ಬನವಾಸಿ: ರಂಗಪಂಚಮಿ ಅಂಗವಾಗಿ ಪಟ್ಟಣದಲ್ಲಿ ಶನಿವಾರ ಬಣ್ಣದಾಟದ ಸಂಭ್ರಮ ಮನೆ ಮಾಡಿತ್ತು. ಹಿರಿಯ-ಕಿರಿಯ, ಮಹಿಳೆ- ಪುರುಷ ಹಾಗೂ ಜಾತಿ ಮತಗಳ ಭೇದವಿಲ್ಲದೇ ಪರಸ್ಪರ ಬಣ್ಣ ಹಚ್ಚಿಕೊಂಡು ಸಂಭ್ರಮಿಸಿದರು.
ಪ್ರತಿ ವರ್ಷದಂತೆ ಹೋಳಿ ಹುಣ್ಣಿಮೆಯಾದ ಐದನೇ ದಿನದಂದು ಪಟ್ಟಣದಲ್ಲಿ ರಂಗಪಂಚಮಿ ಆಚರಿಸಲಾಗುತ್ತದೆ. ಮುಂಜಾನೆ ಶ್ರೀ ಮಧುಕೇಶ್ವರ ದೇವಸ್ಥಾನದ ಮುಂಭಾಗದಿಂದ ಪಟ್ಟಣದ ರಥಬೀದಿ, ರಾಜ ಮಯೂರವರ್ಮ ಮಾರ್ಗ, ಕದಂಬ ವೃತ್ತ ಸೇರಿದಂತೆ ಹಲವೆಡೆ ಜಮಾಯಿಸಿದ್ದ ಯುವಕ-ಯುವತಿಯರು, ಸ್ನೇಹಿತರು, ಸಂಬಂಧಿಕರು ಪರಸ್ಪರ ಬಣ್ಣ ಹಚ್ಚಿಕೊಂಡು ಸಂಭ್ರಮಿಸಿ ಬಣ್ಣಗಳಲ್ಲಿ ಮಿಂದೆದ್ದರು. ಸಾಮಾನ್ಯ ಜನರಿಂದ ಹಿಡಿದು ಗಣ್ಯರವರೆಗೂ ಬಣ್ಣದ ಹಬ್ಬವನ್ನು ಅದ್ದೂರಿಯಾಗಿ ಆಚರಿಸಿದರು.