Slide
Slide
Slide
previous arrow
next arrow

ಜೋಯಿಡಾ ದೇವಸ್ಥಾನಗಳಿಗೆ ವಿಶೇಷ ಅನುದಾನ ಮಂಜೂರು

300x250 AD

ಜೋಯಿಡಾ : ಮುಖ್ಯಮಂತ್ರಿಗಳ ವಿಶೇಷ ಅನುದಾನದಡಿಯಲ್ಲಿ ಜೋಯಿಡಾ ತಾಲೂಕಿನ ನಾಲ್ಕು ದೇವಸ್ಥಾನಗಳಿಗೆ ಒಟ್ಟು 19 ಲಕ್ಷ ರೂಪಾಯಿ ಅನುದಾನವನ್ನು ಶಾಸಕರಾದ ಆರ್.ವಿ.ದೇಶಪಾಂಡೆ ಮಂಜೂರುಗೊಳಿಸಿದ್ದಾರೆ ಎಂದು ಶಾಸಕರ ಕಾರ್ಯಾಲಯವು ಮಂಗಳವಾರ ಮಾಧ್ಯಮಕ್ಕೆ ನೀಡಿದ ಪ್ರಕಟಣೆಯಲ್ಲಿ ತಿಳಿಸಿದೆ.

ತಾಲೂಕಿನ ಚಾಂದೇವಾಡಿಯಲ್ಲಿರುವ ಶ್ರೀ ಹನುಮಾನ್ ದೇವಸ್ಥಾನಕ್ಕೆ ರೂ.3 ಲಕ್ಷ,  ಬಜಾರಕುಣಂಗ ಗ್ರಾಮದ ಶ್ರೀ ರಾಮಲಿಂಗ ದೇವಸ್ಥಾನಕ್ಕೆ ರೂ.3 ಲಕ್ಷ, ಸಂತ್ರಿಯಲ್ಲಿರುವ ಶ್ರೀ. ನಾಗನಾಥ ದೇವಸ್ಥಾನಕ್ಕೆ ರೂ.3 ಲಕ್ಷ ಮತ್ತು ಜೋಯಿಡಾದ ಶ್ರೀ ಮಹಾಗಣಪತಿ ದೇವಸ್ಥಾನಕ್ಕೆ ರೂ.10 ಲಕ್ಷ ಅನುದಾನವನ್ನು ಶಾಸಕರಾದ ಆರ್.ವಿ.ದೇಶಪಾಂಡೆ ಮಂಜೂರು ಮಾಡಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

300x250 AD
Share This
300x250 AD
300x250 AD
300x250 AD
Back to top