Slide
Slide
Slide
previous arrow
next arrow

ಲಯನ್ಸ ಪಿ.ಯು. ಕಾಲೇಜಿಗೆ ಶೇ.100 ಫಲಿತಾಂಶ

300x250 AD

ಶಿರಸಿ:2023-24 ನೇ ಸಾಲಿನಿಂದ ನೂತನವಾಗಿ ಆರಂಭವಾದ ಅತ್ಯಂತ ವಿಶೇಷ ರೀತಿಯಲ್ಲಿ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರಿತ ಶಿರಸಿಯ ಡಾ. ಭಾಸ್ಕರ ಸ್ವಾದಿ ಮೆಮೋರಿಯಲ್ ಲಯನ್ಸ್ ಪಿ.ಯು. ಕಾಲೇಜು ಶನಿವಾರ ಪ್ರಕಟವಾದ ಪ್ರಥಮ ಪಿ.ಯು. ಬೋರ್ಡ ಪರೀಕ್ಷಾ ಫಲಿತಾಂಶದಲ್ಲಿ ಶೇ. 100 ರ ಸಾಧನೆ ಗೈದಿದೆ. ಪರೀಕ್ಷೆಗೆ ಕುಳಿತ ಎಲ್ಲಾ ವಿದ್ಯಾರ್ಥಿಗಳು ಶೇ. 70ಕ್ಕಿಂತ ಹೆಚ್ಚು ಅಂಕ ಪಡೆದು ತೇರ್ಗಡೆಯಾಗುವದರೊಂದಿಗೆ ವಿಶಿಷ್ಟ ದಾಖಲೆ ಮೆರೆದಿದ್ದಾರೆ.

ಪ್ರಥಮ ಪಿ.ಯು ವಿಜ್ಞಾನ ವಿಭಾಗದಲ್ಲಿ ಕು. ಚಿನ್ಮಯ ಶಾಂತಾರಾಮ ಭಟ್ ಶೇ. 97 ಅಂಕದೊಂದಿಗೆ ಕಾಲೇಜಿಗೆ ಪ್ರಥಮ ಸ್ಥಾನ ಪಡೆದರೆ. ಕು. ಅಯನಾ ವಾಯ್. ಶೇ. 94 ಅಂಕದೊಂದಿಗೆ ದ್ವಿತೀಯ ಸ್ಥಾನ ಹಾಗೂ ಕು. ಚಿನ್ಮಯೀ ಶೇ. 93 ಅಂಕದೊಂದಿಗೆ ತೃತೀಯ ಸ್ಥಾನ ಪಡೆದಿದ್ದಾರೆ.

ಸಾಧನೆಗೈದ ವಿದ್ಯಾರ್ಥಿಗಳಿಗೆ, ಇವರ ಸಾಧನೆಗೆ ಬೆನ್ನೆಲುಬಾಗಿ ನಿಂತ ಪಾಲಕರಿಗೆ ,  ಶಿರಸಿ ಲಯನ್ಸ ಎಜುಕೇಷನ್ ಸೊಸೈಟಿಯ  ಅಧ್ಯಕ್ಷರು ಹಾಗೂ ಸರ್ವ  ಸದಸ್ಯರು, ಬೇಸ್ ಎಜುಕೆಷನ್  ಬೆಂಗಳೂರಿನ ತಂಡ,   ಲಯನ್ ಸಮೂಹ ಶಾಲೆ ಹಾಗೂ ಕಾಲೇಜಿನ  ಪ್ರಾಚಾರ‍್ಯರು , ಬೋಧಕ -ಬೋಧಕೇತರ ವೃಂದ, ಶಿರಸಿ  ಲಯನ್ಸ್  ಕ್ಲಬ್ ಬಳಗ   ಆಶೀರರ್ವಾದಪೂರ್ವಕವಾಗಿ ಅಭಿವಂದಿಸಿ, ಶುಭ ಹಾರೈಸಿದ್ದಾರೆ.

300x250 AD

2024- 25ನೇ ಸಾಲಿನ ಪ್ರಥಮ ಪಿ.ಯು ವಿಜ್ಞಾನ ಹಾಗೂ ವಾಣಿಜ್ಯ ವಿಭಾಗದ ಪ್ರವೇಶ ಪ್ರಕ್ರಿಯೆ ನಡೆದಿದ್ದು, ಆಸಕ್ತ ಪಾಲಕರು ತಮ್ಮ ಮಕ್ಕಳನ್ನು ಸೇರಿಸಬಹುದಾಗಿದೆ. ಉತ್ತರಕನ್ನಡ ಜಿಲ್ಲೆಯಲ್ಲಿಯೇ ಮೊಟ್ಟಮೊದಲ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರಿತ ಕಾಲೇಜು ಶಿರಸಿ ಲಯನ್ಸ ಅಕಾಡೆಮಿ ಹಾಗೂ ಬೇಸ್ ಎದುಕೇಷನ್ ಬೆಂಗಳೂರು ಇವರ ಸಹಯೋಗದಲ್ಲಿ ನಡೆಯುತ್ತಿದೆ. ಸ್ಪರ್ಧಾತ್ಮಕ ಪರೀಕ್ಷಾ ತರಬೇತಿಗಾಗಿ ದೂರದೂರಿಗೆ ಮಕ್ಕಳನ್ನು ಬಿಡಬೇಕಾದ ಅನಿವಾರ್ಯತೆಯಿರುವ ಶಿರಸಿಯ ಪಾಲಕರ ಬಹುದೊಡ್ಡ ಕೊರತೆಯನ್ನು ಲಯನ್ಸ್ ಎಜುಕೆಷನ್ ಸೊಸೈಟಿ ನೀಗಿಸಿದೆ. ಆಸಕ್ತರು ಕೂಡಲೆ ಕಾಯಾಲಯವನ್ನು ಸಂಪರ್ಕಿಸಲು ಕೋರಿದೆ.

Share This
300x250 AD
300x250 AD
300x250 AD
Back to top