ಜೊಯಿಡಾ: ರಾಜ್ಯ ಆಡಳಿತ ಸುಧಾರಣಾ ಸಮಿತಿ ಅಧ್ಯಕ್ಷರು ಶಾಸಕರೂ ಆಗಿರುವ ಆರ್.ವಿ.ದೇಶಪಾಂಡೆ ಜೊಯಿಡಾದ ಹನಿ ಪಾರ್ಕ್‌ಗೆ ಭೇಟಿ ನೀಡಿದರು.
ಈ ಸಂದರ್ಭದಲ್ಲಿ ಹನಿಪಾರ್ಕ್‌ನ ವಿವಿಧ ಹಂತದ ಜೇನು ಕೃಷಿಯನ್ನು ಕಂಡು ಅತ್ಯಂತ ಸಂತಸಗೊಂಡರು. ಕಾಡುಮನೆ ಹನಿ ಪಾರ್ಕ್‌ನ ನರಸಿಂಹ ಚಾಪಖಂಡರೊಂದಿಗೆ ಜೇನು ಕೃಷಿಯ ಕುರಿತು ಮಾತನಾಡಿ ಜೇನು ಹುಳಗಳನ್ನು ಸ್ಪರ್ಶಿಸಿ ಇದೊಂದು ಅದ್ಭುತ ಎಂದರು. ಈ ಸಂದರ್ಭದಲ್ಲಿ ಮಾತನಾಡಿದ ದೇಶಪಾಂಡೆ ಜೇನು ಕೃಷಿಯನ್ನು ವಿದ್ಯಾರ್ಥಿ ದೇಶೆಯಿಂದಲೇ ಮಕ್ಕಳಿಗೆ ಪಾಠ ಮಾಡಿದರೆ ಜೇನು ಕೃಷಿಯ ಜೊತೆಗೆ ಇತರ ಕೃಷಿಗಳೂ ಉತ್ತಮವಾಗಿ ಬೆಳೆಯುತ್ತವೆ. ಜೇನಿಲ್ಲದೆ ಏನು ಇಲ್ಲ ಎಂದು ಹೇಳಿ ಇಕೋ ಟೂರಿಸಂ ದೃಷ್ಟಿಯಿಂದ ಈ ತರದ ಕಾರ್ಯಗಳು ಶ್ಲಾಗನೀಯ ಇದನ್ನು ಮುಂದುವರೆಸಿ, ರಾಜ್ಯದಲ್ಲಿ ಇದೊಂದು ಅದ್ಭುತ ಕೆಲಸ ಎಂದರು.
ಈ ಸಂದರ್ಭದಲ್ಲಿ ಶಾಸಕರ ಎದುರಿನಲ್ಲಿಯೇ ಜೇನು ತುಪ್ಪವನ್ನು ತೆಗೆದು ಸವಿಯಲು ನೀಡಲಾಯಿತು. ಖಾಸಗಿ ಕಾರ್ಯಕ್ರಮದ ನಿಮಿತ್ತ ಬಂದ ಶಾಸಕರ ಜೊತೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿನಯ್ ದೇಸಾಯಿ ಇದ್ದರು