Slide
Slide
Slide
previous arrow
next arrow

ಮಕ್ಕಳಲ್ಲಿ ಭಾವನಾತ್ಮಕ ಬೆಳವಣಿಗೆ ಆಗುವುದು ಮುಖ್ಯ: ಎಂ.ಎಚ್. ನಾಯ್ಕ್

300x250 AD

ಸಿದ್ದಾಪುರ: ದೈಹಿಕ ಮಾನಸಿಕ ಬೆಳವಣಿಗೆಯ ಜೊತೆ ಭಾವನಾತ್ಮಕ ವಿಕಾಸದತ್ತ ಶಿಕ್ಷಕರು ಹಾಗೂ ಪಾಲಕರು ಹೆಚ್ಚು ಗಮನ ಕೊಡಬೇಕಾಗಿದೆ. ಭಾವನಾತ್ಮಕ ಚಿಂತನೆಗಳು ಸಾಹಿತಿಗಳಿಂದ ದೊರೆಯಲು ಸಾಧ್ಯ. ಮಗುವಿನ ಮನಸ್ಸಿನಲ್ಲಿ ಉತ್ತಮ ಭಾವನೆ ಅರಳುವುದು ಅತೀ ಮುಖ್ಯವಾದದು ಎಂದು ಕ್ಷೇತ್ರ ಶಿಕ್ಷಣ ಅಧಿಕಾರಿ ಎಂ.ಎಚ್. ನಾಯ್ಕ ಹೇಳಿದರು.

ಅವರು ಸ್ಥಳೀಯ ಬಾಲಭವನದಲ್ಲಿ ನಿವೃತ್ತ ನೌಕರರ ಸಂಘ ಸಿದ್ದಾಪುರ ಮತ್ತು ಲಯನ್ಸ ಕ್ಲಬ್ ಸಿದ್ದಾಪುರ ಇವುಗಳ ಸಹಯೋಗದಲ್ಲಿ ಮಕ್ಕಳ ಬೇಸಿಗೆ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.

ಸಾಹಿತಿಗಳು ರಾಷ್ಟ್ರಪ್ರಶಸ್ತಿ ಪುರಸ್ಕೃತ ನಿವೃತ್ತ ಮುಖ್ಯ ಶಿಕ್ಷಕರೂ ಆದ ಜಿ.ಜಿ. ಹೆಗಡೆ ಬಾಳಗೋಡ ಅತಿಥಿಯಾಗಿ ಮಾತನಾಡಿ ಬಾಲ್ಯದ ಸವಿ ನೆನಪುಗಳನ್ನು ಮೆಲುಕು ಹಾಕುವುದರಿಂದ ನಮ್ಮ ಸಂತಸ ಹೆಚ್ಚಾಗಲು ಸಾಧ್ಯ ಎಂದು ಹೇಳಿದರು. ಇನ್ನೊಬ್ಬ ಅತಿಥಿಗಳಾದ ಕೇಂದ್ರ ಸಾಹಿತ್ಯ ಅಕಾಡೆಮಿ ಬಾಲ ಸಾಹಿತ್ಯ ಪ್ರಶಸ್ತಿ ಪುರಸ್ಕೃತ ಮಕ್ಕಳ ಸಾಹಿತಿ ಹಾಗೂ ರಾಷ್ಟ್ರಪ್ರಶಸ್ತಿ ಪುರಸ್ಕೃತ ನಿವೃತ್ತ ಮುಖ್ಯ ಶಿಕ್ಷಕ ತಮ್ಮಣ್ಣ ಬೀಗಾರ ಮಾತನಾಡಿ, ಮಗು ಹುಟ್ಟುತ್ತಲೇ ವಿಶ್ವಮಾನವ ಆಗಿರುತ್ತದೆ. ಇದರ ಪೋಷಣೆಗೆ ಪೂರಕವಾದ ವಾತಾವರಣ ಸಿಗುವಂತೆ ಎಲ್ಲರೂ ಕಾಳಜಿ ವಹಿಸಬೇಕು. ಅವರಿಗೆ ಅಂತಹ ಪರಿಸರ ಒದಗಿಸುವಲ್ಲಿ ಇಂತಹ ಶಿಬಿರಗಳು ಸಹಾಯಕ ಎಂದು ಹೇಳಿದರು.
ಅತಿಥಿಗಳಾಗಿ ಲಯನ್ಸ ಕ್ಲಬ್ ಅಧ್ಯಕ್ಷ ಆರ್.ಎಮ್. ಪಾಟೀಲ್ ಮಾತನಾಡಿ ಶಿಬಿರದ ಯಶಸ್ಸಿಗೆ ಮಕ್ಕಳ ಪಾಲಕರ ಸಹಕಾರ ತೀರಾ ಅಗತ್ಯ ಎಂದು ಹೇಳಿದರು. ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕ ಘಟಕ ಕೋಶಾಧ್ಯಕ್ಷ ಪ್ರಕಾಶ ಹೊಸೂರ ಮಾತನಾಡಿ ಮಕ್ಕಳ ಸರ್ವಾಂಗೀಣ ಅಭಿವೃದ್ಧಿಗೆ ಬೇಸಿಗೆ ಶಿಬಿರ ಸಹಾಯಕವೆಂದು ಹೇಳಿದರು. ಲಯನ್ಸ ಕ್ಲಬ್ ಮಾಜಿ ಅಧ್ಯಕ್ಷೆ ಶಾಮಲ ಹೆಗಡೆ ಹೂವಿನಮನೆ ಮಾತನಾಡಿ ಮಕ್ಕಳ ಉನ್ನತಿಗೆ ಜ್ಞಾನ ಹಾಗೂ ಜ್ಞಾನೇತರ ಚಟುವಟಿಗಳು ಅತ್ಯಂತ ಪ್ರಮುಖವಾದದು ಎಂದು ಹೇಳಿದರು.

