Slide
Slide
Slide
previous arrow
next arrow

ದಂಡಕಾರಣ್ಯ ಇಕೋ‌ ಪಾರ್ಕಿಗೆ ಕಾಗದ ಕಾರ್ಖಾನೆಯಿಂದ ಆಟಿಕೆ ಪರಿಕರಗಳ ವಿತರಣೆ

300x250 AD

ದಾಂಡೇಲಿ : ವೆಸ್ಟ್ ಕೋಸ್ಟ್ ಕಾಗದ ಕಾರ್ಖಾನೆಯ ಸಿಎಸ್ಆರ್ ಯೋಜನೆಯಡಿ ನಗರದ ದಂಡಕಾರಣ್ಯ ಇಕೋ ಪಾರ್ಕಿಗೆ ಅತಿ ಅವಶ್ಯವಾಗಿ ಬೇಕಾಗಿದ್ದ ರೂ: 2.5 ಲಕ್ಷ ಮೌಲ್ಯದ ಮಕ್ಕಳ ಆಟಿಕೆ ಪರಿಕರಗಳನ್ನು ವಿತರಿಸಲಾಯಿತು.

ವೆಸ್ಟ್ ಕೋಸ್ಟ್ ಕಾಗದ ಕಾರ್ಖಾನೆಯ ಕಾರ್ಯನಿರ್ವಾಹಕ ನಿರ್ದೇಶಕರಾದ ರಾಜೇಂದ್ರ ಜೈನ್ ಮಾರ್ಗದರ್ಶನದಲ್ಲಿ ಮಕ್ಕಳ‌ ಆಟಿಕೆ ಸಾಮಗ್ರಿಗಳನ್ನು ಪೂರೈಸಲಾಗಿದ್ದು, ಕಾಗದ ಕಾರ್ಖಾನೆಯ ಸಾರ್ವಜನಿಕ ಸಂಪರ್ಕಾಧಿಕಾರಿ ರಾಜೇಶ್ ತಿವಾರಿ ವಲಯಾರಣ್ಯಾಧಿಕಾರಿ ಅಪ್ಪರಾವ್ ಕಲಶೆಟ್ಟಿಯವರ ಮೂಲಕ ಹಸ್ತಾಂತರಿಸಿದರು.

300x250 AD

ಈ ಸಂದರ್ಭದಲ್ಲಿ ಕಾಗದ ಕಾರ್ಖಾನೆಯ ಸಾರ್ವಜನಿಕ ಸಂಪರ್ಕ ವಿಭಾಗದ  ಖಲೀಲ್ ಕುಲಕರ್ಣಿ, ರಾಜು ರೋಸಯ್ಯ, ಇಕೋ ಪಾರ್ಕಿನ ನಿರ್ವಹಣಾ ಸಮಿತಿಯ ಸದಸ್ಯರಾದ ಯು.ಎಸ್.ಪಾಟೀಲ, ಉಪ‌ ವಲಯಾರಣ್ಯಾಧಿಕಾರಿ ಸಂದೀಪ ನಾಯ್ಕ,ಇಕೋ‌ ಪಾರ್ಕಿನ ಮೇಲ್ವಿಚಾರಕ ದೀಪ್‌ಕ ಮೊದಲಾದವರು ಉಪಸ್ಥಿತರಿದ್ದರು.

Share This
300x250 AD
300x250 AD
300x250 AD
Back to top