Slide
Slide
Slide
previous arrow
next arrow

ಸೇವಾದಳ ಶತಮಾನೋತ್ಸವ; ‘ಮಕ್ಕಳ ನಾಯಕತ್ವ ಶಿಬಿರ’ ಸಂಪನ್ನ

300x250 AD

ಶಿರಸಿ: ನಗರದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಗಾಂಧಿನಗರದಲ್ಲಿ ಮಾ.19, ಮಂಗಳವಾರದಂದು ಮಕ್ಕಳ ನಾಯಕತ್ವ ತರಬೇತಿ ಶಿಬಿರ ಸೇವಾದಳ ಶತಮಾನೋತ್ಸವ ಆಚರಣೆಯ ಅಂಗವಾಗಿ ನಡೆದ ಶಿಬಿರ ಅತ್ಯಂತ ಯಶಸ್ವಿಯಾಗಿ ಸಂಪನ್ನಗೊಂಡಿತು.

ಆರಂಭದಲ್ಲಿ ಜಿಲ್ಲಾ ಸಂಘಟಕ ರಾಮಚಂದ್ರ ಹೆಗಡೆ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಭಾರತ ಸೇವಾದಳ ಹಾಗೂ ಶಿಬಿರದ ಕುರಿತು ಮಾಹಿತಿಯನ್ನು ನೀಡಿದರು. ಈ ಸಂದರ್ಭದಲ್ಲಿ ಭಾರತ ಸೇವಾದಳ ಜಿಲ್ಲಾ ಕಾರ್ಯದರ್ಶಿ ಪ್ರೊ. ಕೆ. ಎನ್. ಹೊಸಮನಿ ಮುಖ್ಯ ಅತಿಥಿಯಾಗಿ ಮಾತನಾಡುತ್ತಾ,‌ ಸೇವೆಯ ಮಹತ್ವವನ್ನು ಸಾರುವ ದೃಷ್ಟಾಂತವನ್ನು ತಿಳಿಸಿ ಮಕ್ಕಳು ಚಿಕ್ಕಂದಿನಿಂದ ಬೆಳೆಸಿಕೊಳ್ಳುವ ಮೌಲ್ಯಗಳು ಹಾಗೂ ಸದ್ವಿದ್ಯೆ ಬದುಕಿನಲ್ಲಿ ಬರುವ ಏರಿಳಿತಗಳನ್ನು ಎದುರಿಸಲು ಸಹಾಯವಾಗುತ್ತವೆ. ನಾಯಕತ್ವ ಎಂದರೆ ಅಧಿಕಾರ, ಅಹಂಕಾರ ಅಲ್ಲ ಎಂದು ನುಡಿದರು. ತಾಲೂಕಾ ಕೋಶಾಧ್ಯಕ್ಷ ಕುಮಾರ್ ಎಸ್. ನಾಯ್ಕ್ ಮತ್ತೋರ್ವ ಮುಖ್ಯ ಅತಿಥಿಗಳಾಗಿ ಆಗಮಿಸಿ, ಸೇವೆಗಾಗಿ ಬಾಳು ಎಂಬ ಧ್ಯೇಯೋದ್ದೇಶವನ್ನು ಹೊಂದಿದ ಸೇವಾದಳ ಶಾಖೆಗೆ ಸೇರಿದ ಮಕ್ಕಳು ಸಮಾಜಮುಖಿ ಕೆಲಸಗಳನ್ನು ಮಾಡಲು ಸಂಕಲ್ಪ ಮಾಡಬೇಕು ಸೇವೆಯಲ್ಲಿ ಸಿಗುವ ಆನಂದ ಮತ್ತು ಯಾವುದರಿಂದಲೂ ಸಿಗಲಾರದು ಎಂದು ತಿಳಿಸಿಕೊಟ್ಟರು. ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಲಾ ಮುಖ್ಯಾಧ್ಯಾಪಕರಾದ ಬಸವರಾಜ್ ಜಿ. ಸೇವಾದಳ ಶಾಖೆಗೆ ಸೇರಿ ತರಬೇತಿ ಪಡೆಯುತ್ತಿರುವ ಮಕ್ಕಳು ಮುಂದಿನ ನಾಗರಿಕರಾಗಲು ನಾಯಕತ್ವ ಗುಣ ಬೆಳೆಸಿಕೊಳ್ಳಬೇಕು ನಾಯಕತ್ವ ಗುಣವನ್ನು ಸಮಾಜದ ಅಭಿವೃದ್ಧಿಗಾಗಿ ಸಂದರ್ಭಾನುಸಾರ ಬಳಸಬೇಕೆಂಬ ಕಿವಿ ಮಾತು ಹೇಳಿದರು. ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕಿ ಹಾಗೂ ಜಿಲ್ಲಾ ಸಮಿತಿ ಸದಸ್ಯೆ ಶ್ರೀಮತಿ ಸಾವಿತ್ರಿ ಎನ್. ಭಟ್ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು. ಮಕ್ಕಳಿಂದ ಸರ್ವಧರ್ಮೀಯ ಪ್ರಾರ್ಥನೆಯೊಂದಿಗೆ ಪ್ರಾರಂಭವಾದ ಈ ಕಾರ್ಯಕ್ರಮವನ್ನು ಶಿಕ್ಷಕಿ ಶ್ರೀಮತಿ ರಾಜೇಶ್ವರಿ ಹೆಗಡೆ ನಿರ್ವಹಿಸಿ, ವಂದಿಸಿದರು. ಎಲ್ಲಾ ಮಕ್ಕಳಿಗೆ ಪ್ರಶಸ್ತಿ ಪತ್ರಗಳನ್ನು ವಿತರಿಸಲಾಯಿತು. ಈ ಶಿಬಿರದಲ್ಲಿ ಶಾಲೆಯ ಶಿಕ್ಷಕ ವೃಂದದವರು ಹಾಗೂ ಅಡುಗೆ ಸಿಬ್ಬಂದಿಗಳು ಸಹಕರಿಸಿ ಕಾರ್ಯಕ್ರಮ ಯಶಸ್ವಿಗೊಳಿಸಿದರು. ಇದೇ ಸಂದರ್ಭದಲ್ಲಿ ಈ ಶೈಕ್ಷಣಿಕ ಸಾಲಿನ ಏಳನೇ ತರಗತಿಯ ವಿದ್ಯಾರ್ಥಿಗಳನ್ನು ಹಾರ್ದಿಕವಾಗಿ ಬೀಳ್ಕೊಡಲಾಯಿತು.

300x250 AD
Share This
300x250 AD
300x250 AD
300x250 AD
Back to top