ಶಿರಸಿ: ಅಮೇರಿಕಾದ ಸ್ಟ್ಯಾನ್ ಫೋರ್ಡ್ ವಿಶ್ವವಿದ್ಯಾಲಯದ ಭೌಗೋಳಿಕ ಶಾಸ್ತ್ರ ಮತ್ತು ಪರಿಸರ ವಿಜ್ಞಾನ ವಿಭಾಗ ಹಾಗೂ ಡಚ್ ದೇಶದ ಎಲ್ಸೆವೀರ್ ಶೈಕ್ಷಣಿಕ ಸಂಶೋಧನ ಸಮೀಕ್ಷಾ ಪ್ರಕಟಣೆ ಕಂಪನಿ ಜಂಟಿಯಾಗಿ ನಡೆಸಿದ ಜಾಗತಿಕ ವಿಜ್ಞಾನಿಗಳ ಜೀವ ಮಾನದ ಸಾಧನಾ ಪಟ್ಟಿಗೆ ಶಿರಸಿ ಮೂಲದ ಡಾ.ಮಹಾವೀರ ಡಿ.ಕುರಕುರಿ ಆಯ್ಕೆ ಆಗಿದ್ದಾರೆ.
ಬೆಂಗಳೂರು ಜೈನ ಡೀಮ್ಡ್ ಯೂನಿವರ್ಸಿಟಿಯ ನ್ಯಾನೋ ವಿಜ್ಞಾನ ಮತ್ತು ಭೌತ ವಿಜ್ಞಾನ ಕೇಂದ್ರದ ಮುಖ್ಯಸ್ಥರಾದ ಕುರಕುರಿ ಅವರು ಅತ್ಯುತ್ತಮ ಸಾಧನೆ, ಸಂಶೋಧನೆ ಮಾಡಿದ ಜಗತ್ತಿನ ವಿಜ್ಞಾನಿಗಳ ಶೇ.೨ರ ಪಟ್ಟಿಯಲ್ಲಿ ಒಬ್ಬರಾಗಿದ್ದು ವಿಶೇಷವಾಗಿದೆ.
ಡಾ.ಮಹಾವೀರ ಕುರಕುರಿ ಅವರು ಈ ಮೊದಲು 2009 ಜೂನ್ 2 ರಂದು ಆಸ್ಟ್ರೇಲಿಯನ್ ರಿಸರ್ಚ್ ಕೌನ್ಸಿಲ್ ಆಫ್ ನ್ಯಾನೋ ಟೆಕ್ನಾಲಜಿ ನೆಟ್ವರ್ಕ್ ಸಂಸ್ಥೆಯು ಯಂಗ್ ಸೈನ್ಸ್ ಅಂಬಾಸಿಡರ್ ಪ್ರಶಸ್ತಿಗೆ ಭಾಜನರಾಗಿದ್ದರು. ಕರ್ನಾಟಕ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಉತ್ತೇಜನ ಸೊಸೈಟಿಯು ಕೊಡಮಾಡುವ 2016-17ನೇ ಸಾಲಿನಲ್ಲಿ ಪ್ರಕಟಿತ ಅತ್ಯುತ್ತಮ ಸಂಶೋಧನಾ ಪ್ರಬಂಧ ಪ್ರಶಸ್ತಿ ಪ್ರಾಪ್ತವಾಗಿದೆ. ಇವರ ಸಂಶೋದನಾತ್ಮಕ ಬರಹಗಳು ಜಾಗತಿಕವಾಗಿ ಪ್ರಸಿದ್ಧವಾಗಿರುವ ವೈಜ್ಞಾನಿಕ ನಿಯತಕಾಲಿಕೆಗಳಲ್ಲಿ ಪ್ರಕಟಗೊಂಡು ಪ್ರಶಂಸಿಸಲ್ಪಟ್ಟಿವೆ.
ಡಾ.ಮಹಾವೀರ ಕುರಕುರಿ ಅವರು ಶಿರಸಿಯ ನಾಡಿನ ಹಿರಿಯ ಕವಿ, ರಾಷ್ಟ್ರಪ್ರಶಸ್ತಿ ಪುರಸ್ಕೃತ ಅನುವಾದಕ ಪ್ರೊ. ಧರಣೇಂದ್ರ ಕುರಕುರಿ ಮತ್ತು ಜಯಲಕ್ಷ್ಮಿ ದಂಪತಿ ಪುತ್ರ.