ಯಲ್ಲಾಪುರ: ಪಟ್ಟಣದ ಗಂಗಾಧರ ಕಾಲೋನಿಯಲ್ಲಿ ಕಳೆದ ೩೫ ವರ್ಷದಿಂದ ಅತಿಕ್ರಮಣ ಮಾಡಿಕೊಂಡು ವಾಸ್ತವ ಮಾಡಿಕೊಂಡು ಬಂದಿದ್ದೇವೆ. ಆದರೆ ಕನಿಷ್ಠ ಮೂಲಭೂತ ಸೌಲಭ್ಯಗಳಿಲ್ಲದೇ ಸಮಸ್ಯೆಯಾಗಿದೆ ಎಂದು ಗಂಗಾಧರ ಕಾಲನಿಯ ಮಹಿಳಾ ಸಂಘದ ಅಧ್ಯಕ್ಷೆ ಸರೋಜಾ ರಾಠೋಡ ದೂರಿದರು.
ಅವರು ಈ ಬಗ್ಗೆ ಮಾಹಿತಿ ನೀಡಿ ಇಲ್ಲಿ ವಾಸವಾಗಿರುವ ೭೦ ಕುಟುಂಬದಿಂದ ೨೫೦ ಜನ ವಾಸ್ತವವಾಗಿದ್ದೇವೆ. ಇಲ್ಲಿನ ನಿವಾಸಿಗಳಿಗೆ ಕರೆಂಟ್ ಕೊಟ್ಟಿಲ್ಲ. ನೀರು ತಾತ್ಕಾಲಿಕ ಕೊಟ್ಟಿದ್ದಾರೆ. ವಾಸ್ತವ್ಯದ ಜಾಗಕ್ಕೆ ಬೇರೆ ಮಾಲಿಕರಿದ್ದಾರೆ ಎನ್ನಲಾಗಿದೆ. ಈಬಗ್ಗೆ ಮಾಹಿತಿ ಇಲ್ಲ. ಜಿಲ್ಲಾಧಿಕಾರಿ ಅವರಿಗೆ ಮನವಿ ಕೊಟ್ಟಿದ್ದೇವೆ. ಎಲ್ಲಾ ದಾಖಲೆ ಕೊಟ್ಟರೂ ಹೆಸ್ಕಾಂ ಕರೆಂಟ್ ಕೊಟ್ಟಿಲ್ಲ. ಮನೆ ನಂಬರ್ ಇದ್ದು,೨೦೨೦ ರವರೆಗೆ ಟ್ಯಾಕ್ಸ್ ತುಂಬಿದ್ದೇವೆ. ನಂತರ ಟ್ಯಾಕ್ಸ್ ತುಂಬಿಲ್ಲ. ಮಾಜಿ ಸಚಿವ ಶ್ರೀರಾಮಲು ಬಂದ ಸಂದರ್ಭದಲ್ಲಿ ಸಮಾಜ ಕಲ್ಯಾಣ ಹಾಗೂ ಹೆಸ್ಕಾಂ ಇಲಾಖೆಗೆ ಆದೇಶ ಇದ್ದಾಗ್ಯೂ ಕರೆಂಟ್ ಕೊಟ್ಟಿಲ್ಲ.
ಎಂಎಲ್‌ಸಿ ಶಾಂತಾರಾಮ ಸಿದ್ದಿಗೆ ಹೇಳಿದರೂ ಒಂದಿನವೂ ಬಂದಿಲ್ಲ. ಸಮಸ್ಯೆಗೆ ಸ್ಪಂದಿಸಿಲ್ಲ. ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಅವರಿಗೆ ಹೇಳಿದರೂ ಕ್ರಮ ಆಗಿಲ್ಲ. ಯಾವ ಕಚೇರಿಗೆ ಹೋದರೂ,ಗಂಗಾಧರ ಕಾಲನಿ ಜನರ ಸಮಸ್ಯೆ ಆಲಿಸುತ್ತಿಲ್ಲ ಎಂದು ಆರೋಪಿಸಿದರು.
ಕಳೆದ ಮೂವತ್ತು ವರ್ಷಗಳಿಂದ ಯಾವುದೇ ಮೂಲಭೂತ ಸಿಗದ ಕಾರಣ ಬರುವ ಲೋಕಸಭಾ ಚುನಾವಣೆ ಬಹಿಷ್ಕಾರ ಮಾಡುವುದಾಗಿ ಎಚ್ಚರಿಸಿದರು.
ಸಾಮಾಜಿಕ ಕಾರ್ಯಕರ್ತ ಪ್ರಕಾಶ ಕಟ್ಟಿಮನಿ, ಪ್ರಮುಖರಾದ ಸಂಧ್ಯಾ ಗೋಕಾಕ್,ಶೀಲಾ ಸಿದ್ದಿ,ಬಸವರಾಜ ಶಿಗ್ಗಾಂವಿ,ನರಸವ್ವ ಇದ್ದರು.