ದಾಂಡೇಲಿ : ಸರಕು ಮತ್ತು ಸೇವಾ ತೆರಿಗೆಯು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜಾರಿಗೊಳಿಸಿದ ಸಮಗ್ರ ಪರೋಕ್ಷ ತೆರಿಗೆಗಳು. ಇದು ಉತ್ಪಾದನೆ, ಮಾರಾಟ ಮತ್ತು ಬಳಕೆಗೆ ಸಂಬಂಧಪಟ್ಟಂತೆ ವಿಧಿಸುವ ತೆರಿಗೆಯಾಗಿದೆ. ತೆರಿಗೆ ಇಲಾಖೆಗೆ ನೀಡಬೇಕಾದ ಎಲ್ಲ ಮಾಹಿತಿಗಳನ್ನು ನೀಡದೇ ಇದ್ದರೆ ಅದು ಸರ್ಫೆಕ್ಷನ್ ಆಗುತ್ತದೆ. ಉದ್ದಿಮೆದಾರರು ಶೇರ್‌ಗಳನ್ನು ಮಾರಾಟ ಮಾಡಿದಾಗ, ಜಮೀನು ಮಾರಾಟ ಮಾಡಿದಾಗ ಇವರಿಗ್ಯಾಕೆ ಇದೆಲ್ಲ ಎಂದು ಬಹಳ ಬಾರಿ ಜಿಎಸ್‌ಟಿ ಪೋರ್ಟಲ್‌ನಲ್ಲಿ ಮಾಹಿತಿ ನೀಡುವುದಿಲ್ಲ. ಎಲ್ಲ ಮಾಹಿತಿಗಳನ್ನು ನೀಡಬೇಕು ಎಂದು ಚಾರ್ಟಡ್ ಅಕೌಂಟೆಂಟ್ ಸುಬ್ರಹ್ಮಣ್ಯ ಗಾಂವಕರ ಹೇಳಿದರು.
ಇತ್ತೀಚಿನ ದಿನಗಳಲ್ಲಿ ಜಿಎಸ್‌ಟಿ ಬಗ್ಗೆ ಜನರಲ್ಲಿರುವ ಗೊಂದಲಗಳನ್ನು ನಿವಾರಿಸುವ ನಿಟ್ಟಿನಲ್ಲಿ ನಗರದ ಆಜಾದ್ ನಗರದ ಶೇಖರ್ ಆಸ್ಪತ್ರೆಯ ಹಿಂಭಾಗದಲ್ಲಿರುವ ಗಾಂವಕರ್ & ಅಸೋಸಿಯೆಟ್ಸ್ ಕಾರ್ಯಾಲಯದಲ್ಲಿ ಚಾರ್ಟೆಡ್ ಅಕೌಂಟೆಂಟ್ ಸುಬ್ರಹ್ಮಣ್ಯ ಗಾಂವಕರ ಅವರಲ್ಲಿ ಚರ್ಚೆ ನಡೆಸಿ ಮಾಹಿತಿಯನ್ನು ಪಡೆದುಕೊಳ್ಳಲಾಯಿತು.