Slide
Slide
Slide
previous arrow
next arrow

ಏ.9ಕ್ಕೆ ನಂದಿಗದ್ದೆಯಲ್ಲಿ ‘ವಸಂತ ನಾದಾಮೃತ’

300x250 AD

ಜೋಯಿಡಾ: ತಾಲೂಕಿನ ಗುಂದದ ನಾದವರ್ಷಣಿ ಟ್ರಸ್ಟ್‌ನಿಂದ ಯುಗಾದಿ ಹಬ್ಬದ ಪ್ರಯುಕ್ತ ಏಪ್ರಿಲ್ 9 ರಂದು ‘ವಸಂತ ನಾದಮೃತ’ ಕಾರ್ಯಕ್ರಮ ನಡೆಯಲಿದೆ.

ಅಂದು ಸಾಯಂಕಾಲ 5:30 ಗಂಟೆಗೆ ನಂದಿಗದ್ದೆಯ ಬಯಲು ರಂಗ ಮಂದಿರದಲ್ಲಿ ನಡೆಯಲಿರುವ ಸಭಾ ಕಾರ್ಯಕ್ರಮವನ್ನು ಯರಮುಖದ ಸೋಮೇಶ್ವರ ದೇವಸ್ಥಾನದ ಟ್ರಸ್ಟ್ ಕಮಿಟಿ ಅಧ್ಯಕ್ಷ ವೇದಮೂರ್ತಿ  ಪ್ರಸನ್ನ ಆರ್. ಭಟ್ಟ  ಉದ್ಘಾಟಿಸಲಿದ್ದಾರೆ. ನಂದಿಗದ್ದೆ ಗ್ರಾಮ ಪಂಚಾಯತ ಅಧ್ಯಕ್ಷ ಅರುಣ ದೇಸಾಯಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ.

ಹಿರಿಯರಾದ ಎಸ್. ಎಸ್. ಭಟ್ಟ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಬಿ. ಎನ್. ವಾಸರೆ, ಯರಮುಖದ ಎನ್. ಎಸ್. ಎಸ್. ಸಂಘದ ಅಧ್ಯಕ್ಷ ಆರ್. ವಿ. ದಾನಗೇರಿ, ಶ್ರೀ ಸ್ವರ್ಣಮಲ್ಲಿ ಮಠದ ಗುಂದ ಸೀಮಾ ಪರಿಷತ್ ಅಧ್ಯಕ್ಷ ಡಿ.ಟಿ. ಹೆಗಡೆ, ಮಾತ್ರ ಮಂಡಳಿಯ ಅಧ್ಯಕ್ಷೆ ಸೀತಾ ದಾನಗೇರಿ ಅತಿಥಿಗಳಾಗಿರಲಿದ್ದಾರೆ.

ಸಂಜೆ 6:30 ರಿಂದ ವಿದ್ಯಾಲಯದ ಹಿರಿಕಿರಿಯ ವಿದ್ಯಾರ್ಥಿಗಳಿಂದ ಗಾಯನ ಕಾರ್ಯಕ್ರಮ, ರಾತ್ರಿ 8.30 ರಿಂದ ಪ್ರಸಿದ್ಧ ಸಂಗೀತ ಕಲಾವಿದರಾದ ವಿದ್ವಾನ್ ವಿನಾಯಕ್ ಹೆಗಡೆಯವರಿಂದ ಶಾಸ್ತ್ರೀಯ ಗಾಯನ ಮತ್ತು ಭಕ್ತಿಸಂಗೀತ ಕಾರ್ಯಕ್ರಮ ನಡೆಯಲಿದೆ.

300x250 AD

ಸತೀಶ್ ಭಟ್, ಹೆಗ್ಗಾರ್ ವಿಘ್ನೇಶ ಭಾಗವತ, ಯಲ್ಲಾಪುರ ಹಾರ್ಮೋನಿಯಂ ಸಾಥ್ ನೀಡಿದರೆ, ವಿದ್ವಾನ್ ಶೇಷಾದ್ರಿ ಅಯ್ಯಂಗಾರ್ ನಾಗೆಂದ್ರ ವೈದ್ಯ ,ಹೆಗ್ಗಾರ್ ತಬಲಾ ಸಾಥ್ ನೀಡಲಿದ್ದಾರೆ ಎಂದು

ನಾದವರ್ಷಿಣಿ ಟ್ರಸ್ಟ್ ನ ಅಧ್ಯಕ್ಷ ಸುಧಾಮ ದಾನಗೇರಿ ತಿಳಿಸಿದ್ದಾರೆ.

Share This
300x250 AD
300x250 AD
300x250 AD
Back to top