Slide
Slide
Slide
previous arrow
next arrow

ಜಿಲ್ಲೆಯಿಂದಲೇ ಬದಲಾವಣೆ ಆರಂಭ: ಮೋಹನ್ ಹಲವಾಯಿ ವಿಶ್ವಾಸ

300x250 AD

ದಾಂಡೇಲಿ : ಜಿಲ್ಲೆಯಲ್ಲಿ ಐದು ಕಾಂಗ್ರೆಸ್ ಶಾಸಕರಿದ್ದು, ಈ ಬಾರಿ ಕೆನರಾ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು ನಿಶ್ಚಿತವಾಗಿದ್ದು, ಈ ಬಾರಿ ಉತ್ತರಕನ್ನಡ ಜಿಲ್ಲೆಯಿಂದಲೇ ಬದಲಾವಣೆ ಆರಂಭ ಎಂದು ದಾಂಡೇಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಮೋಹನ ಹಲವಾಯಿ ಹೇಳಿದರು.

ಅವರು ಶನಿವಾರ ಬ್ಲಾಕ್ ಕಾಂಗ್ರೆಸ್ ಕಾರ್ಯಾಲಯದಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡುತ್ತಿದ್ದರು.‌ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಡಾ.ಅಂಜಲಿ ನಿಂಬಾಳ್ಕರ್ ಅವರ ಗೆಲುವಿನ ಮೂಲಕ ಕೆನರಾ ಲೋಕಸಭಾ ಕ್ಷೇತ್ರ ಮರಳಿ ಕಾಂಗ್ರೆಸ್ ತೆಕ್ಕೆಗೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.  ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರದ ಗ್ಯಾರಂಟಿ ಯೋಜನೆ ಸೇರಿದಂತೆ ವಿವಿಧ ಜನಪರ ಯೋಜನೆಗಳು ಹಾಗೂ ಕೇಂದ್ರದ ಬಿಜೆಪಿ ಸರಕಾರದ ಜನವಿರೋಧಿ ನೀತಿಗಳು ಪಕ್ಷದ ಅಭ್ಯರ್ಥಿಯ ಗೆಲುವಿಗೆ ಸಹಕಾರಿಯಾಗಲಿದೆ. ನಮ್ಮ‌ ನಾಯಕ ಅರ್.ವಿ.ದೇಶಪಾಂಡೆಯವರ ಮಾರ್ಗದರ್ಶನದಲ್ಲಿ ಪಕ್ಷದ ಅಭ್ಯರ್ಥಿಯ ಗೆಲುವಿಗೆ ನಾವೆಲ್ಲರೂ ಒಂದಾಗಿ ಶ್ರಮಿಸುತ್ತೇವೆ. ಮಾ:31 ರಂದು ಸಂಜೆ ಪಕ್ಷದ ಮುಖಂಡರ, ಕಾರ್ಯಕರ್ತರ ಸಭೆಯು ನಗರದ ಕಾರ್ಮಿಕ ಭವನದಲ್ಲಿ ನಡೆಯಲಿದ್ದು, ಈ ಸಭೆಯಲ್ಲಿ ಅಭ್ಯರ್ಥಿ ಡಾ.ಅಂಜಲಿ ನಿಂಬಾಳ್ಕರ್ ಹಾಗೂ ನಾಯಕರಾದ ಆರ್.ವಿ.ದೇಶಪಾಂಡೆ ಭಾಗವಹಿಸಲಿದ್ದಾರೆ. ಈ ಸಭೆಯಲ್ಲಿ ಪಕ್ಷದ ಮುಖಂಡರು, ಕಾರ್ಯಕರ್ತರು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸಭೆಯನ್ನು ಯಶಸ್ಸಿಗೊಳಿಸುವಂತೆ ಮೋಹನ‌ ಹಲವಾಯಿಯವರು ಕರೆ‌ ನೀಡಿದರು.

300x250 AD

ಈ ಸಂದರ್ಭದಲ್ಲಿ ನಗರಸಭೆಯ ಸದಸ್ಯೆ  ಯಾಸ್ಮಿನ್ ಕಿತ್ತೂರು,‌ ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷರುಗಳಾದ ಕರಿಂ ಅಜ್ರೇಕರ, ಆರ್.ಪಿ.ನಾಯ್ಕ, ಸಾಧಿಕ್ ಮುಕಾಶಿ, ಪ್ರಧಾನ ಕಾರ್ಯದರ್ಶಿ ಎಸ್.ಎಸ್.ಪೂಜಾರ, ಬ್ಲಾಕ್ ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ ರೇಣುಕಾ ಬಂದಂ, ಯುವ ಕಾಂಗ್ರೆಸ್ ಅಧ್ಯಕ್ಷ ಉಸ್ಮಾನ್ ಮುನ್ನಾ ವಹಾಬ್, ಪಕ್ಷದ ಮುಖಂಡರುಗಳಾದ ದಾದಾಪೀರ್ ನದೀಮುಲ್ಲಾ, ಬಸೀರ್ ಗಿರಿಯಾಳ, ಅನಿಲ್ ದಂಡಗಲ್, ದಿವಾಕರ ನಾಯ್ಕ,ರಿಯಾಜ್ ಬಾಬು ಸೈಯದ್, ರಫೀಕ್ ಖಾನ್, ರಾಮಲಿಂಗ ಜಾಧವ್, ಪ್ರತಾಪ್ ಸಿಂಗ್ ರಜಪೂತ್, ಅಡಿವೆಪ್ಪ‌ ಭದ್ರಕಾಳಿ, ಪ್ರಭುದಾಸ ಎನಿಬೇರಾ, ಜಾಫರ್ ಮಸನಗಟ್ಟಿ, ಕಿರಣ್ ಸಿಂಗ್ ರಜಪೂತ, ಸದ್ದಾಂ ಬಾಳೆಕುಂದ್ರಿ ಮೊದಲಾದವರು ಉಪಸ್ಥಿತರಿದ್ದರು.

Share This
300x250 AD
300x250 AD
300x250 AD
Back to top