ಶಿರಸಿ: ರಾಷ್ಟ್ರೀಯತೆ, ಹಿಂದುತ್ವದೆಡೆ ಕ್ಷೇತ್ರದ ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯಮಾಡಿದ ಸಂಸದ ಅನಂತಕುಮಾರ ಹೆಗಡೆ ಅವರ ಬೆಂಬಲದೊಂದಿಗೆ ನಾವಿಬ್ಬರೂ ಜೋಡೆತ್ತಿನಂತೆ ಕೆಲಸ ಮಾಡಿ ಚುನಾವಣೆ ಗೆಲ್ಲಲಿದ್ದೇವೆ ಎಂದು ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.
ಟಿಕೆಟ್ ಘೋಷಣೆದ ಹಿನ್ನೆಲೆಯಲ್ಲಿ ಸೋಮವಾರ ನಗರದಲ್ಲಿ ಪತ್ರಕರ್ತರ ಜತೆ ಮಾತನಾಡಿದ ಅವರು, ಅನಂತಕುಮಾರ ಹೆಗಡೆ ಅವರು ಕ್ಷೇತ್ರವನ್ನು ನಿರಂತರವಾಗಿ ಪ್ರತಿನಿಧಿಸಿ ಬಿಜೆಪಿಗೆ ಗೆಲುವು ತಂದು ಕೊಟ್ಟಿದ್ದಾರೆ. ಜತೆಗೆ, ಕೇಂದ್ರ ಸಚಿವರಾಗಿ ದೇಶದಲ್ಲಿ ಕ್ಷೇತ್ರದಲ್ಲಿ ಅವರದ್ದೇ ಆದ ವಿಶೇಷ ಕಲ್ಪನೆಯೊಂದಿಗೆ ಅಭಿವೃದ್ಧಿಗೆ ಕೆಲಸ ಮಾಡಿದ್ದಾರೆ. ಹೀಗಾಗಿ ಅವರ ಜೊತೆ ಮಾತನಾಡಿ ಅವರ ಸಲಹೆ ಸೂಚನೆ ಪಡೆದು ಮುಂದುವರಿಯಲಿದ್ದೇನೆ. ನಾವು ಜೊತೆಯಾಗಿ ಕೆಲಸ ಮಾಡಿ ನಮ್ಮ ಕ್ಷೇತ್ರದಲ್ಲಿ ದಾಖಲೆಯ ಮತದಿಂದ ಗೆಲ್ಲುವ ಪ್ರಯತ್ನ ಮಾಡುತ್ತೇವೆ. ಮುಂಬರುವ ಚುನಾವಣೆಯಲ್ಲಿ ಅನಂತಕುಮಾರ್ ಬೆಂಬಲ ಪಡೆದು ಮತ್ತೊಮ್ಮೆ ಮೋದಿ ಪ್ರಧಾನಿಯನ್ನಾಗಿಸಲು ಒಟ್ಟಾಗಿ ಪ್ರಯತ್ನಿಸುತ್ತೇವೆ ಎಂದರು.
40 ವರ್ಷದ ರಾಜಕಾರಣದಲ್ಲಿ ಶಾಸಕನಾಗಿ, ಸಚಿವನಾಗಿ, ಸ್ಪೀಕರ್ ಆಗಿ ವಿವಿಧ ಜವಾಬ್ದಾರಿಗಳನ್ನು ನಿರ್ವಹಿಸಿದ್ದೇನೆ. ಇದೀಗ ಲೋಕಸಭಾ ಚುನಾವಣೆ ಅಭ್ಯರ್ಥಿಯಾಗಿ ಅವಕಾಶ ನೀಡುವ ಮೂಲಕ ದೊಡ್ಡ ಜವಾಬ್ದಾರಿ ವಹಿಸಿದ್ದಾರೆ. ನಾನು ಮಾಡಬೇಕಾದ ಜವಾಬ್ದಾರಿ ಅರಿತಿದ್ದೇವೆ, ನನ್ನ ಬಗ್ಗೆ ಜನತೆಗೂ ಸ್ಪಷ್ಟವಿದೆ. ಮುಂಬರುವ ದಿನಗಳಲ್ಲಿ ಬಿಜೆಪಿ ಪರಿವಾರದವರೆಲ್ಲ ಒಂದಾಗಿ ಎಲ್ಲರ ಸಲಹೆ ಬಡೆದು ದೇಶ ಪಟ್ಟದಲ್ಲಿ ಕೆಲಸ ಮಾಡಲು ಪ್ರಯತ್ನ ಮಾಡುತ್ತೇನೆ ಎಂದರು. ಕಾಂಗ್ರೆಸ್ ಬಗ್ಗೆ ಜನರಿಗೆ ವಿಶ್ವಾಸ ಇಲ್ಲದ ಸಮಯದಲ್ಲಿ ಕಾಂಗ್ರೆಸ್ ತಿರಸ್ಕರಿಸುವ ಮನಸ್ತಿತಿಯಲ್ಲಿ ಜನರಿದ್ದಾರೆ. ಹೀಗಿರುವಾಗ ಯಾವ ಅಭ್ಯರ್ಥಿ ನಿಲ್ಲಿಸಿದರೂ ಜನರು ಕಾಂಗ್ರೆಸ್‌ಗೆ ತಕ್ಕ ಉತ್ತರ ನೀಡುವ ಮೂಲಕ ಬಿಜೆಪಿ ಬೆಂಂಬಲಿಸಲಿದ್ದಾರೆ ಎಂದರು.