Slide
Slide
Slide
previous arrow
next arrow

‘ವ್ಯಕ್ತಿಗಿಂತ ಪಕ್ಷ ಮುಖ್ಯ-ಪಕ್ಷಕಿಂತ ರಾಷ್ಟ್ರ ಮುಖ್ಯ’

300x250 AD

ಜನ-ಧ್ವನಿ: ಕುಮಟಾ: ಇನ್ನೂ ಕೆಲವೇ ದಿನಗಳಲ್ಲಿ ನಾವೆಲ್ಲ ಅತ್ಯಂತ ಕುತೂಹಲದಲ್ಲಿರುವ ಈ ರಾಷ್ಟ್ರದ ಭವಿಷ್ಯವನ್ನು ನಿರ್ಮಾಣ ಮಾಡುವ ಲೋಕ ಸಮರ ಬರುತ್ತಾ ಇದೆ. ಪ್ರಜಾಪ್ರಭುತ್ವದಲ್ಲಿ ಚುನಾವಣೆಗಳೆಂದರೆ ಜಾತ್ರೆ ಹಾಗೂ ಹಬ್ಬವಿದ್ದಂತೆ.

ಆದರೆ 2024ರ ಚುನಾವಣೆ ನಮಗೆ ಭವಿಷ್ಯದ 50 ವರ್ಷಗಳ “ವಿಕಸಿತ ಭಾರತವನ್ನು” ರೂಪಿಸುವ ಮಹಾಸಂಗ್ರಾಮ. ಈ ದೇಶದಲ್ಲಿ ಪ್ರಜಾಪ್ರಭುತ್ವದ ಮೌಲ್ಯಗಳನ್ನು, ಭಾರತೀಯ ಸಂಸ್ಕೃತಿಯನ್ನು ಪರಂಪರೆಯನ್ನು ಉಳಿಸಿ ಬೆಳೆಸುವ ಅಧರ್ಮದ ವಿರುದ್ಧ ಹೋರಾಡುವ ಒಂದು ಮಹಾ ಸಂಗ್ರಾಮ ಎಂದರೆ ಅತೀಶಯೋಕ್ತಿ ಅಲ್ಲ. ಒಂದು ಕಡೆ ಧರ್ಮದ ಸ್ಥಾಪನೆಗಾಗಿ ಸಂಸ್ಕೃತಿ ಮತ್ತು ಪರಂಪರೆಯನ್ನು ಉಳಿಸುವುದಕ್ಕೋಸ್ಕರ ಭಾರತವನ್ನು ವಿಶ್ವದಲ್ಲೇ 3ನೇ ಅತಿದೊಡ್ಡ ಆರ್ಥಿಕ ಶಕ್ತಿಯಾಗಿ ರೂಪುಗೊಳ್ಳಬೇಕೆಂಬ ಸಂಕಲ್ಪವನ್ನು ಮಾಡಿರುವ ಭಾರತವನ್ನು ಪುನಃ ವಿಶ್ವಗುರುವನ್ನಾಗಿ ಮಾಡಬೇಕೆನ್ನುವ ಪ್ರತಿಜ್ಞೆಯೊಂದಿಗೆ ಕಳೆದ ಹತ್ತು ವರ್ಷಗಳಿಂದ ವಿಶ್ರಾಂತಿಯಿಲ್ಲದೆ ಅವಿರತ ಪ್ರಯತ್ನದಿಂದ ಸಾಧನೆಯನ್ನು ಮಾಡಿರುವ ನಮ್ಮೆಲ್ಲರ ನೆಚ್ಚಿನ ಪ್ರಧಾನ ಮಂತ್ರಿಗಳಾದಂತಹ ನರೇಂದ್ರ ಮೋದಿಜಿಯವರ ನೇತೃತ್ವದ ಬಿಜೆಪಿ ಮತ್ತು NDA ಧರ್ಮದ ಪರವಾಗಿದ್ದರೆ, ಇನ್ನೊಂದೆಡೆ ಈ ಭಾರತ ದೇಶವನ್ನು ಜಾತಿ ಜಾತಿಗಳ ಹೆಸರಿನಲ್ಲಿ ಭಾವನಾತ್ಮಕವಾಗಿ ವಿಭಜನೆ ಮಾಡುತ್ತಿರುವ ಅಲ್ಪ ಸಂಖ್ಯಾತರ ತುಷ್ಟಿಕರಣದ ಮೂಲಕ ಈ ದೇಶದ ಸಂಸ್ಕೃತಿ ಮತ್ತು ಪರಂಪರೆಯ ಮೇಲೆ ಪ್ರಹಾರವನ್ನು ಮಾಡುತ್ತಿರುವ ಸ್ವತಂತ್ರ ಭಾರತವನ್ನು 60 ವರ್ಷಗಳ ಕಾಲ ಕುಟುಂಬ ರಾಜಕಾರಣವನ್ನು ಮಾಡಿ ಈ ದೇಶದ ಸಂಪತನ್ನು ಲೂಟಿ ಹೊಡೆದಿರುವ ಕಾಂಗ್ರೆಸ್ ಪಕ್ಷ ಮತ್ತು ಅದರ ಜೊತೆಗಾರರದ I. N. D. I. Alliances.