300x250 AD

ಪಾಲಕರ ಪರವಾಗಿ ಪುಷ್ಪಲತಾ ನಾಯ್ಕ, ಎಮ್.ಟಿ. ಗೌಡ ಅವರು ಅಭಿಪ್ರಾಯ ವ್ಯಕ್ತಪಡಿಸಿದರು. ಲಯನ್ಸ ಕಾರ್ಯದರ್ಶಿ ಕುಮಾರ ಗೌಡರ್ ಮತ್ತು ನಿವೃತ್ತ ನೌಕರರ ಸಂಘದ ಉಪಾಧ್ಯಕ್ಷ ಎನ್. ವಿ. ಹೆಗಡೆ ಅವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಅಧ್ಯಕ್ಷತೆಯನ್ನು ನಿವೃತ್ತ ನೌಕರರ ಸಂಘದ ಅಧ್ಯಕ್ಷ ಸಿ.ಎಸ್ ಗೌಡರ್ ಹೆಗ್ಗೋಡಮನೆ ಅವರು ವಹಿಸಿ ಶಿಬಿರದ ಉದ್ದೇಶಗಳನ್ನು ವಿವರಿಸಿ ಶಿಬಿರದಲ್ಲಿ ಸಾಹಿತ್ಯ, ಕಲೆ, ಆರೋಗ್ಯ, ರಂಗಚಟುವಟಿಕೆ, ಚಿತ್ರಕಲೆ ಮುಂತಾದ ವಿಷಯಗಳನ್ನು ತಜ್ಞರಿಂದ ಒದಗಿಸಲಾಗುವುದು, ಅಲ್ಲದೇ ಒಂದು ದಿನ ಪೂರ್ತಿ ಹೊರ ಸಂಚಾರ ವ್ಯವಸ್ಥೆಯನ್ನು ಕೈಗೊಳ್ಳಲಿದ್ದು ಸ್ಥಳೀಯ ಇತಿಹಾಸ ಮತ್ತು ಸಂಸ್ಕೃತಿಯ ಕುರಿತು ಮಕ್ಕಳಿಗೆ ಅರಿವನ್ನು ಮೂಡಿಸಲಾಗುವುದು ಎಂದು ಹೇಳಿದರು. ಶಿಬಿರದ ಸಂಯೋಜನೆಯನ್ನು ಬಿ.ಸಿ.ಎಮ್ ತಾಲೂಕಾ ಅಧಿಕಾರಿ ಕೆ.ಕೆ. ಗಣಪತಿ ಹಾಗೂ ಸಹಯಕರಾದ ಅನಂತ ಮತ್ತು ವಿ.ಎಸ್ ಶೇಟ್ ಅವರು ಸಹಕರಿಸಿದರು. ಜಿ. ಎಮ್ ಕುಮಟಕರ್ ನಿರೂಪಿಸಿದರು.

Share This
300x250 AD
300x250 AD
300x250 AD
Back to top