ಯಲ್ಲಾಪುರ: ವೃತ್ತಿಗೆ ನಿವೃತ್ತಿ ಹೊರತು ಒಡನಾಟಕ್ಕೆ ಅಲ್ಲ. ಸದಾ ನಿಮ್ಮ ಸುಖದುಃಖದಲ್ಲಿ ನಿಮ್ಮೊಂದಿಗೆ ನಾನು ಇರುತ್ತೇನೆ ಎಂದು ಲೋಕೋಪಯೋಗಿ ಇಲಾಖೆಯಲ್ಲಿ ಕಾರ್ಯನಿರ್ವಾಹಕ ಅಧಿಕಾರಿಯಾಗಿ ಸುದೀರ್ಘ ಸೇವೆ ಸಲ್ಲಿಸಿ ನಿವೃತ್ತರಾದ ವಿ.ಎಂ ಭಟ್ಟ ಹೇಳಿದರು.
ಅವರು ಶನಿವಾರ ಸಂಜೆ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಇಲಾಖೆ ವತಿಯಿಂದ ಹಮ್ಮಿಕೊಂಡಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿ ಯಲ್ಲಾಪುರ,ಜೋಯಿಡಾ, ಹಳಿಯಾಳ, ಮುಂಡಗೋಡ, ಶಿರಸಿ ತಾಲೂಕುಗಳಲ್ಲಿಸೇವೆ ಸಲ್ಲಿಸಿದ್ದು ಅವಿಸ್ಮರಣೀಯ ಅನುಭವ.ಅದರಲ್ಲೂ ಯಲ್ಲಾಪುರದಲ್ಲಿ ೬ ವರ್ಷಗಳ ಸೇವಾವಧಿಯಲ್ಲಿ ಬೇಡ್ತಿ ಸೇತುವೆ, ೩೦ ಕಿಮೀ ಕಾಂಕ್ರೀಟ್ ರಸ್ತೆ, ೫೦ಕಿಮೀಗಿಂತಲೂ ಅಧಿಕ ಹೊಸರಸ್ತೆ ಸೇರಿದಂತೆ ಅನೇಕ ಉತ್ತಮ ಕೆಲಸಗಳಾಗಿದ್ದು, ಯಾವುದೇ ಕಳಪೆ ಕೆಲಸವಾಗಿಲ್ಲ ಎಂಬ ಸಂತೃಪ್ತಿಯೊಂದಿಗೆ ನಿವೃತ್ತಿ ಹೊಂದಿದ್ದೇನೆ ಎಂದರಲ್ಲದೇ ಲೋಕೊಪಯೋಗಿ ಇಲಾಖೆಯಲ್ಲಿ ಸಲ್ಲಿಸುವುದರೊಂದಿಗೆ, ನೌಕರರ ಸಂಘಟನೆ, ಸಾಹಿತ್ಯ ಸೇರಿದಂತೆ ವಿವಿಧ ಕ್ಷೇತ್ರದಲ್ಲಿ ಅಪಾರ ಅನುಭವ ಪಡೆಯಲು ತಮ್ಮೆಲ್ಲರ ಸಹಕಾರದಿಂದ ಸಾಧ್ಯವಾಗಿದೆ ಎಂದರು.
ಪಿಡಬ್ಲೂಡಿ ಎಕ್ಸಿಕ್ಯುಟಿವ್ ಎಂಜಿನೀಯರ್ ಎಚ್. ಮಲ್ಲಿಕಾರ್ಜುನ ಮಾತನಾಡಿದರು. ಈ ಸಂದರ್ಭದಲ್ಲಿ ವಿ.ಎಮ್. ಭಟ್ಟರ ಪತ್ನಿ ಜ್ಯೋತಿ ಭಟ್ಟ ,ಪುತ್ರ ಪ್ರಣವ ಭಾರದ್ವಾಜ, ನೂತನ ಎಇಇ ಮಹದೇವಪ್ಪಾ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಭಿಯಂತರ ಮಹೇಶ ನಾಯ್ಕ, ಪ್ರಮುಖರಾದ ನರಸಿಂಹ ಅಡಿ, ಸುಬ್ರಾಯ ಭಟ್ಟ, ಸೇರಿದಂತೆ ಸಿರಸಿ, ಜೋಯಿಡಾ, ಮುಂಡಗೋಡ ಹಳಿಯಾಳದ ಅಧಿಕಾರಿಗಳು ಸಿಬ್ಬಂದಿಗಳು ಇದ್ದರು. ತಾಲೂಕ ಪಂಚಾಯತ ಕಾರ್ಯ ನಿರ್ವಹಣಾಧಿಕಾರಿ ಎನ್.ಆರ್.ಹೆಗಡೆ ನಿರ್ವಹಿಸಿದರು.