ಸಿದ್ದಾಪುರ: ಕೇಂದ್ರ ಸರಕಾರದ ಅನುಮೊದನೆ ಮೇರೆಗೆ, ಖಾಸಗಿ ಸಂಸ್ಥೆ ಮೂಲಕ ಶ್ರೀಲಂಕಾದಿಂದ 5 ಲಕ್ಷ ಟನ್ ಅಡಿಕೆ ಆಮದು ಮಾಡಿಕೊಳ್ಳುವ ನೀತಿ ಖಂಡನಾರ್ಹ. ಕೇಂದ್ರ ಸರಕಾರದ ಅಡಿಕೆ ಆಮದು ನೀತಿಯನ್ನು ಕೈ ಬಿಡಬೇಕೆಂದು ಸಾಮಾಜಿಕ ಹೋರಾಟಗಾರ ರವೀಂದ್ರ ನಾಯ್ಕ ಕೇಂದ್ರ ಸರಕಾರಕ್ಕೆ ಆಗ್ರಹಿಸಿದ್ದಾರೆ.
ಕೇಂದ್ರ ಸರಕಾರದ ಅಡಿಕೆ ಆಮದು ನೀತಿಯಿಂದ ಕರಾವಳಿ ಮತ್ತು ಮಲೆನಾಡು ಅಡಿಕೆ ಬೆಳೆಗಾರರು ಆರ್ಥಿಕ ಸಂಕಷ್ಟಕ್ಕೆ ಒಳಗಾಗಿ ಮುಂದಿನ ದಿನಗಳಲ್ಲಿ ಅಡಿಕೆ ಬೆಳೆಗಾರರು ಸಂಕಷ್ಟಕ್ಕೆ ಒಳಗಾಗುವರೆಂದು ಅವರು ತಿಳಿಸಿದ್ದಾರೆ.
ಭಾರತದಲ್ಲಿ 7.7ಲಕ್ಷ ಹೇಕ್ಟರ್ ಪ್ರದೇಶದಲ್ಲಿ 14 ಲಕ್ಷ ಟನ್ ಅಡಿಕೆ ಬೆಳೆಯುತ್ತಿದ್ದು, ಅವುಗಳಲ್ಲಿ ಕರ್ನಾಟಕದಲ್ಲಿ ಅರ್ಧಕ್ಕಿಂತ ಹೆಚ್ಚು ಅಡಿಕೆ ಬೆಳೆಯುತ್ತಿದ್ದಾರೆ. ಕೇಂದ್ರ ಸರಕಾರದ ತಪ್ಪಾದ ಅಡಿಕೆ ನೀತಿಯಿಂದ ಭಾರತ ದೇಶದ ಅಡಿಕೆ ಅಂತರಾಷ್ಟ್ರೀಯ ಮಟ್ಟದಲ್ಲಿ ಕುಸಿತವಾಗುವುದೆಂದು ಆತಂಕವನ್ನು ವ್ಯಕ್ತಪಡಿಸಿದರು.
ಅಡಿಕೆ ಬೆಳೆಗಾರರಿಗೆ ನಷ್ಟ: ಬ್ರಿಟನ್ ಮೂಲದ ಎಸ್.ರಾಮ್ ಮತ್ತು ಎಮ್.ರಾಮ್ ಎಂಬ ಕಂಪನಿ ಹಾಗೂ ಶ್ರೀಲಂಕಾ ಮೂಲದ ಪ್ರೈಮ್ ಸ್ಟಾರ್ ಪ್ರೈವೇಟ್ ಲೀಮಿಟೆಡ್ ವ್ಯಾಪಾರಿ ಸಂಸ್ಥೆಯೊಂದಿಗೆ ಒಡಂಬಡಿಕೆಯಾಗಿದ್ದು ಇರುತ್ತದೆ. ಒಡಂಬಡಿಕೆಯಂತೆ ಶ್ರೀಲಂಕಾದಿಂದ ಕಡಿಮೆ ಬೆಲೆಯ ೫ ಲಕ್ಷ ಟನ್ ಅಡಿಕೆ ಆಮದು ಆಗುವುದರಿಂದ ದೇಶಿಯ ಅಡಿಕೆಯ ಬೆಲೆ ಕುಸಿಯುವುದು. ಇದರಿಂದ ಅಡಿಕೆ ಬೆಳೆಗಾರರ ಆರ್ಥಿಕ ಸ್ಥಿತಿಯಲ್ಲಿ ಅಪಾರ ಪ್ರಮಾಣದ ನಷ್ಟವಾಗುವುದೆಂದು ರವೀಂದ್ರ ನಾಯ್ಕ ಹೇಳಿದರು.