ಹೊನ್ನಾವರ: ವರ್ಲ್ಡ್ ಇಂಡೋರ್ ಕ್ರಿಕೇಟ್ ಫೌಂಡೇಶನ್ ಲಿಮಿಟೆಡ್ ನಡೆಸುವ ಒಪನ್ ಮೆನ್ಸ್ ಇಂಡೋರ್ ಕ್ರಿಕೇಟ್ ಟೀಮ್ ಗೆ ಭಾರತದ ಟೀಮಿಗಾಗಿ ಆಯ್ಕೆ ಪ್ರಕ್ರಿಯೆ ಬೆಂಗಳೂರಿನಲ್ಲಿ ನಡೆದಿದ್ದು, ಸಂದೇಶ. ಕೆ. ಹೆಗಡೆ ಕವಲಕ್ಕಿ ಈತನು ಎಲ್ಲಾ ಸುತ್ತುಗಳಲ್ಲೂ ಆಯ್ಕೆಯಾಗುವ ಮೂಲಕ ಭಾರತವನ್ನು ಪ್ರತಿನಿಧಿಸುವ ಆಟಗಾರರ ಪಟ್ಟಿಯಲ್ಲಿ ಸೇರ್ಪಡೆಯಾಗಿದ್ದಾನೆ.
ಶಾಲಾ ದಿನಗಳಲ್ಲಿ ವಿಶೇಷವಾಗಿ ಶನಿವಾರ ಮತ್ತು ರವಿವಾರ ಕವಲಕ್ಕಿ ಮತ್ತು ಹೊನ್ನಾವರದಲ್ಲಿ ಗೆಳೆಯರ ಬಳಗದ ಜೊತೆ ಕ್ರಿಕೇಟ್ ಆಡುತ್ತಿದ್ದ ಈತ ಮುಂದೆ ಕಾಲೇಜು ದಿನಗಳಲ್ಲಿ ಮಂಗಳೂರು ಮತ್ತು ಉಜುರೆಯಲ್ಲಿಯೂ ಕ್ರಿಕೇಟ್ ಆಡುವುದನ್ನು ಮುಂದುವರಿಸಿದ್ದ.
ಬಿ.ಇ. ಮುಗಿಸಿ ಬೆಂಗಳೂರಿನಲ್ಲಿ ಸಾಪ್ಟವೇರ್ ಕಂಪನಿಯಲ್ಲಿ ಉದ್ಯೋಗಿಯಾಗಿದ್ದು ರಜಾ ದಿನಗಳಲ್ಲಿ ಅಲ್ಲಿಯೂ ಕ್ರಿಕೇಟ್ ಆಟ ಮುಂದುವರೆಸಿದ್ದಾನೆ. ಬೆಂಗಳೂರಿನ ಸ್ಪಾರ್ಟನ್ ಕ್ರಿಕೆಟ್ ಕ್ಲಬ್ ಆಟಗಾರನಾಗಿ ಹಾಗೂ ಅಲ್ಲಲ್ಲಿ ನಡೆಯುವ ಟೂರ್ನಮೆಂಟ್ ಗಳಲ್ಲಿ ಸಾಕಷ್ಟು ಅವಕಾಶಗಳು ಈತನಿಗೆ ದೊರೆಯುತ್ತಿದೆ. ಜೊತೆಗೆ ಉತ್ತಮ ಪುಟ್ಬಾಲ್ ಆಟಗಾರನಾಗಿಯೂ ಸಹ ಗುರುತಿಸಿಕೊಂಡಿದ್ದಾನೆ. ಈತ ಕವಲಕ್ಕಿಯ ವಿಶ್ರಾಂತ ಉಪನ್ಯಾಸಕ ಕೆ.ವಿ.ಹೆಗಡೆ ಮತ್ತು ಸುಧಾ ದಂಪತಿಗಳ ಪುತ್ರ. ಆಯ್ಕೆಯ ಸುದ್ದಿ ತಿಳಿಯುತ್ತಿದ್ದಂತೆ ಈತನ ಜೊತೆ ಆಟಗಾರರು, ಶಾಲಾದಿನಗಳ ಶಿಕ್ಷಕ ವೃಂದ, ಸಹಪಾಠಿಗಳು, ಪಾಲಕರು ಹಾಗೂ ಬಂಧು-ಬಳಗದವರು ಶುಭಾಶಯ ಕೋರಿದ್ದಾರೆ.