Slide
Slide
Slide
previous arrow
next arrow

ಕುಣಬಿಗಳನ್ನು ಪ.ಪಂಗಡಕ್ಕೆ ಸೇರಿಸುವಂತೆ ಪ್ರಧಾನಿಗೆ ದೇಶಪಾಂಡೆ ಪತ್ರ

300x250 AD

ಹಳಿಯಾಳ : ‌ಕುಣಬಿ ಜನಾಂಗವನ್ನು ಪರಿಶಿಷ್ಠ ಪಂಗಡಕ್ಕೆ ಸೇರಿಸಬೇಕೆಂದು ಪ್ರಧಾನ‌ ಮಂತ್ರಿಯವರಿಗೆ ಶಾಸಕರು ಹಾಗೂ ರಾಜ್ಯ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷರಾದ ಆರ್.ವಿ.ದೇಶಪಾಂಡೆ ಲಿಖಿತ ಪತ್ರ ಬರೆದಿದ್ದಾರೆ.

ಪ್ರಧಾನಿಯವರಿಗೆ ಬರೆದ ಪತ್ರದಲ್ಲಿ  ಬುಡಕಟ್ಟು ಕುಣಬಿ ಸಮುದಾಯದವರು ಜೋಯಿಡಾದ ಮೂಲ ನಿವಾಸಿಗಳು. ಇವರು ಅರಣ್ಯವಾಸಿಗಳು, ಪ್ರಕೃತಿಯ ಆರಾಧಕರು. ಅರಣ್ಯವನ್ನು ಉಳಿಸಿ,ಬೆಳೆಸಿ, ವನ್ಯಪ್ರಾಣಿ, ಗಿಡ, ಮರಗಳನ್ನು ಪೂಜಿಸಿ ಆರಾಧಿಸುತ್ತಾ ತಮ್ಮದೇ ಆದ ಭಾಷೆ ಸಾಹಿತ್ಯ, ಸಂಸ್ಕೃತಿ ಜಾನಪದ ಕಲೆ ಸಂರಕ್ಷಿಸಿದ್ದಾರೆ. ಅರಣ್ಯ ಪ್ರದೇಶದಲ್ಲಿ ಸಣ್ಣ ಕಿರು ಉತ್ಪನ್ನ ಸಂಗ್ರಹ, ಕುಂಬ್ರಿ ಜಮೀನು, ಅರಣ್ಯ ಅತಿಕ್ರಮಣ ಜಮೀನು, ಸಾಗುವಳಿ ಮಾಡಿಕೊಂಡು ಜೀವನ ಸಾಗಿಸುತ್ತಾರೆ. ಕುಣಬಿಗಳ ಹಬ್ಬ ಹೋಳಿ, ದೀಪಾವಳಿ, ಪುಗಡಿ, ಸೇರಿದಂತೆ ಮದುವೆ ಸಂದರ್ಭದಲ್ಲಿ ಬುಡಕಟ್ಟು ಸಂಸ್ಕೃತಿಯಲ್ಲಿ ಆಚರಿಸುತ್ತಾರೆ.

ಸಾಮಾಜಿಕ ಶೈಕ್ಷಣಿಕ, ಆರ್ಥಿಕವಾಗಿ ಹಿಂದುಳಿದಿರುವ ಕುಣಬಿಗಳು ಸಣ್ಣ ಸಣ್ಣ ಗುಡಿಸಲಿನಲ್ಲಿ ಬದುಕು ಕಟ್ಟಿಕೊಂಡು ಜೀವನ ಮಾಡುತ್ತಿದ್ದು, ಉಪ ಜೀವನಕ್ಕಾಗಿ ಗೆಡ್ಡೆಗೆಣಸುಗಳನ್ನು ಬೆಳೆಸುತ್ತಾರೆ. ಕುಣಬಿಗಳನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕೆಂದು ಕಳೆದ ಅನೇಕ ವರ್ಷಗಳಿಂದಲೂ ನಿರಂತರವಾಗಿ ಹೋರಾಟ ಮಾಡುತ್ತಾ ಬಂದ್ದಿದ್ದಾರೆ.
ನೆರೆ ರಾಜ್ಯ ಗೋವಾದ ಕುಣಬಿಗಳನ್ನು 2003 ರಲ್ಲಿ ಪರಿಶಿಷ್ಠ ಪಂಗಡಕ್ಕೆ ಸೇರಿಸಲಾಗಿದೆ. ಗೋವಾ ರಾಜ್ಯದ ಕುಣಬಿಗಳಿಗೂ ಮತ್ತು ಕರ್ನಾಟಕದ ಉತ್ತರ ಕನ್ನಡ ಜಿಲ್ಲೆಯಲ್ಲಿ ಸೇರಿರುವ ಕುಣಬಿಗಳಿಗೆ ಅವಿನಾಭಾವ ಸಂಬಂಧಗಳಿವೆ.

300x250 AD

ಜೋಯಿಡಾದಲ್ಲಿರುವ ಕುಣಬಿಗಳು ನೆರೆಯ ಗೋವಾ ರಾಜ್ಯದಿಂದ ವಲಸೆ ಬಂದಿರುತ್ತಾರೆ.‌ ಈಗಾಗಲೇ ಕುಣಬಿಗಳನ್ನು ಪರಿಶಿಷ್ಟ ಪಂಗಡಕ್ಕೆ ಸೇರ್ಪಡೆ ಮಾಡಲು ರಾಜ್ಯ ಸರ್ಕಾರ ಕುಣಬಿಗಳ ಕುಲಶಾಸ್ತ್ರೀಯ ಅಧ್ಯಯನ ಮಾಡಿ ದಿನಾಂಕ : 10-10-2017 ರಲ್ಲಿ ರಾಜ್ಯ ಸರ್ಕಾರದಿಂದ ಕೇಂದ್ರ ಸರ್ಕಾರಕ್ಕೆ ವರದಿಯನ್ನು ಸಲ್ಲಿಸಲಾಗಿದೆ.  ಪರಿಶಿಷ್ಠ ಪಂಗಡಕ್ಕೆ ಸೇರಿಸಬೇಕಾದ ಎಲ್ಲಾ ಗುಣಲಕ್ಷಣ ಇರುವ ಕುಣಬಿಗಳನ್ನು ಸರ್ಕಾರ ಶೀಘ್ರದಲ್ಲಿ ಪರಿಶಿಷ್ಠ ಪಂಗಡಕ್ಕೆ ಸೇರಿಸಬೇಕಾಗಿದೆ.

ವಿಶೇಷ ಆಧ್ಯತೆಯಡಿ ಕುಣಬಿಗಳನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕೆಂದು ಆರ್.ವಿ.ದೇಶಪಾಂಡೆ ಪತ್ರದಲ್ಲಿ ವಿನಂತಿಸಿದ್ದಾರೆ.

Share This
300x250 AD
300x250 AD
300x250 AD
Back to top