ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಸುಗಾವಿ, ಮಾಡನಕೇರಿ ಮತ್ತು ನೆಹರೂ ಪ್ರೌಢಶಾಲೆ ಓಣೀಕೇರಿಯ ಸ್ಕೌಟ್ಸ್ ಮತ್ತು ಗೈಡ್ಸ್ ಗಳ ಬೇಸಿಗೆ ಶಿಬಿರಕ್ಕೆ ಸುಗಾವಿ ಶಾಲೆಯಲ್ಲಿ ಬಿಸಿಲ ಬೇಗೆಗೆ ಬಸವಳಿವ ಪಕ್ಷಿಗಳಿಗೆ ಆಹಾರ ಮತ್ತು ನೀರಿಡುವ ಮೂಲಕ ಚಾಲನೆ ನೀಡಲಾಯಿತು.
ಸುಗಾವಿ ಪ್ರಾಥಮಿಕ ಶಾಲಾ SDMC ಅಧ್ಯಕ್ಷ ರಾಘವೇಂದ್ರ ನಾಯ್ಕ, ಮುಖ್ಯಾಧ್ಯಾಪಕ ಯಶವಂತ ಹೊನ್ನಾವರ, ಸ್ಕೌಟ್ಸ್ ಮತ್ತು ಗೈಡ್ಸ್ ತಾಲೂಕಾ ಕಾರ್ಯದರ್ಶಿ ಎನ್.ಎಸ್. ಭಾಗ್ವತ್, ಖಜಾಂಚಿ ಬಿ.ಬಿ.ಮಾಲೀಪಾಟೀಲ್ ಹಾಗೂ ಸಂಪನ್ಮೂಲ ಶಿಕ್ಷಕರು ಉಪಸ್ಥಿತರಿದ್ದರು. . ಶಿಕ್ಷಕರಾದ ಅಶೋಕ ಪಟಗಾರ ಸ್ವಾಗತಿಸಿದರು. ಗೈಡ್ ಕ್ಯಾಪ್ಟನ್ ಶ್ರೀಮತಿ ಸುಧಾ ಪಟಗಾರ ನಿರ್ವಹಿಸಿದರು. ಶಿಕ್ಷಕರಾದ ಶಿವರಾಜ್ ವಂದಿಸಿದರು.
ಹೇಮಂತ್ ಭಂಡಾರಿ ಸ್ಕೌಟ್ಸ್ ಮತ್ತು ಗೈಡ್ಸ್ ಇತಿಹಾಸ ಹಾಗೂ ಕ್ಯಾಂಪಿಂಗ್ ಟಾಪಿಕ್ , ಶ್ರೀಮತಿ ಮಮತಾ ಆರ್. ಪ್ರಥಮ ಚಿಕಿತ್ಸೆ, ಗಂಗಾಧರ ಪಟಗಾರ ನಾಟ್ಸ್ ಮತ್ತು ಲ್ಯಾಶಿಂಗ್, ಎನ್. ಎಸ್. ಭಾಗ್ವತ್ ಅಂದಾಜಿಸುವಿಕೆ ಬಗ್ಗೆ ತರಬೇತಿ ನೀಡಿದರು. ಶಿಬಿರಕ್ಕೆ ಶಿರಸಿ ತಾಲೂಕಾ ದೈಹಿಕ ಶಿಕ್ಷಣ ಪರಿವೀಕ್ಷಕರಾದ ಶ್ರೀ ಬಿ.ವಿ.ಗಣೇಶ ಭೇಟಿ ನೀಡಿ ತರಬೇತಿ ಯನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು. ರಾಜ್ಯ ಸಂಸ್ಥೆ ನೀಡಿದ ಜ್ಯೂಸ್ ಹಾಗೂ ಬಿಸ್ಕತ್ ಅನ್ನು ಸ್ಕೌಟ್ಸ್ ಮತ್ತು ಗೈಡ್ಸ್ ಗಳಿಗೆ ನೀಡಲಾಯಿತು. ಭಾಗವಹಿಸಿದ ಎಲ್ಲರಿಗೂ ಪೆನ್ನು ಹಾಗೂ ಕ್ರೇಯಾನ್ಸ್ ಅನ್ನು ಗೈಡ್ ಕ್ಯಾಪ್ಟನ್ ಶ್ರೀಮತಿ ಸುಧಾ ಪಟಗಾರ ನೀಡಿದರು.
ಸ.ಹಿ.ಪ್ರಾ.ಶಾಲೆ ಸುಗಾವಿಯ ಮುಖ್ಯಾಧ್ಯಾಪಕರಾದ ಶ್ರೀ ಯಶವಂತ ಹೊನ್ನಾವರ, ಗೈಡ್ ಕ್ಯಾಪ್ಟನ್ ಶ್ರೀಮತಿ ಸುಧಾ ಪಟಗಾರ ಹಾಗೂ ಶಿಕ್ಷಕ ವೃಂದದವರು ಬೇಸಿಗೆ ಶಿಬಿರವನ್ನು ಅಚ್ಚುಕಟ್ಟಾಗಿ ಸಂಘಟಿಸಿ ರುಚಿಕಟ್ಟಾದ ಭೋಜನ ವ್ಯವಸ್ಥೆ ಮಾಡಿದ್ದರು. 65 ಸ್ಕೌಟ್ಸ್ ಮತ್ತು ಗೈಡ್ಸ್ ಗಳು ಶಿಬಿರದಲ್ಲಿ ಪಾಲ್ಗೊಂಡಿದ್ದರು. ಶಿಬಿರದಲ್ಲಿ ಸಂಪನ್ಮೂಲ ಶಿಕ್ಷಕರಾಗಿ ಕಾರ್ಯನಿರ್ವಹಿಸಿದ ಸ್ಕೌಟ್ ಮಾಸ್ಟರ್ ಹಾಗೂ ಗೈಡ್ ಕ್ಯಾಪ್ಟನ್ ಗಳಿಗೆ ಸುಗಾವಿ ಶಾಲಾ ವತಿಯಿಂದ ಸ್ಮರಣಿಕೆ ನೀಡಿ ಗೌರವಿಸಲಾಯಿತು.