Slide
Slide
Slide
previous arrow
next arrow

ಪರವಾನಿಗೆಯಿಲ್ಲದೆ ಮದ್ಯ ಸಾಗಾಟ: ಇಬ್ಬರ ಬಂಧನ

300x250 AD

ದಾಂಡೇಲಿ : ಯಾವುದೇ ಪರವಾನಿಗೆ ಇಲ್ಲದೆ ಅನಧಿಕೃತವಾಗಿ ಮದ್ಯ ಸಾಗಾಟ ಮಾಡುತ್ತಿದ್ದ ಇಬ್ಬರನ್ನು ಮಾಲು ಸಹಿತ ವಶಕ್ಕೆ ಪಡೆದ ಘಟನೆ ನಗರದ ಸಮೀಪದಲ್ಲಿರುವ ಜನತಾ ಕಾಲೋನಿಯ ಹತ್ತಿರ ನಡೆದಿದೆ.

ಜೋಯಿಡಾ ತಾಲೂಕಿನ ನಂದಿಗದ್ದೆಯ ಗುಂದ ಗ್ರಾಮದ ನಿವಾಸಿಗಳಾದ ಪೌಲೋ ಕೈತಾನ ಪೆರ್ನಾಂಡಿಸ್ ಮತ್ತು ಅಲೆಕ್ಸ್ ಡುಮ್ಮಿಂಗ್ ಪೇರೆರೊ ಎಂಬಿಬ್ಬರು ಕೆಎ:65, ಎಂ: 0706 ಸಂಖ್ಯೆಯ ಕಾರಿನಲ್ಲಿ ಯಾವುದೇ ಪರವಾನಿಗೆಯಿಲ್ಲದೆ ಅನಧಿಕೃತವಾಗಿ ಮದ್ಯ ಸಾಗಾಟ ಮಾಡುತ್ತಿರುವ ಖಚಿತ ಮಾಹಿತಿಯನ್ನು ಆಧರಿಸಿ ದಾಂಡೇಲಿ ಗ್ರಾಮೀಣ ಪೊಲೀಸರು ಪಿಎಸ್ಐ ಕೃಷ್ಣ ಅರಕೇರಿ ಅವರ ನೇತೃತ್ವದಲ್ಲಿ ತಪಾಸಣೆ ನಡೆಸಿದಾಗ, ಅನಧಿಕೃತವಾಗಿ ಮದ್ಯ ಸಾಗಾಟ ಮಾಡಿರುವುದು ಬೆಳಕಿಗೆ ಬಂದಿದೆ. ಅನಧಿಕೃತವಾಗಿ ಸಾಗಾಟ ಮಾಡುತ್ತಿದ್ದ ಮದ್ಯವನ್ಬು ಮತ್ತು ಈ ಕೃತ್ಯವನ್ನು ಎಸಗಿದ ಇಬ್ಬರನ್ನು ವಶಕ್ಕೆ ಪಡೆಯಲಾಗಿದೆ. ವಶಕ್ಕೆ ಪಡೆಯಲಾದ ಮಧ್ಯದ ಅಂದಾಜು ಬೆಲೆ 17,472 ರೂ ಎಂದು ಅಂದಾಜಿಸಲಾಗಿದೆ. ಈ ಬಗ್ಗೆ ದಾಂಡೇಲಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಮುಂದಿನ ಕ್ರಮವನ್ನು ಕೈಗೊಳ್ಳಲಾಗಿದೆ.

300x250 AD
Share This
300x250 AD
300x250 AD
300x250 AD
Back to top