Slide
Slide
Slide
previous arrow
next arrow

ರಂಗಭೂಮಿ ಕಲಾವಿದ ಏಸು ಪ್ರಕಾಶ್ ನಿಧನ

300x250 AD

ಹೊನ್ನಾವರ : ಖ್ಯಾತ ರಂಗಭೂಮಿ ಕಲಾವಿದ, ಚಿತ್ರ ನಟ, ಸಂಘಟಕ, ಸಾಮಾಜಿಕ ಹೋರಾಟಗಾರ ಏಸು ಪ್ರಕಾಶ್ (58) ಕಲ್ಲುಕೊಪ್ಪ (ಪ್ರಕಾಶ್ ಹೆಗ್ಗೋಡು) ಅನಾರೋಗ್ಯದಿಂದ ಮೃತ ಪಟ್ಟಿದ್ದಾರೆ.

ಕನ್ನಡ ಚಿತ್ರರಂಗದಲ್ಲಿ ಖ್ಯಾತ ಖಳನಟನಾಗಿ ಪ್ರಸಿದ್ಧ ನಾಯಕ ನಟರೊಂದಿಗೆ ಅಭಿನಯಿಸಿದ್ದರು. ಇವರು ಅಲ್ಪಕಾಲದ ಅನಾರೋಗ್ಯದಿಂದ ಶನಿವಾರ ಸಂಜೆ ನಿಧನರಾಗಿದ್ದಾರೆ. ಇಂದು ಭಾನುವಾರ ಬೆಳಗ್ಗೆ 9 ಗಂಟೆಯಿಂದ ಕಲ್ಲುಕೊಪ್ಪದ (ಪುರಪ್ಪೇಮನೆ) ಅವರ ಸ್ವಗೃಹದಲ್ಲಿ ಅಂತಿಮ ದರ್ಶನಕ್ಕೆ ಅವಕಾಶ ಮಾಡಲಾಗಿದ್ದು, ಇದೇ ವೇಳೆ ರಂಗ ನಮನದ ಮೂಲಕ ಶ್ರದ್ಧಾಂಜಲಿ ಸಲ್ಲಿಸಲಾಗುವುದು ಎಂದು ತಿಳಿದು ಬಂದಿದೆ.

300x250 AD

ಇವರು ಉತ್ತರ ಕನ್ನಡ ಜಿಲ್ಲೆಗೂ ಚಿರ ಪರಿಚಿತರಾಗಿದ್ದು, ಅದರಲ್ಲೂ ಹೊನ್ನಾವರ ತಾಲೂಕಿನ ಅನೇಕ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಅವರ ಅಕಾಲಿಕ ಮರಣಕ್ಕೆ ಯಕ್ಷಗಾನ ಕಲಾವಿದ ಚಂದ್ರಹಾಸ ಗೌಡ ಹೊಸಪಟ್ಟಣ, ಸಂಘಟಕ ಲಕ್ಷ್ಮಣ ಗೌಡ ಕಾಸರಕೋಡ ಇನ್ನೂ ಅನೇಕರು ಸಂತಾಪ ಸೂಚಿಸಿದ್ದಾರೆ.

Share This
300x250 AD
300x250 AD
300x250 AD
Back to top