ಕರೆಯಲಾಗುತ್ತದೆ. ಅಂಬೇಡ್ಕರ್ ಅವರು ನಮ್ಮ ದೇಶಕ್ಕೆ ನೀಡಿದ ಕೊಡುಗೆಗಳು ಅತ್ಯಮೂಲ್ಯವಾದದ್ದು, ಅವರು ನಮ್ಮ ದೇಶಕ್ಕೆ ನೀಡಿರುವ ಸಂವಿಧಾನವು ಜಗತ್ತಿನ ಎಲ್ಲಾ ಸಂವಿಧಾನಗಳಲ್ಲಿ ಸರ್ವಶ್ರೇಷ್ಠ ಸಂವಿಧಾನವಾಗಿದೆ. ಆದ್ದರಿಂದ ಅವರ ಜಯಂತಿಯನ್ನು ಇಂದು ಕೇವಲ ಭಾರತ ಮಾತ್ರವಲ್ಲದೆ ಪ್ರಪಂಚದ ಅನೇಕ ರಾಷ್ಟ್ರಗಳು ಆಚರಣೆ ಮಾಡುತ್ತದೆ ಎಂದರು.

ಭೀಮಘರ್ಜನೆ ಜಿಲ್ಲಾಧ್ಯಕ್ಷ ಅರ್ಜುನ್ ಮಿಂಟಿ ಮಾತನಾಡಿ,  ಡಾ. ಬಿ.ಆರ್ ಅಂಬೇಡ್ಕರ್ ಅವರು ಅಪಾರ ಜ್ಞಾನ ಸಂಪತ್ತನ್ನು ಹೊಂದಿದ್ದರು. 32 ಕ್ಕೂ ಅಧಿಕ ಪದವಿಗಳನ್ನು ಪಡೆದ ಜಗತ್ತಿನ ಏಕೈಕ ವ್ಯಕ್ತಿ ಅಂಬೇಡ್ಕರ್. ಸ್ವತಂತ್ರ ಭಾರತದ ಮೊದಲ ಕಾನೂನು ಮಂತ್ರಿ, ಅರ್ಥಶಾಸ್ತಜ್ಞ, ನ್ಯಾಯಶಾಸ್ತಜ್ಞ ಹಾಗೂ ಸಮಾಜ ಸುಧಾರಕರಾಗಿದ್ದವರು, ಆಗಿನ ಕಾಲದಲ್ಲಿ ಶಿಕ್ಷಣ ಪಡೆಯುವುದು ಅತ್ಯಂತ ಕಠಿಣವಾಗಿತ್ತು ಅಂತಹ ಸಂದರ್ಭದಲ್ಲಿ ಮೇಲ್ಜಾತಿಗಳಿಂದ ತುಳಿತಕ್ಕೊಳಗಾಗಿದ್ದ ಕೆಳ ಜಾತಿಯಲ್ಲಿ ಜನಿಸಿದ ಅವರು ಹಲವಾರು ಕಷ್ಟ, ನೋವು, ಅವಮಾನಗಳನ್ನು ಸಹಿಸಿಕೊಂಡು ಉನ್ನತ ಶಿಕ್ಷಣ ಪಡೆದು ಸಂವಿಧಾನ ರಚಿಸಿ ದೀನದಲಿತರು, ಶೋಷಿತರ ದೇವರಾಗಿ, ವಿಶ್ವ ಮಾನವರಾದರು. ಆದ್ದರಿಂದ ಎಲ್ಲರೂ ಕೂಡ ಶಿಕ್ಷಣಕ್ಕೆ ಮೊದಲ ಆದ್ಯತೆ ನೀಡುವ ಅವಶ್ಯಕತೆ ಇದೆ. ಶಿಕ್ಷಣ ಸಂಘಟನೆ ಹೋರಾಟ ನಮ್ಮ ಗುರಿಯಾಗಿರಬೇಕು. ಎಲ್ಲಿಯವರೆಗೆ ಸಂವಿಧಾನ ಉಳಿದಿರುತ್ತದೆಯೋ ಅಲ್ಲಿಯವರೆಗೂ ಅಂಬೇಡ್ಕರ್ ಜೀವಂತವಾಗಿರುತ್ತಾರೆ. ಸಂವಿಧಾನ ರಕ್ಷಣೆಗೆ ನಾವೆಲ್ಲರೂ ಕೂಡ ಸದಾಸಿದ್ದರಾಗಿರಬೇಕು ಎಂದರು.

