Slide
Slide
Slide
previous arrow
next arrow

ದಿ.ಪ್ರಕಾಶ ಭಾಗ್ವತ್‌ಗೆ ಕಲಾಬಳಗದಿಂದ ಶ್ರದ್ಧಾಂಜಲಿ

300x250 AD

ಯಲ್ಲಾಪುರ: ತಾಲೂಕಿನ ನಂದೊಳ್ಳಿಯ ಶ್ರೀರಾಮಲಿಂಗೇಶ್ವರ ನಾಟಕ ಕಲಾ ಬಳಗದ ಸದಸ್ಯ, ಸಾಮಾಜಿಕ ಕಾರ್ಯಕರ್ತ ದಿ.ಪ್ರಕಾಶ ಭಾಗ್ವತ ನಂದೊಳ್ಳಿ ಅವರಿಗೆ ಶುಕ್ರವಾರ ರಾತ್ರಿ ಮಾಗೋಡ ವೀರಮಾರುತಿ ದೇವಸ್ಥಾನದ ಆವಾರದಲ್ಲಿ ಕಲಾ ಬಳಗದ ವತಿಯಿಂದ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಒಂದು ನಿಮಿಷ ಮೌನಾಚರಣೆ ನಡೆಸಿ, ಭಾಗ್ವತರ ಆತ್ಮಕ್ಕೆ ಶಾಂತಿ ಕೋರಲಾಯಿತು.

ಬಳಗದ ಅಧ್ಯಕ್ಷ ನಾಗರಾಜ ಕವಡಿಕೆರೆ ಮಾತನಾಡಿ, ಪ್ರಕಾಶ ಭಾಗ್ವತ ಅವರು ಕಲಾ ಬಳಗದ ಕ್ರಿಯಾಶೀಲ ಸದಸ್ಯರಾಗಿದ್ದು, ಕಲಾ ಸಂಘಟನೆಯಲ್ಲಿ ನಿಸ್ವಾರ್ಥವಾಗಿ ಶ್ರಮಿಸುತ್ತಿದ್ದರು. ಎಲ್ಲರೊಂದಿಗೆ ಬೆರೆಯುತ್ತ ಸಾಮಾಜಿಕ ಕಾರ್ಯಗಳಲ್ಲಿ ನಿರಂತರವಾಗಿ ತಮ್ಮನ್ನು ತೊಡಗಿಸಿಕೊಂಡಿದ್ದರು ಎಂದು ಸ್ಮರಿಸಿದರು.

ಕಲಾ ಬಳಗದ ಕಾರ್ಯದರ್ಶಿಗಳಾದ ಶಿವಾನಂದ ನಾಯ್ಕ, ಸುಬ್ಬಣ್ಣ ಕಂಚಗಲ್, ಸದಸ್ಯರಾದ ಮಂಜುನಾಥ ನಾಯ್ಕ, ಮಾದೇವ ನಾಯ್ಕ, ನರಸಿಂಹ ಭಟ್ಟ ಚಂದಗುಳಿ, ಸುಬ್ಬಣ್ಣ ಕೋಡ್ನಗುಡ್ಡೆ, ಸುದರ್ಶನ ಭಾಗ್ವತ, ಶ್ರೀಧರ ಅಣಲಗಾರ, ಸುದರ್ಶನ ದೇವಿತಗ್ಗು, ದತ್ತಾತ್ರೇಯ ಪಟಗಾರ, ತಿಮ್ಮಪ್ಪ ಪಟಗಾರ, ಚಂದ್ರಶೇಖರ ಭಟ್ಟ ಕಂಚನಮನೆ, ಗಣಪತಿ ಭಂಡಾರಿ, ಗಜಾನನ ಹೆಗಡೆ, ಗಣೇಶ ಹೆಗಡೆ, ವೆಂಕಿ ನಂದೊಳ್ಳಿ, ನರಸಿಂಹ ಭಟ್ಟ ಕರಡಿಪಾಲ ಇತರರು ಭಾಗವಹಿಸಿ, ಶ್ರದ್ಧಾಂಜಲಿ ಸಲ್ಲಿಸಿದರು.

300x250 AD
Share This
300x250 AD
300x250 AD
300x250 AD
Back to top