ಇಂತಹ ಸಂಧರ್ಭದಲ್ಲಿ ಈ ದೇಶದಲ್ಲಿ ಧರ್ಮ ಉಳಿಯಬೇಕು ಪರಂಪರೆ ಮುಂದುವರಿಯಬೇಕು ಭವಿಷ್ಯದ 50 ವರ್ಷಗಳ “ವಿಕಸಿತ ಭಾರತ “, ಆತ್ಮ ನಿರ್ಭರ ಭಾರತ ಜಗದ್ಗುರುವಾಗಿ ವಿಶ್ವಕ್ಕೆ ಶಾಂತಿಯನ್ನು ನೀಡಬೇಕೆಂದರೆ ಮತ್ತೊಮ್ಮೆ ಮೋದಿಜಿಯವರು ಪ್ರಧಾನಮಂತ್ರಿಯಾಗಲೇಬೇಕು, ಬಿಜೆಪಿ ನೇತೃತ್ವದಲ್ಲಿ N. D. A ಈ ಬಾರಿ 400ಕ್ಕಿಂತ ಹೆಚ್ಚು ಸೀಟುಗಳನ್ನು ಗೆಲ್ಲಲೇಬೇಕೆನ್ನುವುದು ನಮ್ಮೆಲ್ಲ ಭಾರತೀಯರ ಸಂಕಲ್ಪ. ಅಯೋಧ್ಯೆಯ ಶ್ರೀರಾಮನ ಸಂಕಲ್ಪವೂ ಅದೇ.

300x250 AD

ಉತ್ತರ ಕನ್ನಡ ಲೋಕಸಭಾ ಕ್ಷೇತ್ರ ವಿಕಸಿತವಾಗಬೇಕು, ಅಭಿವೃದ್ಧಿಯಾಗಬೇಕು, ಒಂದು ಮಾದರಿ ಕ್ಷೇತ್ರವಾಗಬೇಕೆನ್ನುವುದು ನನ್ನ ಕನಸು. ನರೇಂದ್ರ ಮೋದಿಜಿ ಅವರ ನೇತೃತ್ವದ ಬಿಜೆಪಿಯ ಅತ್ಯಂತ ಹಿರಿಯರು ಸರಳ ಸಜ್ಜನಿಕೆಯಮೂರ್ತಿಗಳು, ರಾಜ್ಯದ ಮಾಜಿ ಶಿಕ್ಷಣ ಸಚಿವರು, ಈ ರಾಜ್ಯದ ಮಾಜಿ ವಿಧಾನಸಭಾ ಅಧ್ಯಕ್ಷರಾಗಿ ಇಡೀ ದೇಶದಲ್ಲಿ ತಮ್ಮ ಛಾಪನ್ನು ಮೂಡಿಸಿರುವ ವಿಶ್ವೇಶ್ವರ ಹೆಗಡೆ ಕಾಗೇರಿಯವರಿಗೆ ಲೋಕಸಭೆಗೆ ಸ್ಪರ್ಧಿಸಲು ಅವಕಾಶವನ್ನು ನೀಡಿರುತ್ತಾರೆ. ಗೀತೆಯಲ್ಲಿ ಭಗವಂತ ಶ್ರೀ ಕೃಷ್ಣ ಹೇಳಿದ ಹಾಗೆ “ನಿಮಿತ್ತ ಮಾತ್ರo ಸವ್ಯಸಾಚಿನ್” ಎಂಬಂತೆ ಬಿಜೆಪಿ ಪಕ್ಷ ವಿಶ್ವೇಶ್ವರ ಹೆಗಡೆಯವರಿಗೆ ಅವಕಾಶ ಕೊಟ್ಟಿದ್ದು,ಅದು ಪಕ್ಷದ ಎಲ್ಲಾ ಕಾರ್ಯಕರ್ತರಿಗೆ ಕೊಟ್ಟ ಅವಕಾಶ ಎಂದು ನಾನು ಭಾವಿಸಿದ್ದೇನೆ.

ಧರ್ಮದ ಗೆಲುವು ಆಗಬೇಕು. ಭಾರತ ದೇಶ ಜಗದ್ಗುರುವಾಗಬೇಕೆಂದರೆ ಈ ಬಾರಿ ಉತ್ತರ ಕನ್ನಡ ಲೋಕಸಭಾ ಕ್ಷೇತ್ರಕ್ಕೆ ನಾವೆಲ್ಲರೂ ಒಮ್ಮನಸ್ಸಿನಿಂದ ದುಡಿದು ಕಳೆದ ಬಾರಿ ಪಡೆದ ದಾಖಲೆಯ ಮತಕ್ಕಿಂತ ಹೆಚ್ಚು ಮತಗಳನ್ನು ಕೊಡುವುದರ ಮೂಲಕ ವಿಶ್ವೇಶ್ವರ ಹೆಗಡೆಯವರನ್ನು ದಾಖಲೆಯ ಮತಗಳಿಂದ ಆರಿಸಿ 18ನೇಯ ಲೋಕಸಭೆಯಲ್ಲಿ ಅವರು ಈ ಕ್ಷೇತ್ರದ ಧ್ವನಿಯಾಗಿ ಮೋದಿಜಿ ಅವರ ಜೊತೆ ನಿಂತು ವಿಕಸಿತ ಉತ್ತರ ಕನ್ನಡವನ್ನಾಗಿ ಮಾಡಬೇಕೆಂದು ನಾನು ಆಶಿಸುತ್ತೇನೆ ಮತ್ತು ಅವರಿಗೆ ಶುಭವನ್ನು ಕೋರುತ್ತೇನೆ.

Share This
300x250 AD
300x250 AD
300x250 AD
Back to top