ಸಂಘಟನೆಯ ಸಲಹೆಗಾರ ರಾಜೇಶ್ ದೇಶಭಾಗ್ ಮಾತನಾಡಿ, ಭೀಮಘರ್ಜನೆ ಸಂಘಟನೆ ಇಂದು ಇಷ್ಟು ದೊಡ್ಡಮಟ್ಟದಲ್ಲಿ ಅಂಬೇಡ್ಕರ್ ಅವರ ಜಯಂತಿಯನ್ನು ಆಚರಣೆ ಮಾಡುತ್ತಿರುವುದನ್ನ ನೋಡಿದರೆ ಬಹುಶಃ ಮುಂದಿನ ದಿನದಲ್ಲಿ ಈ ಸಂಘಟನೆ ತುಂಬಾ ಎತ್ತರಕ್ಕೆ ಬೆಳೆದು ಸಂವಿಧಾನ ಮತ್ತು ದಲಿತರ ರಕ್ಷಣೆ ಮಾಡುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದರು. ವೇದಿಕೆಯಲ್ಲಿ ವಿ ಪಿ ಹೆಗಡೆ,ಕೆ ವಿ ಭಟ್, ಪ್ರೊ. ಕೆಂಪರಾಜ ಹಾಗು ಪ್ರೊ. ಕಮನಳ್ಳಿ ಉಪಸ್ಥಿತರಿದ್ದರು.

300x250 AD

ಅಂಬೇಡ್ಕರ್ ಭವನದಿಂದ ಹೊರಟ ಮೆರವಣಿಗೆಯು  ಅಶ್ವಿನಿ ಸರ್ಕಲ್, ದೇವಿಕೆರೆ, ನಟರಾಜ ರಸ್ತೆ, ಬಿಡ್ಕಿ ಸರ್ಕಲ್ ಮೂಲಕ ಶಿವಾಜಿ ಚೌಕ್ ತಲುಪಿ, ಕೇಕ್ ಕತ್ತರಿಸಿ ಪಟಾಕಿ ಸಿಡಿಸಿ ಸಿಹಿ ಹಂಚಿ ಅಲ್ಲಿಂದ ಹೊರಟು ಅಂಬೇಡ್ಕರ್ ಸರ್ಕಲ್‌ನಲ್ಲಿ  ಸಂಪನ್ನಗೊಂಡಿತು .

ಈ ಸಂದರ್ಭದಲ್ಲಿ  ಭೀಮಘರ್ಜನೆ ಸಂಘಟನೆಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಂಜಯ್ ಮಡಗಾವಂಕರ್,  ಉಪಾಧ್ಯಕ್ಷ ತಿಲಕ್ ಹುಬ್ಬಳ್ಳಿ ,  ಸಂಘಟನಾ ಕಾರ್ಯದರ್ಶಿ ಅಮಿತ್ ಜೋಗಳೇಕರ್, ಖಚಾಂಜಿ ಕುಮಾರ್ ಹುಬ್ಬಳ್ಳಿ, ರಾಘು ಮಿಂಟಿ , ತಾಲೂಕು ಅಧ್ಯಕ್ಷ ಪುನೀತ್ ಮರಾಠೆ, ಉಪಾಧ್ಯಕ್ಷ ಶ್ಯಾಮ್ ದೇಶಭಾಗ್, ಕಾರ್ಯದರ್ಶಿ ನವೀನ ಕಾನಡೆ, ಭಾರ್ಗವ  ಕಾನಡೆ, ಗೌತಮ ನೇತ್ರೇಕರ್, ಪಿಂಟು ಬಾಪೂಜಿನಗರ, ಗುರುರಾಜ್ ಮಿಂಟಿ, ಸೇರಿದಂತೆ ಜಿಲ್ಲೆಯ ಎಲ್ಲಾ ತಾಲೂಕುಗಳಿಂದ ಸಂಘಟನೆಯ  ಪದಾಧಿಕಾರಿಗಳು ಹಾಗೂ ಸಾವಿರಾರು ಕಾರ್ಯಕರ್ತರು ಪಾಲ್ಗೊಂಡು ಸಂವಿಧಾನ ಶಿಲ್ಪಿ ಅಂಬೇಡ್ಕರ್ ಅವರಿಗೆ ಗೌರವ ಸಮರ್ಪಣೆ ಮಾಡಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿರು.

Share This
300x250 AD
300x250 AD
300x250 AD
Back to top