ಶಿರಸಿ: ಕೃಷಿಯಲ್ಲಿ ರೈತರಿಗೆ ಆಗುತ್ತಿರುವ ತೊಂದರೆಗಳನ್ನು ಹೋಗಲಾಡಿಸಲು ಹಾಗೂ ರೈತ ಸದಸ್ಯರ ಜಮೀನಿನ ನಿರ್ವಹಣೆ ಮತ್ತು ಅಭಿವೃದ್ಧಿ, ಬೆಳೆಗೆ ಸೂಕ್ತ ಮಾರುಕಟ್ಟೆ ಸೇವೆ ಒದಗಿಸುವ ಸಲುವಾಗಿ ಆಶಾದಾಯಕ ಸೇವಾ ಯೋಜನೆಯನ್ನು ಟಿ.ಎಸ್.ಎಸ್. ಲಿ., ಶಿರಸಿ ಹಾಗೂ ಕೃಷಿಗ್ರಾಮ್ ಪ್ರಿಷಿಷನ್ ಫಾರ್ಮಿಂಗ್ ಪ್ರೈವೇಟ್ ಲಿ. ಬೆಂಗಳೂರು, ಇವರ ಸಹಭಾಗಿತ್ವದಲ್ಲಿ “ಕೃಷಿ ಗ್ರಾಮ ಫಾರ್ಮ ಮ್ಯಾನೇಜ್‌ಮೆಂಟ್ ” ಇದರ ಉದ್ಘಾಟನೆ ಹಾಗೂ ಸಹಕಾರ ರಂಗದಲ್ಲಿ ಪ್ರಚಲಿತ ವಿದ್ಯಮಾನಗಳ ಕುರಿತು ಚರ್ಚಿಸಲು “ಸಹಕಾರಿ ಜಾಗೃತಿ ಸಭೆ”ಯನ್ನು ಇಂದು, ಶನಿವಾರ ಮಧ್ಯಾಹ್ನ 3:00 ಘಂಟೆಗೆ ದಿ ತೋಟಗಾರ್ಸ್ ಕೋ-ಆಪರೇಟಿವ್ ಸೇಲ್ ಸೊಸೈಟಿ ಲಿ., ಶಿರಸಿ ಇದರ ಪ್ರಧಾನ ಕಛೇರಿಯ ಎರಡನೇ ಮಹಡಿಯಲ್ಲಿ ಏರ್ಪಡಿಸಲಾಗಿದ್ದು, ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಮಾಹಿತಿ ಪಡೆದುಕೊಳ್ಳಲು ಕೋರಲಾಗಿದೆ. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷರಾದ ಗೋಪಾಲಕೃಷ್ಣ ವೆಂ. ವೈದ್ಯ ಮತ್ತಿಘಟ್ಟಾ, ಇವರು ವಹಿಸಲಿದ್ದು, ಸಂಘದ ಉಪಾಧ್ಯಕ್ಷರಾದ ಮಹಾಬಲೇಶ್ವರ ಎನ್. ಭಟ್ಟ ತೋಟಿಮನೆ ಇವರು ಉಪಸ್ಥಿತರಿರಲಿದ್ದಾರೆ. ಹಾಗೂ ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಖ್ಯಾತ ಬರಹಗಾರರಾದ ಶಿವಾನಂದ ಕಳವೆ, ಸಂಘದ ಹಣಕಾಸು ಮತ್ತು ವ್ಯಾಪಾರಿ ಮಾರ್ಗದರ್ಶಕರಾದ ಪ್ರಕಾಶ ಶ್ರೀಧರ ಹೆಗಡೆ ಹುಳಗೋಳ, ಕೃಷಿಗ್ರಾಮ್ ಪ್ರಿಷಿಷನ್ ಫಾರ್ಮಿಂಗ್ ಪ್ರೈ.ಲಿ.ಬೆಂಗಳೂರು ಇವರ ವತಿಯಿಂದ ಗಣೇಶ ರಾಜಾರಾಮ ಹೆಗಡೆ, ಗಣಪತಿ ಗ. ಹೆಗಡೆ ಹುಳಗೋಳ ಇವರುಗಳು ಭಾಗವಹಿಸುವುದಾಗಿ ಪ್ರಕಟಣೆಯಲ್ಲಿ ತಿಳಿಸಲಾಗಿದೆ.