Slide
Slide
Slide
previous arrow
next arrow

ಬೆಣಗಾಂವ್‌ನಲ್ಲಿ ‘ಜಾಂಬವತಿ ಪರಿಣಯ’ ಸಂಪನ್ನ

300x250 AD

ಶಿರಸಿ: ತಾಲೂಕಿನ ದೇವನಳ್ಳಿ ಹತ್ತಿರದ ಬೆಣಗಾಂವ್‌ದಲ್ಲಿ ಚೌಡೇಶ್ವರಿ ದೇವಿಯ 4ನೇ ವಾರ್ಷಿಕೋತ್ಸವದ ಅಂಗವಾಗಿ ಜಾಂಬವತಿ ಪರಿಣಯ ತಾಳಮದ್ದಲೆ ವೀರ ಮಾರುತಿ ಕದಂಬೇಶ್ವರ ಯಕ್ಷಕೂಟ ಹೆಗ್ಗರಣಿ ಅವರಿಂದ ಸಂಪನ್ನಗೊಂಡಿತು. ಹೆಬ್ರೆ ಕುಟುಂಬದ ತಿಮ್ಮು ಶಿವೆ ಗೌಡ ಬೆಣಗಾಂವ್ ಅವರ ಪ್ರಾಯೋಜಿಕತ್ವದಲ್ಲಿ ಈ ಕಲಾರಾದನೆ ನಡೆಯಿತು.

ಹಿಮ್ಮೇಳದಲ್ಲಿ ಭಾಗವತಿಕೆಯಲ್ಲಿ ಶ್ರೀನಿವಾಸ ಭಾಗವತ ಮತ್ತಿಘಟ್ಟಾ, ಮೃದಂಗದಲ್ಲಿ ವಿಠ್ಠಲ ಪೂಜಾರಿ ಮಂಚಿಕೇರಿ ಸಾಥ್ ನೀಡಿದರು. ಮುಮ್ಮೇಳದಲ್ಲಿ ಬಲರಾಮನಾಗಿ ಡಾ. ಜಿ.ಎ. ಹೆಗಡೆ ಸೋಂದಾ, ವಿಜೃಂಭಿಸಿದರು. ಕೃಷ್ಣನಾಗಿ ರಘುಪತಿ ನಾಯ್ಕ ಹೆಗ್ಗರಣಿ, ಮುದ ನೀಡಿದರು. ಸತ್ರಾರ್ಜಿತನಾಗಿ ಜಿನದತ್ತ ಜೈನ ಬೆಣಗಾಂವ್, ನಾರದ ಮತ್ತು ಜಾಂಬವತಿಯಾಗಿ ಈಶ್ವರ ಗೌಡ ಬೆಣಗಾಂವ್, ಜಾಂಬವನಾಗಿ ಎಮ್.ಟಿ.ಗೌಡ ಅರೇಹಳ್ಳ, ಅಖ್ಯಾನಕ್ಕೆ ಮೆರಗು ತಂದರು.
ಸಭಾ ಕಾರ್ಯಕ್ರಮದಲ್ಲಿ ಕೂಟದ ಮುಖ್ಯಸ್ಥ ರಘುಪತಿ ನಾಯ್ಕ ಹೆಗ್ಗರಣಿ ಎಲ್ಲರನ್ನು ಸ್ವಾಗತಿಸಿ ಕಲಾವಿದರನ್ನು ಪರಿಚಯಿಸಿ ಗ್ರಾಮೀಣದಲ್ಲಿ ಇರುವ ಯಕ್ಷಗಾನ ಶ್ರದ್ಧೆಯನ್ನು ಪ್ರಶಂಸಿಸಿದರು. ಅಧ್ಯಕ್ಷೀಯ ನುಡಿಯಲ್ಲಿ ಯಕ್ಷಗಾನ ವಿದ್ವಾಂಸ ಡಾ. ಜಿ. ಎ. ಹೆಗಡೆ ಸೋಂದಾ ಮಾತಾಡಿ, ಯಾವುದೇ ಕಲೆಯು ಹಲವರಲ್ಲಿ ಕೆಲವರನ್ನು ಮಾತ್ರ ಕೈಬೀಸಿ ಕರೆದು, ಅವರಲ್ಲಿ ಸತ್ವವಿರುವ ಕೆಲವರನ್ನು ಮಾತ್ರ ಉಳಿಸಿಕೊಳ್ಳುತ್ತದೆ. ಹಾಗಾಗಿ ಕಲಾವಂತರಾಗಿ ಮನ್ನಣೆ ಪಡೆದು ಕಲಾ ಕ್ಷೇತ್ರದಲ್ಲಿ ಉಳಿದು ಕಲಾವಿದರಾಗಿ ಗೌರವ ಪಡೆಯುವುದು ಜೀವನದ ಉನ್ನತ ಸೌಭಾಗ್ಯಗಳಲ್ಲಿ ಒಂದಾಗಿದೆ ಎಂದರು. ದೇವಿಯ ಸನ್ನಿಧಾನದಲ್ಲಿ ಪೂಜಾರಾಧನೆ, ಅನ್ನಸಮಾರಾಧನೆ ಜೊತೆಗೆ ಕಲಾರಾಧನೆ ನಡೆದಿದ್ದು ಯಜ್ಞವೊಂದನ್ನು ನಡೆಸಿದ ಪುಣ್ಯ ಪ್ರಾಪ್ತಿಯಾಗಿದೆ ಎಂದರು. ಗ್ರಾಮೀಣರು ಅನಾದಿಯಿಂದಲೂ ಕಲಾಪ್ರಿಯರಾಗಿ ಕಲಾಪೋಷಕರಾಗಿದ್ದು ಅತ್ಯಂತ ಹೆಮ್ಮೆಯ ಸಂಗತಿ. ಈ ಸಂಸ್ಕೃತಿ ಮುನ್ನಡೆದರೆ ಕಲೆ ಉಳಿಯುತ್ತದೆ ಮತ್ತು ಬೆಳೆಯುತ್ತದೆ ಎಂದರು.
ಶ್ರೀನಿವಾಸ ಭಾಗವತ ಮತ್ತಿಘಟ್ಟಾ ಮಾತನಾಡಿ ದೇವನಳ್ಳಿ ಬೆಣಗಾಂವ್ ಭಾಗದಲ್ಲಿ ಯಕ್ಷಗಾನ ಕಾರ್ಯಕ್ರಮಗಳಿಗೆ ನೂರಾರು ವರ್ಷದ ಇತಿಹಾಸವಿದೆ ಎಂದರು ಈಶ್ವರ ಗೌಡ ಬೆಣಗಾಂವ್ ವಂದನಾರ್ಪಣೆ ಗೈದರು. ತಿಮ್ಮ ಶಿವೆ ಗೌಡ ಕುಟುಂಬದವರು ಕಲಾವಿದರನ್ನು ಕಲಾಗೌರವದೊಂದಿಗೆ ಸತ್ಕರಿಸಿದರು.

300x250 AD
Share This
300x250 AD
300x250 AD
300x250 AD
Back to top